ಏಪ್ರಿಲ್ 19ಕ್ಕೆ ತಮಿಳುನಾಡಿನ ಎಲ್ಲಾ 39 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಇದರ ನಡುವೆ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ತಮಿಳುನಾಡಿನಲ್ಲಿ ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳ ವಿದ್ಯಾರ್ಹತೆ ಸೇರಿದಂತೆ ಇತರ ವಿವರಗಳನ್ನು ನೀಡಿದೆ.
ನವದೆಹಲಿ (ಏ.11): ದಕ್ಷಿಣದ ತಮಿಳುನಾಡು ಮುಂಬರುವ ಲೋಕಸಭೆ ಚುನಾವಣೆಗೆ ಸಜ್ಜಾಗಿದೆ. ತಮಿಳುನಾಡಿನ ಎಲ್ಲಾ 39 ಕ್ಷೇತ್ರಗಳಿಗೆ ಏಪ್ರಿಲ್ `19 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಈ 39 ಕ್ಷೇತ್ರಗಳಿಗೆ ಒಟ್ಟು 950 ಮಂದಿ ಕಣದಲ್ಲಿದ್ದಾರೆ. ಈ 950 ಸ್ಪರ್ಧಿಗಳ ಪೈಕಿ 150 ಮಂದಿ ರೈತರಾಗಿದ್ದರೆ, 200ಕ್ಕೂ ಹೆಚ್ಚು ಮಂದಿ ಉದ್ಯಮಿಗಳಾಗಿದ್ದಾರೆ. ಇದರಲ್ಲಿ 127 ಮಂದಿ ವಕೀಲರು ಸೇರಿದ್ದಾರೆ. ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ಚುನಾವಣೆಗೆ ಒಳಪಡಲಿರುವ ಅತಿದೊಡ್ಡ ರಾಜ್ಯ ತಮಿಳುನಾಡು ಆಗಿದೆ. ಕೇಂದ್ರದಲ್ಲಿ ಸಚಿವರಾಗಿರುವ ವ್ಯಕ್ತಿಗಳು ಕೂಡ ತಾವು ರೈತರು ಎಂದು ಅಫಡವಿಟ್ ಸಲ್ಲಿಕೆ ಮಾಡಿದ್ದಾರೆ. ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ತನ್ನ ವೆಬ್‌ಸೈಟ್‌ನಲ್ಲಿ ಇದರ ವಿವರವನ್ನು ಪ್ರಕಟಿಸಿದ್ದು, ತಮಿಳುನಾಡು ರಾಜ್ಯದಲ್ಲಿ ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿರುವ ವ್ಯಕ್ತಿಗಳ ವೃತ್ತಿಯ ವಿವರಗಳನ್ನು ನೀಡಿದೆ. ಪಟ್ಟಿಯಲ್ಲಿ 36 ಕಾರ್ಮಿಕರು ಮತ್ತು 19 ಚಾಲಕರು ಇದ್ದಾರೆ. ನಟರು, ಮಾಜಿ ಸೈನಿಕರು, ವೈದ್ಯರು, ಪತ್ರಕರ್ತರು, ಪೇಂಟರ್‌ಗಳು, ಫೋಟೋಗ್ರಾಫರ್, ಶಿಕ್ಷಕರು ಮತ್ತು ಫುಟ್ಬಾಲ್ ತರಬೇತುದಾರರೂ ಇದ್ದಾರೆ. ವೃತ್ತಿಗಳು ಮತ್ತು ಶಿಕ್ಷಣದ ಅರ್ಹತೆಗಳ ಬಗೆಗಿನ ನೋಟ ಇಲ್ಲಿದೆ.
ಎಲ್ಲಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಫೇವರಿಟ್ ವೃತ್ತಿ ರೈತ. ಉದಾರಣೆಗೆ ಡಿಎಂಕೆ ಕಣಕ್ಕಿಳಿಸಿರುವ 22 ಅಭ್ಯರ್ಥಿಗಳ ಪೈಕಿ 9 ಮಂದಿ ಕೃಷಿ ಅಥವಾ ಕೃಷಿ ಸಂಬಂಧಿತ ವೃತ್ತಿಯಯನ್ನು ಮಾಡುತ್ತಿದ್ದಾರೆ. ಈ ಪಟ್ಟಿಯಲ್ಲಿ ಅವರ ಕೊಯಮತ್ತೂರು ಅಭ್ಯರ್ಥಿ, ಕೊಯಮತ್ತೂರಿನ ಮಾಜಿ ಮೇಯರ್ ಆಗಿದ್ದ ಗಣಪತಿ ಪಿ ರಾಜ್‌ಕುಮಾರ್ ಕೂಡ ಸೇರಿದ್ದಾರೆ.
ಡಿಎಂಕೆಯ ಪ್ರಮುಖ ಪ್ರತಿಸ್ಪರ್ಧಿ ಎಐಎಡಿಎಂಕೆ 34 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅವರಲ್ಲಿ ಅರ್ಧದಷ್ಟು ಮಂದಿ ಉದ್ಯಮಿಗಳಾಗಿದ್ದಾರೆ. ರಾಜ್ಯದ 23 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಹೊಂದಿದೆ. ಅವರಲ್ಲಿ ಎಂಟು ಮಂದಿ ಕೃಷಿ ಅಥವಾ ತೋಟಗಾರಿಕೆಯನ್ನು ತಮ್ಮ ಪ್ರಾಥಮಿಕ ವೃತ್ತಿ ಎಂದು ಪಟ್ಟಿ ಮಾಡಿದ್ದಾರೆ. ಇದರಲ್ಲಿ ಎಲ್ ಮುರುಗನ್, ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಕೂಡ ಸೇರಿದ್ದಾರೆ. ಮುರುಗನ್ ನೀಲಗಿರಿ ಕ್ಷೇತ್ರದಿಂದ ಚುನಾವಣೆ ಎದುರಿಸುತ್ತಿದ್ದಾರೆ. ಮುರುಗನ್ ಅವರ ಅಫಿಡವಿಟ್ ಕೃಷಿಯನ್ನು ಅವರ ಏಕೈಕ ಆದಾಯದ ಮೂಲವೆಂದು ಪಟ್ಟಿ ಮಾಡಿದೆ.
ಡಿಎಂಕೆಯ ಮಿತ್ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಒಂಬತ್ತು ಅಭ್ಯರ್ಥಿಗಳನ್ನು ಹೊಂದಿದೆ, ಅವರಲ್ಲಿ ಐವರು ಉದ್ಯಮಿಗಳಾಗಿದ್ದಾರೆ.. ಪಿಎಂಕೆ ಅಭ್ಯರ್ಥಿಗಳಲ್ಲಿ ಉದ್ಯಮ ಜನಪ್ರಿಯ ವೃತ್ತಿಯಾಗಿದೆ. 10 ಅಭ್ಯರ್ಥಿಗಳಲ್ಲಿ ನಾಲ್ವರು ವ್ಯಾಪಾರವನ್ನು ಉದ್ಯಮವಾಗಿ ಹೊಂದಿದ್ದಾರೆ. ಮಾನ್ಯತೆ ಪಡೆಯದ ರಾಜಕೀಯ ಪಕ್ಷವಾದ ನಾಮ್ ತಮಿಳರ್ ಕಚ್ಚಿ ತಮಿಳುನಾಡಿನ ಎಲ್ಲಾ 39 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅವರಲ್ಲಿ ಹನ್ನೆರಡು ಮಂದಿ ವೈದ್ಯರಾಗಿದ್ದಾರೆ.
'ಸಲ್ಲುಗೆ ಇದೆಂಥಾ ಸ್ಥಿತಿ.. ' ತೂತು ಟಿಶರ್ಟ್ ಹಾಕಿರುವ ಸಲ್ಮಾನ್ ಖಾನ್ ಫೋಟೋ ವೈರಲ್!
ಹೆಚ್ಚಿನ ಅಭ್ಯರ್ಥಿಗಳು ವಿದ್ಯಾವಂತರು: ತಮಿಳುನಾಡಿನಲ್ಲಿ, ಬಹುತೇಕ ಅರ್ಧದಷ್ಟು ಅಭ್ಯರ್ಥಿಗಳು ಕಾಲೇಜು ಪದವಿಯನ್ನು ಹೊಂದಿದ್ದಾರೆ. ಅಭ್ಯರ್ಥಿಗಳ ಶೈಕ್ಷಣಿಕ ಸಾಧನೆ ಕೂಡ ವಿಭಿನ್ನವಾಗಿದೆ 177 ಪದವೀಧರ ವೃತ್ತಿಪರರು, 97 ಪದವೀಧರರು, 164 ಸ್ನಾತಕೋತ್ತರ ಪದವೀಧರರಿದ್ದರೆ, 19 ಡಾಕ್ಟರೇಟ್ ಅನ್ನು ಪಡೆದಿದ್ದಾರೆ. ಗಮನಿಸಬೇಕಾದ ಅಂಶವೆಂದರೆ ಕೇವಲ 23 ಮಂದಿ ಮಾತ್ರ ಅನಕ್ಷರಸ್ಥರಾಗಿದ್ದಾರೆ.
ಚಂದ್ರನ ಮೇಲೆ ಏಲಿಯನ್‌ಗಳ ನೌಕೆ ಕಂಡ ನಾಸಾದ ಎಲ್‌ಆರ್‌ಓ ನೌಕೆ?