* ಬಿಹಾರದಲ್ಲಿ ಅಮಾನವೀಯ ಕೃತ್ಯ
* ಪುಟ್ಟ ಕಂದನ ಮೇಲೆ ಸಾಮೂಹಿಕ ಅತ್ಯಾಚಾರ
* ಅಮಾಯಕ ಬಾಲಕಿಯ ಮೃತದೇಹ ನೋಡಿ ಎಲ್ಲರಿಗೂ ಶಾಕ್
ಪಾಟ್ನಾ(ಮಾ.21): ದೆಹಲಿಯ ನಿರ್ಭಯಾ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬಿಳಿಸಿತ್ತು. ಆದರೀಗ ಇಂತಹುದೇ ಕ್ರೌರ್ಯದ ಘಟನೆ ಬಿಹಾರದ ಬಂಕಾ ಜಿಲ್ಲೆಯಿಂದ ಬೆಳಕಿಗೆ ಬಂದಿದೆ. 8 ವರ್ಷದ ಬಾಲಕಿ ತನ್ನ ಸ್ನೇಹಿತರೊಂದಿಗೆ ಹೋಳಿ ಆಡುತ್ತಿದ್ದ ವೇಳೆ ಕೆಲ ಹುಡುಗರು ಅಲ್ಲಿಗೆ ಬಂದು ಹುಡುಗಿಯನ್ನು ಕರೆದುಕೊಂಡು ಹೋಗಿದ್ದಾರೆ. ಈ ಕಾಮುಕರು ಮೊದಲು ಸಾಮೂಹಿಕ ಅತ್ಯಾಚಾರವೆಸಗಿದ್ದು, ಸಾಲದೆಂಬಂತೆ ಅಮಾಯಕ ಬಾಲಕಿಯ ಕಣ್ಣುಗಳನ್ನು ಕಿತ್ತು ಹಾಕಿದ್ದಾರೆ. ಬಳಿಕ ಆತನನ್ನು ಆಕೆಯ ಹತ್ಯೆಗೈದು ಬಟ್ಟೆಗಳನ್ನು ತೆಗೆದು ಮರಳಿನ ಕೆಳಗೆ ಮೃತದೇಹವನ್ನು ಹೂತು ಹಾಕಿದ್ದಾರೆ.
ಅವರು ಅಕ್ಕನನ್ನು ಕರೆದುಕೊಂಡು ಹೋದರು, ಅಳುತ್ತಾ ಮಾಹಿತಿ ಕೊಟ್ಟ 5 ವರ್ಷದ ತಮ್ಮ
ವಾಸ್ತವವಾಗಿ, ಈಹೃದಯ ವಿದ್ರಾವಕ ಘಟನೆಯು ಬಂಕಾದ ಚಂದನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶನಿವಾರ ಮಧ್ಯಾಹ್ನ ಸಹೋದರ ಹಾಗೂ ಸ್ನೇಹಿತರೊಂದಿಗೆ ಹೋಳಿ ಆಡಲು ತೆರಳಿದ್ದ ಬಾಲಕಿಯನ್ನು ಕೆಲವರು ಅಪಹರಿಸಿದ್ದಾರೆ. ಇದಾದ ಬಳಿಕ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ. ಅಪಹರಣದ ವೇಳೆ ಸ್ಥಳದಲ್ಲೇ ಇದ್ದ ಸಂತ್ರಸ್ತೆಯ 5 ವರ್ಷದ ಸಹೋದರ ಅಳುತ್ತಾ ಮನೆಗೆ ತಲುಪಿ ಕುಟುಂಬ ಸದಸ್ಯರಿಗೆ ಇಡೀ ಕಥೆಯನ್ನು ಹೇಳಿದ್ದಾನೆ. ನಾವು ಹೋಳಿ ಆಡುತ್ತಿದ್ದಾಗ ಕೆಲವು ಹುಡುಗರು ಇ-ರಿಕ್ಷಾದಲ್ಲಿ ಬಂದು ದೀದಿಯನ್ನು ಬಲವಂತವಾಗಿ ಕರೆದೊಯ್ದು ಕರೆದುಕೊಂಡು ಹೋದರು. ನಾನು ಹಿಂದೆಯೇ ಓಡಿದೆ, ಆದರೆ ಇದ್ದಕ್ಕಿದ್ದಂತೆ ಅವರು ಕಣ್ಮರೆಯಾದರು ಎಂದಿದ್ದಾನೆ.
ಅಮಾಯಕ ಬಾಲಕಿಯ ಮೃತದೇಹ ನೋಡಿ ಎಲ್ಲರಿಗೂ ಶಾಕ್
ಘಟನೆ ಬೆಳಕಿಗೆ ಬಂದ ತಕ್ಷಣ ಸಂತ್ರಸ್ತೆಯ ಕುಟುಂಬದವರು ಬಾಲಕಿಯನ್ನು ಸಾಕಷ್ಟು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ನಂತರ ರಾತ್ರಿ 11 ಗಂಟೆ ಸುಮಾರಿಗೆ ಗ್ರಾಮದ ಜನರು ಹುಡುಗಿಯನ್ನು ಹುಡುಕಿಕೊಂಡು ಚಂದನ್ ರೈಲು ನಿಲ್ದಾಣದ ಬಳಿ ತಲುಪಿದ್ದಾರೆ. ಚರಂಡಿಯೊಂದರ ಬಳಿ ಮೂರ್ನಾಲ್ಕು ನಾಯಿಗಳು ಓಡಾಡುತ್ತಿದ್ದವು. ಕೆಲವರಿಗೆ ಅನುಮಾನ ಬಂದು ಚರಂಡಿಗೆ ಬಗ್ಗಿ ನೋಡಿದಾಗ ಮರಳಿನಡಿಯಲ್ಲಿ ಬಾಲಕಿಯ ಶವ ಹೂತು ಹೋಗಿರುವುದು ಕಂಡು ಬಂದಿದೆ. ಇದನ್ನು ನೋಡಿ ಎಲ್ಲರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಬಾಲಕಿಯ ಮೈಮೇಲೆ ಒಂದೇ ಒಂದು ಬಟ್ಟೆಯೂ ಇರಲಿಲ್ಲ ಅಲ್ಲದೇ ದೇಹದಿಂದ ರಕ್ತ ಸುರಿಯುತ್ತಿತ್ತು. ಎರಡೂ ಕಣ್ಣುಗಳು ತೆರೆದಿದ್ದವು. ಮೃತದೇಹ ನೋಡಿ ಮನೆಯವರು ಕಿರುಚಿಕೊಂಡಿದ್ದಾರೆ. ಇದಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಪ್ರಕರಣದಲ್ಲಿ ಮೂವರ ಬಂಧನ
ಭೀಕರ ಘಟನೆಯ ಸುದ್ದಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಕುಟುಂಬದವರ ಅನುಮಾನದ ಆಧಾರದ ಮೇಲೆ ಪೊಲೀಸರು ಗ್ರಾಮದ ಮೂವರನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿರುವ ಬೆಲ್ಹಾರ್ ಎಸ್‌ಡಿಪಿಒ ಪ್ರೇಮಚಂದ್ರ ಸಿಂಗ್, ಸಂಪೂರ್ಣ ಘಟನೆ ಮಾಹಿತಿ ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಹೇಳಿದ್ದಾರೆ. ಇ-ರಿಕ್ಷಾದ ಮಾಲೀಕರು ಇನ್ನೂ ತಲೆಮರೆಸಿಕೊಂಡಿದ್ದು, ಅವರ ಹುಡುಕಾಟ ನಡೆಯುತ್ತಿದೆ.