ದೇವರಿಗಾಗಿ Airport 5 ಗಂಟೆ ಬಂದ್‌: ಅನಂತ ಪದ್ಮನಾಭನಿಗಾಗಿ ತಿರುವನಂತಪುರ ನಿಲ್ದಾಣ ಬಂದ್‌

By Kannadaprabha NewsFirst Published Nov 2, 2022, 8:45 AM IST
Highlights

ಈ ‘ಅರಟ್ಟು’ (Aarattu) (ಸಾಂಪ್ರದಾಯಿಕ ಸ್ನಾನ) ಮೆರವಣಿಗೆಯಲ್ಲಿ ದೇವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ವಿಮಾನ ನಿಲ್ದಾಣದ ಹಿಂದೆ ಇರುವ ಶಂಗುಮುಗಂ ಸಮುದ್ರದಲ್ಲಿ ಪವಿತ್ರ ಸ್ನಾನಕ್ಕೆ ಒಯ್ಯಲಾಗುತ್ತದೆ. ಇದಕ್ಕೂ ಮುನ್ನ ರನ್‌ವೇ ಸಮೀಪದಲ್ಲಿರುವ ಅರಟ್ಟು ಮಂಟಪದಲ್ಲಿ ದೇವರ ಮೂರ್ತಿ ಕೆಲ ಕಾಲ ಇಟ್ಟು, ಪೂಜೆ ನಡೆಸಲಾಗುತ್ತದೆ.

ತಿರುವನಂತಪುರ (ನವೆಂಬರ್ 2): ದೇಗುಲಗಳಲ್ಲಿ ವಿಶೇಷ ಕಾರ್ಯಕ್ರಮವಿದ್ದ ವೇಳೆ ರಸ್ತೆ ಬಂದ್‌ ಮಾಡುವುದು ಸಹಜ. ಆದರೆ ಕೇರಳದ (Kerala) ವಿಶ್ವಪ್ರಸಿದ್ಧ ಅನಂತ ಪದ್ಮನಾಭ (Anantha Padmanabha Swamy) ದೇವರ ಮೆರವಣಿಗಾಗಿ ಪ್ರತಿ ವರ್ಷ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ (Thiruvananthapuram airport) 5 ಗಂಟೆಗಳ ಕಾಲ ವಿಮಾನ (Flight) ಸಂಚಾರವನ್ನೇ ಸ್ಥಗಿತಗೊಳಿಸಲಾಗುತ್ತದೆ. ಶತಮಾನಗಳಿಂದ ನಡೆದುಬಂದಿರುವ ಈ ಮೆರವಣಿಗೆ ಸಂಪ್ರದಾಯ ಮಂಗಳವಾರವೂ ನಡೆದಿದ್ದು, ಈ ವೇಳೆ 10 ವಿಮಾನಗಳ ಸಂಚಾರದ ಸಮಯವನ್ನು ಬದಲಾಯಿಸಲಾಗಿತ್ತು.

ಏನಿದು ಕಾರ್ಯಕ್ರಮ?: ಪ್ರತಿ ವರ್ಷ ಮಾರ್ಚ್‌ - ಏಪ್ರಿಲ್‌ ತಿಂಗಳಿನಲ್ಲಿ ನಡೆಯುವ ಪಂಗುಣಿ ಹಬ್ಬ ಹಾಗೂ ಅಕ್ಟೋಬರ್‌-ನವೆಂಬರ್‌ ವೇಳೆ ನಡೆಯುವ ಅಪ್ಲಶಿ ಹಬ್ಬದ (Alpasi Festival) ವೇಳೆ 2 ಬಾರಿ ಅನಂತ ಪದ್ಮನಾಭ ದೇವರ ಉತ್ಸವ ಮೂರ್ತಿಯ ಮೆರವಣಿಗೆ (Procession) ನಡೆಸಲಾಗುತ್ತದೆ. ತಿರುವಾಂಕೂರಿನ ದೊರೆಯಾಗಿದ್ದ ಮಾರ್ತಾಂಡ ವರ್ಮಾ 1000 ವರ್ಷಕ್ಕೂ ಮುನ್ನ ಈ ಸಂಪ್ರದಾಯಕ್ಕೆ ನಾಂದಿ ಹಾಡಿದ್ದ.

Latest Videos

ಇದನ್ನು ಓದಿ: ಅನಂತ ಪದ್ಮನಾಭ ದೇವಸ್ಥಾನದ 'ಬಬಿಯಾ' ಇನ್ನಿಲ್ಲ!

ಈ ‘ಅರಟ್ಟು’ (Aarattu) (ಸಾಂಪ್ರದಾಯಿಕ ಸ್ನಾನ) ಮೆರವಣಿಗೆಯಲ್ಲಿ ದೇವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ವಿಮಾನ ನಿಲ್ದಾಣದ ಹಿಂದೆ ಇರುವ ಶಂಗುಮುಗಂ ಸಮುದ್ರದಲ್ಲಿ ಪವಿತ್ರ ಸ್ನಾನಕ್ಕೆ ಒಯ್ಯಲಾಗುತ್ತದೆ. ಇದಕ್ಕೂ ಮುನ್ನ ರನ್‌ವೇ ಸಮೀಪದಲ್ಲಿರುವ ಅರಟ್ಟು ಮಂಟಪದಲ್ಲಿ ದೇವರ ಮೂರ್ತಿ ಕೆಲ ಕಾಲ ಇಟ್ಟು, ಪೂಜೆ ನಡೆಸಲಾಗುತ್ತದೆ.

1932ರಲ್ಲಿ ಈ ಮಾರ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೂ ಮುನ್ನ ದೇವರ ಮೆರವಣಿಗೆಗೆ ಸಾಂಪ್ರದಾಯಿಕ ಮಾರ್ಗ ಬಳಕೆಗಾಗಿ ದೇವಾಲಯ ನಿರ್ವಹಿಸುತ್ತಿರುವ ರಾಜಮನೆತನದವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ ಕಾರ್ಯಕ್ರಮದ ವೇಳೆ ನಿಲ್ದಾಣದ ಜಾಗವನ್ನು ಬಿಟ್ಟುಕೊಡಲು ಒಪ್ಪಿಕೊಳ್ಳಲಾಗಿತ್ತು. ಅಂದಿನಿಂದಲೂ ಇದನ್ನು ಪ್ರತಿ ವರ್ಷವೂ ಪಾಲಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ತೆರಳಿ ನವರಾತ್ರಿ ಆಚರಿಸಿದ ದಕ್ಷಿಣ ಆಫ್ರಿಕಾ ಸ್ಪಿನ್ನರ್‌ ಕೇಶವ್‌ ಮಹಾರಾಜ್‌!

click me!