2 ವಾರದಲ್ಲಿ ಮಹಾ ಗಂಡಾಂತರ: 11 ದಿನದಲ್ಲಿ 11 ಸಾವಿರ ಮಂದಿ ಬಲಿ ಸಾಧ್ಯತೆ!

By Kannadaprabha News  |  First Published Mar 26, 2021, 9:13 AM IST

2 ವಾರದಲ್ಲಿ ಮಹಾರಾಷ್ಟ್ರಕ್ಕೆ ಕೊರೋನಾ ಗಂಡಾಂತರ| ನಿತ್ಯ ಸಾವಿನ ಸಂಖ್ಯೆ 1000ಕ್ಕೆ ತಲುಪುವ ಸಂಭವ| 11 ದಿನದಲ್ಲಿ 11 ಸಾವಿರ ಮಂದಿ ಬಲಿ ಸಾಧ್ಯತೆ| ರಾಜ್ಯ ಆರೋಗ್ಯ ಇಲಾಖೆಯಿಂದ ಅಂದಾಜು


ಮುಂಬೈ(ಮಾ.26): ಮುಂದಿನ ಎರಡು ವಾರಗಳಲ್ಲಿ ಮಹಾರಾಷ್ಟ್ರದಲ್ಲಿ ಪ್ರತಿನಿತ್ಯ 1 ಸಾವಿರದವರೆಗೂ ಜನರು ಕೊರೋನಾಗೆ ಬಲಿಯಾಗಬಹುದು. ಒಟ್ಟಾರೆ 11 ದಿನದಲ್ಲಿ 11 ಸಾವಿರ ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಳ್ಳಬಹುದು. ಹಲವು ಜಿಲ್ಲೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೂ ಸಮಸ್ಯೆಯಾಗಬಹುದು ಎಂಬ ಆತಂಕಕಾರಿ ಸಂಗತಿಯೊಂದು ಬಹಿರಂಗವಾಗಿದ್ದು, ಸಂಚಲನಕ್ಕೆ ಕಾರಣವಾಗಿದೆ.

ದೇಶದಲ್ಲೇ ಅತಿ ಹೆಚ್ಚು ಕೊರೋನಾ ಪ್ರಕರಣಗಳು ವರದಿಯಾಗುತ್ತಿರುವ ಮಹಾರಾಷ್ಟ್ರಕ್ಕೆ ಮುಂದಿನ ದಿನಗಳು ಗಂಡಾಂತರಕಾರಿಯಾಗಿ ಪರಿಣಮಿಸಲಿವೆ ಎಂದು ಸ್ವತಃ ರಾಜ್ಯ ಆರೋಗ್ಯ ಇಲಾಖೆಯೇ ವರದಿಯೊಂದನ್ನು ಬಿಡುಗಡೆ ಮಾಡಿದೆ.

Latest Videos

undefined

ಮಹಾರಾಷ್ಟ್ರದಲ್ಲಿ ಈವರೆಗೆ ಕೊರೋನಾಗೆ 53684 ಮಂದಿ ಬಲಿಯಾಗಿದ್ದಾರೆ. ಮುಂದಿನ 11 ದಿನಗಳಲ್ಲಿ ಈ ಸಂಖ್ಯೆ 64 ಸಾವಿರ ಗಡಿಯನ್ನು ದಾಟಿ 64613ಕ್ಕೆ ತಲುಪಬಹುದು. ಮುಂದಿನ ಎರಡು ವಾರಗಳಲ್ಲಿ ಪ್ರತಿನಿತ್ಯ 1000ದವರೆಗೂ ಸಾವು ಸಂಭವಿಸಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಪ್ರತಿ ವಾರ ಸೋಂಕು ಸರಾಸರಿ ಶೇ.1ರಷ್ಟುಹೆಚ್ಚಳವಾಗುತ್ತಿದೆ. ಅದನ್ನು ಆಧರಿಸಿ ಆರೋಗ್ಯ ಇಲಾಖೆ ಭವಿಷ್ಯವನ್ನು ಅಂದಾಜಿಸಿದೆ.

ಮಹಾರಾಷ್ಟ್ರದಲ್ಲಿ ಬುಧವಾರ 31,855 ಪ್ರಕರಣಗಳು ಪತ್ತೆಯಾಗಿವೆ. ಇದು ರಾಜ್ಯದಲ್ಲಿ ಕೊರೋನಾ ಪತ್ತೆಯಾದಾಗಿನಿಂದ ಒಂದೇ ದಿನದಲ್ಲಿ ಕಂಡುಬಂದ ಸಾರ್ವಕಾಲಿಕ ದಾಖಲೆಯ ಸೋಂಕು. ಸದ್ಯ ರಾಜ್ಯದಲ್ಲಿ 2.47 ಲಕ್ಷ ಸಕ್ರಿಯ ಪ್ರಕರಣಗಳು ಇವೆ. ಏ.4ರ ವೇಳೆಗೆ ಈ ಸಂಖ್ಯೆ 4 ಲಕ್ಷದ ಗಡಿಯನ್ನು ದಾಟಬಹುದು. ನಾಗಪುರ ಹಾಗೂ ಥಾಣೆ ಜಿಲ್ಲೆಗಳು ಹೆಚ್ಚು ಸಮಸ್ಯೆಗೆ ತುತ್ತಾಗಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

click me!