'ಗಲ್ವಾನ್‌' ಕೆಣಕಿದ ರಿಚಾ ಛಡ್ಡಾಗೆ ನೆಟ್ಟಿಗರ ಭರ್ಜರಿ ಕ್ಲಾಸ್‌, ಕ್ಷಮೆ ಕೇಳಿದ ನಟಿ

By Santosh NaikFirst Published Nov 24, 2022, 3:11 PM IST
Highlights

ಗಲ್ವಾನ್‌ನಲ್ಲಿ ಭಾರತದ ಸೈನಿಕರು ಮೃತರಾದ ವಿಚಾರವನ್ನು ಕುಹಕ ಮಾಡುವಂತೆ ಟ್ವೀಟ್‌ ಮಾಡಿದ್ದ ಬಾಲಿವುಡ್‌ ನಟಿ ರಿಚಾ ಛಡ್ಡಾಗೆ ಟ್ವಿಟರ್‌ನಲ್ಲಿ ಚಾಟಿ ಬೀಸಿದ್ದಾರೆ. ಬಹುತೇಕ ವ್ಯಕ್ತಿಗಳು, ಆಕೆಯ ಟ್ವೀಟ್‌ ನಾಚಿಕೆಗೇಡಿನ ಹಾಗೂ ಅವಮಾನಕರವಾಗಿತ್ತು ಎಂದು ಬರೆದಿದ್ದಾರೆ.

ನವದೆಹಲಿ (ನ.24): ಚೀನಾದ ಸೈನಿಕರೊಂದಿಗೆ 2020ರಲ್ಲಿ ನಡೆದ ಗಲ್ವಾನ್‌ ಕಣಿವೆಯ ರೆಫರೆನ್ಸ್ ನೀಡಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ವಿಚಾರವಾಗಿ ದೇಶದ ಅಗ್ರ ಸೇನಾ ಕಮಾಂಡರ್‌ನ ಹೇಳಿಕೆಯನ್ನು ಕುಹಕ ಮಾಡಿದ್ದ ಬಾಲಿವುಡ್‌ ನಟಿ ರಿಚಾ ಛಡ್ಡಾಗೆ ನೆಟ್ಟಿಗರು ಟ್ವಿಟರ್‌ನಲ್ಲಿ ಭರ್ಜರ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಅವರಿಗೆ ನೆಟ್ಟಿಗರು ತೆಗೆದುಕೊಂಡು ಕ್ಲಾಸ್‌ ಹೇಗಿತ್ತೆಂದರೆ ತಾವು ಮಾಡಿದ ಕುಹಕದ ಟ್ವೀಟ್‌ಅನ್ನು ಡಿಲೀಟ್‌ ಮಾಡಿದ್ದಲ್ಲದೆ, ಈ ಕುರಿತಾಗಿ ದೊಡ್ಡ ಕ್ಷಮಾಪಣೆಯನ್ನು ಬರೆದು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. 'ನಾನು ಮಾಡಿದ ಟ್ವೀಟ್‌ನ ಉದ್ದೇಶ ಎಂದಿಗೂ ಸೇನೆಯನ್ನು ಕುಹಕ ಮಾಡುವುದಾಗಿರಲಿಲ್ಲ. ನಾನು ಪೋಸ್ಟ್‌ ಮಾಡಿರುವ 3 ಪದಗಳಿಂದ ಯಾರಿಗಾದರೂ ಮನ ನೋವಾಗಿದ್ದರೆ, ನೊಂದುಕೊಂಡಿದ್ದರೆ ಅದಕ್ಕಾಗಿ ನಾನು ಕ್ಷಮೆಯಾಚನೆ ಮಾಡುತ್ತೇವೆ. ನಾನು ಉದ್ದೇಶರಹಿತವಾಗಿ ಹಾಕಿರುವ ಪೋಸ್ಟ್‌ ನಿಂದ ಯಾರಿಗಾದರೂ ಬೇಸರವಾಗಿದ್ದರೆ ನನಗೂ ಅದೇ ರೀತಿ ಅನಿಸುತ್ತದೆ. ಸೇನೆಯಲ್ಲಿ ನನ್ನ ಸಹೋದರಿಗೂ ಕೂಡ ಇದೇ ರೀತಿ ಅನಿಸಿರಬಹುದು. ನನ್ನ ನಾನಾಜಿ ಕೂಡ ಸೇನೆಯ ಪ್ರಸಿದ್ಧ ಹುದ್ದೆಯಲ್ಲಿದ್ದರು' ಎಂದು ರಿಚಾ ಛಡ್ಡಾ ತಮ್ಮ ಕ್ಷಮಾಪಣೆಯ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

pic.twitter.com/EYHeS75AjS

— RichaChadha (@RichaChadha)


ದೇಶದ ನಾರ್ಥನ್‌ ಆರ್ಮಿ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಉಪೇಂದ್ರ ದ್ವಿವೇದಿ ಅವರು ನೀಡಿದ್ದ ಹೇಳಿಎಕಯ ಕುರಿತಾಗಿ ರಿಚಾ ಛಡ್ಡಾ ವಿವಾದಿತವಾಗಿ ಪೋಸ್ಟ್‌ ಮಾಡಿದ್ದರು. ಪಾಕಿಸ್ತಾನ ಅಕ್ರಮವಾಗಿ ವಶಪಡಿಸಿಕೊಂಡಿರುವ ಕಾಶ್ಮೀರದ ಭಾಗವನ್ನು ಮರಳಿ ವಶಪಡಿಸಿಕೊಳ್ಳಲು ನಮ್ಮ ಸೇನೆ ಯಾವಾಗ ಬೇಕಿದ್ದರೂ ಸಿದ್ಧವಾಗಿರುತ್ತದೆ. ಅವರಿಗೆ ತಕ್ಕ ರೀತಿಯ ಉತ್ತರ ನೀಡಿ ವಶಪಡಿಸಿಕೊಳ್ಳುತ್ತೇವೆ ಎಂದು ಕಮಾಂಡರ್‌ ಹೇಳಿದ್ದರು. ಇದನ್ನು ಬಾಬಾ ಬನಾರಸ್‌ ಹೆಸರಿನ ಟ್ವಿಟರ್‌ ಹ್ಯಾಂಡಲ್‌ ಪೋಸ್ಟ್‌ ಮಾಡಿತ್ತು.

ಇದನ್ನು ಟ್ವಿಟರ್‌ನಲ್ಲಿ ಕೋಟ್‌ ಟ್ವೀಟ್‌ ಮಾಡಿದ್ದ ರಿಚಾ ಚಡ್ಡಾ, 'ಗಲ್ವಾನ್‌ ಹಾಯ್‌ ಎಂದು ಹೇಳುತ್ತಿದೆ' ಎಂದು ಬರೆದಿದ್ದರು. ಅವರ ಈ ಟ್ವೀಟ್‌ ವೈರಲ್‌ ಆಗಿದ್ದು ಮಾತ್ರವಲ್ಲದೆ, ಇದನ್ನು ನಾಚಿಕಗೇಡಿನ ಹಾಗೂ ಅವಮಾನಕರ ಟ್ವೀಟ್‌ ಎಂದು ಕರೆದಿದ್ದರು.

ತಮ್ಮ ಕ್ಷಮಾಪಣೆಯ ಟ್ವೀಟ್‌ನಲ್ಲಿ ರಿಚಾ ಛಡ್ಡಾ, ತಮ್ಮ ಅಜ್ಜ ಲೆಫ್ಟಿನೆಂಟ್‌ ಕರ್ನಲ್‌ ಆಗಿದ್ದರು ಎಂದು ಹೇಳಿಕೊಂಡಿದ್ದು ಮಾತ್ರವಲ್ಲದೆ, ಇಂಡೋ-ಚೀನಾ ಯುದ್ಧದಲ್ಲಿ ಅವರ ಕಾಲಿಗೆ ಗುಂಡು ತಗುಲಿತ್ತು ಎಂದು ಹೇಳಿದ್ದಾರೆ. 'ನನ್ನ ಮಾಮ ಪ್ಯಾರಾಟ್ರೂಪರ್‌ ಆಗಿದ್ದವು. ಸೇನೆಸಯ ಗೌರವ ನನ್ನ ರಕ್ತದಲ್ಲಿದೆ. ದೇಶವನ್ನು ರಕ್ಷಿಸುವ ಹಾದಿಯಲ್ಲಿ ಒಬ್ಬ ಯೋಧ ಹುತಾತ್ಮನಾದಾಗ ಅಥವಾ ಗಾಯಾಳುವಾದಾಗ ಇಡೀ ಕುಟುಂಬಕ್ಕೆ ಅದರ ಪರಿಣಾಮ ಬೀರುತ್ತದೆ. ಇದರಿಂದಾಗಿಯೇ ನನ್ನಂಥ ವ್ಯಕ್ತಿಗಳು ದೇಶದಲ್ಲಿ ದಿದ್ದಾರೆ. ನಮ್ಮವರನ್ನು ಕಳೆದುಕೊಳ್ಳುವ ದುಃಖ ಹೇಗಿರುತ್ತದೆ ಎನ್ನುವುದು ನನಗೆ ಗೊತ್ತದೆ. ಇದೊಂದು ನನಗೆ ಭಾವನಾತ್ಮಕ ವಿಷಯ' ಎಂದು ಹೇಳಿದ್ದಾರೆ.

ಗಲ್ವಾನ್‌ನಿಂದ ಹಾಯ್‌ ಎಂದು ಬರೆದಿರುವ ನಟಿಯ ಹೇಳಿಕೆಯನ್ನು ಬಿಜೆಪಿ ವಿಡಿಯೋ ಹೇಳಿಕೆ ನೀಡುವ ಮೂಲಕ ಖಂಡಿಸಿದೆ. 'ಭಾರತ ಹಾಗೂ ಭಾರತೀಯರು ಸೇನೆಗೆ ಹಾಗೂ ಸೇನಾ ಸಿಬ್ಬಂದಿಗೆ ಅಪಾರ ಗೌರವ ನೀಡುತ್ತಾರೆ. ನಮ್ಮ ಸೇನೆಯ ಮುಖ್ಯಸ್ಥರೊಬ್ಬರು ಏನಾದರೂ ಹೇಳಿದ್ದಾರೆ ಎಂದರೆ ಅದಕ್ಕೆ ಗೌರವ ನೀಡುತ್ತಾರೆ. ಆದರೆ, ಸೋಶಿಯಲ್‌ ಮೀಡಿಯಾದಲ್ಲಿ ಕೆಲವೊಬ್ಬರು ಸೇನೆಯನ್ನೇ ಕುಹಕ ಮಾಡುತ್ತಿರುವುದು ದುರದೃಷ್ಟದ ವಿಚಾರ ಎಂದು ಹೇಳಿದೆ.

Galwan brave ಉನ್ನತ ಸೇನಾ ಹುದ್ದೆ ಏರಲು ಗಲ್ವಾನ್‌ ಹುತಾತ್ಮನ ಪತ್ನಿ ಸಜ್ಜು!

ಅವರು ಮಾಡುತ್ತಿರುವುದು ಸರಿಯೇ?  ನಮ್ಮ ತಾಯ್ನೆಲವನ್ನು ಕಾಪಾಡುವ ನಿಟ್ಟಿನಲ್ಲಿ ಗಲ್ವಾನ್‌ ಕಣಿವೆಯಲ್ಲಿ ನಮ್ಮ ಯೋಧರು ತೋರಿದ ಸಾಹಸ, ಧೈರ್ಯವನ್ನು ಇವರು ಕನಿಷ್ಠ ಅರ್ಥವನ್ನಾದರೂ ಮಾಡಿಕೊಳ್ಳುತ್ತಾರೆಯೇ? ಇಂಥದ್ದೊಂದು ಪೋಸ್ಟ್‌ ಹಾಕಿರುವುದು ದುರದೃಷ್ಟಕರ ಎಂದು ಬಿಜೆಪಿ ವಕ್ತಾರ ನಳಿನ್‌ ಕೊಹ್ಲಿ ಹೇಳಿದ್ದಾರೆ. ಮತ್ತೊಬ್ಬ ಬಿಜೆಪಿ ನಾಯಕ ಮಣಿಂದರ್‌ ಸಿಂಗ್ ಸಿರ್ಸಾ ಕೂಡ ಇದನ್ನು ಟೀಕಿಸಿ ಪೋಸ್ಟ್‌ ಮಾಡಿದ್ದಾರೆ. 'ಇದೊಂದು ಅವಮಾನಕರ ಟ್ವೀಟ್‌. ಶೀಘ್ರವೇ ಇದನ್ನು ಅವರು ತೆಗೆದುಹಾಕಬೇಕಿತ್ತು. ದೇಶದ ಸೇನೆಯನ್ನು ಅಗೌರವಿಸುವವರನ್ನು ಕ್ಷಮಿಸಲು ಸಾಧ್ಯವಿಲ್ಲ' ಎಂದಿದ್ದಾರೆ. ಇನ್ನು ಸಾಕಷ್ಟು ಟ್ವೀಟಿಗರು ರಿಚಾ ಛಡ್ಡಾ ಅವರ ಟ್ವೀಟ್‌ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ladakh Issue: ಚೀನಾಕ್ಕೆ ತಿರುಗೇಟು, ಗಲ್ವಾನ್‌ನಲ್ಲಿ ಭಾರತದಿಂದಲೂ ಧ್ವಜಾರೋಹಣ!

2020ರ ಜೂನ್‌ನಲ್ಲಿ ಸಂಭವಿಸಿದ ಗಲ್ವಾನ್‌ ಘರ್ಷಣೆಯಲ್ಲಿ ಚೀನಾದ ಸೈನಿಕರ ವಿರುದ್ಧ ಹೋರಾಟ ಮಾಡುತ್ತಾ ಭಾರತದ 20 ಸೈನಿಕರು ಸಾವು ಕಂಡಿದ್ದರು. ಈ ಘಟನೆಯನ್ನು ಚೀನಾದ 40ಕ್ಕೂ ಹೆಚ್ಚು ಸೈನಿಕರು ಸಾವು ಕಂಡಿದ್ದರು. ಇದು ಎರಡೂ ರಾಷ್ಟ್ರಗಳ ನಡುವೆ ದೊಡ್ಡ ಮಟ್ಟದ ದ್ವಿಪಕ್ಷೀಯ ಬಿಕ್ಕಟ್ಟಿಗೂ ಕಾರಣವಾಗಿತ್ತು.

click me!