ತಾಲಿಬಾನ್ ಗೆಲುವು ಆಚರಿಸುವ ಭಾರತೀಯ ಮುಸ್ಲಿಮರು ಅಪಾಯಕಾರಿ; ನಾಸಿರುದ್ದೀನ್ ಶಾ!

By Suvarna NewsFirst Published Sep 2, 2021, 3:39 PM IST
Highlights
  • ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಗೆಲುವಿಗೆ ಭಾರತೀಯ ಹಲವು ಮುಸ್ಲಿಮರ ಬೆಂಬಲ
  • ತಾಲಿಬಾನ್ ಆಡಳಿತ ಉತ್ತಮ, ಬದಲಾದ ತಾಲಿಬಾನ್ ಎಂದು ಹಲವರ ಮೆಚ್ಚುಗೆ
  • ತಾಲಿಬಾನ್ ಉಗ್ರರ ಗೆಲುವು ಆಚರಿಸುತ್ತಿರುವ ಭಾರತೀಯ ಮುಸ್ಲಿಮರು ಅಪಾಯಕಾರಿ
  • ಭಾರತೀಯ ಮುಸ್ಲಿಮರಿಗೆ ಎಚ್ಚರಿಕೆ ಜೊತೆಗೆ ಕಿವಿಮಾತು ಹೇಳಿದ ನಟ ನಾಸಿರುದ್ದೀನ್ ಶಾ

ಮುಂಬೈ(ಸೆ.02): ತಾಲಿಬಾನ್ ಉಗ್ರರು ಬದಲಾಗಿದ್ದಾರೆ, ಶಾಂತಿಯುತವಾಗಿ ಅಧಿಕಾರ ಹಸ್ತಾಂತರವಾಗಿದೆ. ಆಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯಲಿದ್ದಾರೆ ಎಂದು ಭಾರತದಲ್ಲಿ ಹಲವರು ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ. ತಾಲಿಬಾನ್ ಉಗ್ರರ ಪರ ವಾದ ಮಂಡಿಸುತ್ತಿದ್ದಾರೆ. ಹೀಗೆ ತಾಲಿಬಾನ್ ಉಗ್ರರೇ ಬೆಸ್ಟ್ ಎಂದು ಡಂಗುರ ಸಾರುತ್ತಿರುವ ಭಾರತೀಯ ಮುಸ್ಲಿಮರಿಗೆ ಬಾಲಿವುಡ್ ಹಿರಿಯ ನಟ ನಾಸಿರುದ್ದೀನ್ ಶಾ ಎಚ್ಚರಿಕೆ ನೀಡಿದ್ದಾರೆ. ಭಾರತೀಯ ಮುಸ್ಲಿಮರು ತಾಲಿಬಾನ್ ಗೆಲುವು ಆಚರಿಸುತ್ತಿರುವುದು ಅಪಾಯಕಾರಿ ಎಂದು ನಾಸಿರುದ್ದೀನ್ ಹೇಳಿದ್ದಾರೆ.

ಅಮೆರಿಕ ಬಿಟ್ಟುಹೋದ ಶಸ್ತ್ರಾಸ್ತ್ರ ಪರೇಡ್‌ ನಡೆಸಿದ ತಾಲಿಬಾನಿಗಳು!

ತಾಲಿಬಾನ್ ಅಟ್ಟಹಾಸದಿಂದ ಎದುರಾಗಿರುವ ಆತಂಕದ ಕುರಿತು ನಾಸಿರುದ್ದೀನ್ ಶಾ  ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತಾಲಿಬಾನ್ ಅಟ್ಟಹಾಸವನ್ನು ಬೆಂಬಲಿಸುವ, ಆಚರಿಸುತ್ತಿರುವವರು ತಪ್ಪು ಹೆಜ್ಜೆ ಇಡುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಎಂದಿದ್ದಾರೆ.

ಆಫ್ಘನ್‌ ತಾಲಿಬಾನ್‌ ವಶದ ಹಿಂದೆ ಪಾಕಿಸ್ತಾನ ಕೈವಾಡ: ಬಯಲಾಯ್ತು ಸಂಚು!

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿರುವುದು ಇಡೀ ಜಗತ್ತಿಗೆ ಆತಂಕಕಾರಿ ಬೆಳವಣಿಗೆಯಾಗಿದೆ. ಆದರೆ ಭಾರತದಲ್ಲಿ ಕೆಲ ಮುಸ್ಲಿಮರು ತಾಲಿಬಾನ್ ಕ್ರೌರ್ಯ ಹಾಗೂ ಗೆಲುವುವನ್ನು ಆಚರಿಸುತ್ತಿದ್ದಾರೆ. ಇದು ಅಪಾಯಕಾರಿ. ತಾಲಿಬಾನ್ ಬೆಂಬಲಿಸುತ್ತಿರುವ ಮುಸ್ಲಿಮರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಿ,ನೀವು ಆಧುನಿ ಇಸ್ಲಾಂ ಬಯಸಿದ್ದೀರಾ ಅಥವಾ ಕಳೆದ ಹಲವು ಶತಮಾನಗಳ ಹಳೆಯ ಅನಾಗರಿಗತೆಯ ಇಸ್ಲಾಂ ಬೇಕು ಎಂದು ಬಯಸುತ್ತಿದ್ದೀರಾ? ನಾನು ಹಿಂದುಸ್ತಾನಿ ಮುಸಲ್ಮಾನ.  ದೇವರೊಂದಿಗಿನ ಸಂಬಂಧ ವೈಯುಕ್ತಿಕ. ಅದಕ್ಕೆ ರಾಜಕೀಯ ಶಕ್ತಿ ಬೇಕಿಲ್ಲ. ಮಿರ್ಜಾ ಗಾಲಿಬ್ ಹೇಳಿದಂತೆ ದೇವರೊಂದಿಗಿನ ನನ್ನ ಸಂಬಂಧ ಅನೌಪಚಾರಿಕ. ಇದಕ್ಕಾಗಿ ನನಗೆ ರಾಜಕೀಯದ ಧರ್ಮದ ಅಗತ್ಯವಿಲ್ಲ ಎಂದು ನಾಸಿರುದ್ದೀನ್ ಶಾ ವಿಡಿಯೋ ಮೂಲಕ ಹೇಳಿದ್ದಾರೆ.

 

Absolutely! 💯
Taliban is a curse! pic.twitter.com/Bs6xzbNZW8

— Sayema (@_sayema)

ತಾಲಿಬಾನ್ ಉಗ್ರರು ಆಫ್ಘಾನಿಸ್ತಾನ ಕೈವಶ ಮಾಡಿ ವಿಕೃತಿ ಮೆರುಯುತ್ತಿದ್ದಾರೆ. ಕ್ರೌರ್ಯ, ಹಿಂಸೆಗೆ ಲೆಕ್ಕವೇ ಇಲ್ಲ. ಆದರೆ ಭಾರತದಲ್ಲಿ ಕೆಲವರು ತಾಲಿಬಾನ್ ಪರ ವಾದ ಮಂಡಿಸುತ್ತಿದ್ದಾರೆ. ತಾಲಿಬಾನ್ ನಡೆ ಸರಿ. ಅವರ ಆಡಳಿತ ವಿಶ್ವದ ಅತ್ಯಂತ ಶ್ರೇಷ್ಠ ಮುಸ್ಲಿಂ ಆಡಳಿತ ಎಂದು ಬಿಂಬಿಸುತ್ತಿದ್ದಾರೆ. 

ತಾಲಿಬಾನಿಯರಿಂದ ರಕ್ಷಿಸಿಕೊಳ್ಳಲು ಮರುಭೂಮಿಯಲ್ಲಿ ಗರ್ಭಿಣಿ, ವೃದ್ಧರ ರೇಸ್!

ಆಗಸ್ಟ್ ತಿಂಗಳ ಆರಂಭದಲ್ಲೇ ತಾಲಿಬಾನ್ ಉಗ್ರರು ಆಟ್ಟಹಾಸ ಹೆಚ್ಚಾಗಿತ್ತು. ಕಾಬೂಲ್ ಮೇಲೆ ದಾಳಿ ಮಾಡಿದ ತಾಲಿಬಾನ್ ಉಗ್ರರು ಆಗಸ್ಟ್ 15ರಂದು ಆಫ್ಘಾನಿಸ್ತಾನ ಕೈವಶ ಮಾಡಿದರು. ಇತ್ತ ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಸದ್ದಿಲ್ಲದೆ ಪದತ್ಯಾಗ ಮಾಡಿ ಓಮನ್‌ತ್ತ ಪಲಾಯನ ಮಾಡಿದರು. ಆಗಸ್ಟ್ 30 ರಾತ್ರಿ ಅಮೆರಿಕ ಸೇನೆ ಕೂಡ ಸಂಪೂರ್ಣವಾಗಿ ಆಫ್ಘಾನಿಸ್ತಾನದಿಂದ ವಾಪಾಸ್ ಆಯಿತು. 

click me!