ನಟನೆಯಿಂದ ರಾಜಕಾರಣಕ್ಕಿಳಿದ ದಳಪತಿ ವಿಜಯ್, ಶೀಘ್ರದಲ್ಲೇ ಹೊಸ ಪಕ್ಷ ಸ್ಥಾಪನೆ!

By Suvarna NewsFirst Published Jan 30, 2024, 3:49 PM IST
Highlights

ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ನಟನೆ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ ದಳಪತಿ ವಿಜಯ್ ಇದೀಗ ಹೊಸ ಪಕ್ಷ ಸ್ಥಾಪಿಸುತ್ತಿದ್ದಾರೆ. ಆರಂಭಿಕ ಹಂತದ ಸಭೆಗಳು ಅಂತ್ಯಗೊಂಡಿದ್ದು, ವಿಜಯ್ ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಶೀಘ್ರದಲ್ಲೇ ಹೊಸ ಪಾರ್ಟಿ ನೋಂದಣಿ ಮಾಡಲಿದ್ದಾರೆ.

ಚೆನ್ನೈ(ಜ.30) ತಮಿಳು ನಟ ವಿಜಯ್ ದಳಪತಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ನಟನೆ ಮೂಲಕವೇ ಜನಪ್ರಿಯವಾಗಿರುವ ದಳಪತಿ ವಿಜಯ್ ಇದೀಗ ತಮಿಳುನಾಡು ರಾಜಕೀಯಕ್ಕೆ ಎಂಟ್ರಿಕೊಡುತ್ತಿದ್ದಾರೆ. ಹೊಸ ಪಕ್ಷ ಸ್ಥಾಪಿಸಲು ಮುಂದಾಗಿರುವ ವಿಜಯ್ ಪದಾಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ದಳಪತಿ ವಿಜಯ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಇದೀಗ ಪಕ್ಷದ ನೋಂದಣಿ ಕೆಲಸಗಳು ನಡೆಯುತ್ತಿದೆ. ಶೀಘ್ರದಲ್ಲೇ ಅದ್ಧೂರಿ ಕಾರ್ಯಕ್ರಮದ ಮೂಲಕ ದಳಪತಿ ವಿಜಯ್ ಪಕ್ಷ ಸ್ಥಾಪನೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ದಳಪತಿ ವಿಜಯ್ ಪಕ್ಷದ ಕುರಿತು ನಡೆದ ಮೊದಲ ಸಭೆಯಲ್ಲಿ 200 ಜನರಲ್ ಕೌನ್ಸಿಲ್ ಸದಸ್ಯರು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಪಕ್ಷದ ಅಧ್ಯಕ್ಷಕರು, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಸೇರಿದಂತೆ ಹಲವು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಇದೀಗ ಪಕ್ಷದ ಹೆಸರು ಹಾಗೂ ಚಿಹ್ನೆ ಕುರಿತು ಚರ್ಚೆಗಳು ನಡೆಯುತ್ತಿದೆ. ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಹೊಸ ಪಕ್ಷ ಘೋಷಣೆಯಾಗುವ ಸಾಧ್ಯತೆ ಇದೆ.

Dalpati Vijay: ನಟ ದಳಪತಿ ವಿಜಯ್ ದುಬಾರಿ ಕಾರು ಹೇಗಿದೆ ? ಇದರ ಬೆಲೆ ಎಷ್ಟು ಗೊತ್ತಾ ?

2026ರ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈಗಲೇ ಪಕ್ಷ ಸಂಘಟಿಸಲು ವಿಜಯ್ ಮುಂದಾಗಿದ್ದಾರೆ. ಈಗಾಗಲೇ ತಮಿಳುನಾಡು ರಾಜಕೀಯದಲ್ಲಿ ಭಾರಿ ಬದಲಾವಣೆಯಾಗುತ್ತಿದೆ. ಪ್ರಾದೇಶಿಕ ಪಕ್ಷಗಳಾದ ಡಿಎಂಕೆ, ಎಐಎಡಿಎಂಕೆ ಸೇರಿದಂತೆ ಕೆಲ ಪಕ್ಷಗಳು ತನ್ನ ಪ್ರಾಬಲ್ಯ ಮುಂದುವರಿಸುತ್ತಿರುವ ಬೆನ್ನಲ್ಲೇ ರಾಷ್ಟ್ರೀಯ ಪಕ್ಷಗಳು ಛಾಪು ಮೂಡಿಸಲು ಸಜ್ಜಾಗಿದೆ. ಕೆ ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿ ಹೊಸ ಭರವಸೆಯಾಗಿ ಮೂಡುತ್ತಿದೆ. ಇದರ ನಡುವೆ ತಮಿಳು ಭಾಷೆ, ತಮಿಳು ಸಾಂಸ್ಕೃತಿಕ ವೈಭವದ ಸಂಕೇತವಾಗಿ ಮತ್ತೊಂದು ಪ್ರಾದೇಶಿಕ ಪಕ್ಷವನ್ನು ಕಟ್ಟಲು ವಿಜಯ್ ಮುಂದಾಗಿದ್ದಾರೆ.

ಪೆರಿಯಾರ್, ಅಂಬೇಡ್ಕರ್, ಕಾಮರಾಜ್ ತತ್ವದಡಿ ಪಕ್ಷದ ಸಿದ್ಧಾಂತ ರೂಪಿಸಲು ಚರ್ಚೆಗಳು ನಡೆದಿದೆ. ಕೆಲವೇ ದಿನಗಳಲ್ಲಿ ವಿಜಯ್ ಪಕ್ಷದ ಕುರಿತ ಮಹತ್ವದ ಮಾಹಿತಿ ಘೋಷಣೆಯಾಗಲಿದೆ. ವಿಜಯ್ ಪಕ್ಷ ತಮಿಳುನಾಡಿನಲ್ಲಿ ರಾಜಕೀಯ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

ಚೆನ್ನೈನಲ್ಲಿ ಖ್ಯಾತ ನಟ ದಳಪತಿ ವಿಜಯ್ ಮೇಲೆ ಚಪ್ಪಲಿ ಎಸೆತ; ಕಿಡಿಗೇಡಿ ವಿರುದ್ಧ ತೀವ್ರಗೊಂಡ ಆಕ್ರೋಶ
 

click me!