ಧರ್ಮಸಂಕಟದಲ್ಲಿ ಅಣ್ಣಾಮಲೈ: ತಮಿಳು ನಾಡಗೀತೆಗೆ ಅವಮಾನಿಸಿದ ಆರೋಪ

Published : Apr 28, 2023, 01:34 PM IST
ಧರ್ಮಸಂಕಟದಲ್ಲಿ ಅಣ್ಣಾಮಲೈ: ತಮಿಳು ನಾಡಗೀತೆಗೆ ಅವಮಾನಿಸಿದ ಆರೋಪ

ಸಾರಾಂಶ

ಡಿಎಂಕೆ ಆರೋಪಕ್ಕೆ ಸರಿಯಾಗಿ ತಿರುಗೇಟು ನೀಡಿದ ಅಣ್ಣಾಮಲೈ ನಾಡಗೀತೆಯಿಂದ ಕನ್ನಡಮುಂಗ್ ಕಲಿತೆಲುಂಗುಂ ಕವಿನ್ಮಲಯಾಳಮುಂ ತುಳುವುಂ ಎಂಬ ಸಾಲನ್ನು ತೆಗೆದು ರಾಜ್ಯ ವಿಭಜನೆಯನ್ನು ಬಿತ್ತಿದ ಇತಿಹಾಸ ನಿಮ್ಮದಲ್ಲವೇ? ಎಂದು ಪ್ರಶ್ನಿಸಿದ್ದಾರೆ. 

ಚೆನ್ನೈ: ನಿನ್ನೆ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿಯಿಂದ ತಮಿಳು ಸಮಾಜದ ಜನರ ಸಮಾವೇಶ ಆಯೋಜಿಸಲಾಗಿತ್ತು. ಈ ಸಮಾವೇಶದಲ್ಲಿ ಮೊದಲಿಗೆ ತಮಿಳುನಾಡಗೀತೆಯನ್ನು ಹಾಡಿಸಲಾಗಿತ್ತು. ಈ ವೇಳೆ ಕಾರ್ಯಕ್ರಮದಲ್ಲಿದ್ದ ಬಿಜೆಪಿ ಮುಖಂಡ ಈಶ್ವರಪ್ಪ ಅವರು ತಮಿಳುನಾಡಗೀತೆಯನ್ನು ನಿಲ್ಲಿಸುವಂತೆ ಹೇಳಿ ಕನ್ನಡ ನಾಡಗೀತೆಯನ್ನು ಹಾಕಿಸಿದ್ದರು. ಈ ವಿಚಾರವೀಗ ತಮಿಳುನಾಡಿನಲ್ಲಿ ಅಣ್ಣಾಮಲೈ ವಿರೋಧಿಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಅಣ್ಣಾಮಲೈ ತಮಿಳುನಾಡು ನಾಡಗೀತೆಗೆ ಅವಮಾನ ಮಾಡಿದ್ದಾರೆ ಎಂದು ಡಿಎಂಕೆ ನಾಯಕಿ ಕನ್ನಿಮೋಳಿ ಆರೋಪ ಮಾಡಿದ್ದಾರೆ. 

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ಡಿಎಂಕೆ ಸಂಸದೆ ಕನಿಮೊಳಿ , ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ತಮ್ಮ ಪಕ್ಷದ ಚುನಾವಣಾ ಪ್ರಚಾರದ ವೇಳೆ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಅವರು ರಾಜ್ಯ ಗೀತೆ 'ತಮಿಳು ತಾಯಿ ವಜ್ತು'ಗೆ (Tamil Thai Vazthu) ಅಗೌರವ ತೋರಿದ್ದಕ್ಕಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ತಮಿಳುನಾಡಿನ ನಾಡಗೀತೆಯಾದ 'ತಮಿಳು ತಾಯ್ ವಜ್ತು' ಹಾಡಿಗೆ ಅವಮಾನ ಮಾಡುವ ತಮ್ಮ ಪಕ್ಷದ ಸದಸ್ಯನನ್ನು ನಿಯಂತ್ರಿಸಲಾಗದ ವ್ಯಕ್ತಿಯೊಬ್ಬರು ಹೇಗೆ  ತಮಿಳುನಾಡಿನ ಜನರ ಬಗ್ಗೆ ಹೇಗೆ ಕಾಳಜಿ ವಹಿಸುತ್ತಾರೆ  ಎಂದು ಕನಿಮೊಳಿ ಟ್ವಿಟರ್‌ನಲ್ಲಿ ಕಿಡಿಕಾರಿದ್ದಾರೆ. 

Karnataka Election: ಶಿವಮೊಗ್ಗ ಸಮಾವೇಶದಲ್ಲಿ ತಮಿಳು ನಾಡಗೀತೆ ಪ್ರಸಾರ!

ಆದರೆ ಡಿಎಂಕೆ ನಾಯಕಿಯ ಈ ಆರೋಪಕ್ಕೆ ಅಣ್ಣಾಮಲೈ (Annamalai ಪ್ರತಿಕ್ರಿಯೆ ನೀಡಿದ್ದು, ಅವರು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಹಳೆಯ ಸುದ್ದಿ ಕ್ಲಿಪ್ ಅನ್ನು ಟ್ವೀಟ್ ಮಾಡಿದ ತಿರುಗೇಟು ನೀಡಿದ್ದಾರೆ. ಅದರಲ್ಲಿ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಈಗಿನ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ (MK Stalin) ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ ನಂತರ ರಾಷ್ಟ್ರಗೀತೆಯನ್ನು ನುಡಿಸುವುದಕ್ಕೆ ಮುಂದಾಗದಿರುವ ದೃಶ್ಯವಿದೆ.

ನಮ್ಮ ರಾಷ್ಟ್ರ ಧ್ವಜಾರೋಹಣ ಮಾಡಿದ ನಂತರ ರಾಷ್ಟ್ರಗೀತೆಯನ್ನು ನುಡಿಸಲು ತಿಳಿಯದ ನಾಯಕನನ್ನು ಹೊಂದಿರುವ ನಿಮಗೆ ಇದೆಲ್ಲಾ ಬೇಕಾ? ತಮಿಳು ತಾಯಿ ನಾಡಗೀತೆಯಿಂದ ಕನ್ನಡಮುಂಗ್ ಕಲಿತೆಲುಂಗುಂ ಕವಿನ್ಮಲಯಾಳಮುಂ ತುಳುವುಂ (Kannadamung Kalitelungum Kavinmalayalamum Tuluvum) ಎಂಬ ಸಾಲನ್ನು ತೆಗೆದು ರಾಜ್ಯ ವಿಭಜನೆಯನ್ನು ಬಿತ್ತಿದ ಇತಿಹಾಸ ನಿಮ್ಮದಲ್ಲವೇ? ಎಂದು ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ನಿಮ್ಮ ಮತ್ತು ಡಿಎಂಕೆಯ ಕೀಳುಮಟ್ಟದ ರಾಜಕೀಯದಿಂದ ತಮಿಳು ಜನರನ್ನು ಉಳಿಸುವುದು ಮಾತ್ರ ನಮ್ಮ ಏಕೈಕ ಧ್ಯೇಯವಾಗಿದೆ. ಚಿಂತಿಸಬೇಡಿ ಎಂದು ಅಣ್ಣಾಮಲೈ ಬರೆದುಕೊಂಡಿದ್ದಾರೆ. 

ಈಶ್ವರಪ್ಪರಿಂದ ಬಿಜೆಪಿ ಭೀಷ್ಮರಂತೆ ಮಾರ್ಗದರ್ಶನ: ಅಣ್ಣಾಮಲೈ

ನಿನ್ನೆ  ಶಿವಮೊಗ್ಗದ ಬಿಜೆಪಿ ತಮಿಳು ಸಮಾಜದವರ ಸಮಾವೇಶದಲ್ಲಿ ತಮಿಳು ನಾಡಗೀತೆ ಪ್ರಸಾರ ಮಾಡುವ ಮೂಲಕ ಬಿಜೆಪಿ ನಾಯಕರು ಎಡವಟ್ಟು ಮಾಡಿದ್ದರು. ತಕ್ಷಣವೇ ಎಚ್ಚೆತ್ತ ಕೆ.ಎಸ್. ಈಶ್ವರಪ್ಪ ತಮಿಳು ನಾಡಗೀತೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ್ದರು. ಆದರೆ ಈ ವಿಚಾರ ಅತ್ತ ತಮಿಳುನಾಡಿನಲ್ಲಿ ರಾಜ್ಯಾಧ್ಯ್ಷರಾಗಿರುವ ಅಣ್ಣಾಮಲೈಗೆ ಧರ್ಮಸಂಕಟ ತಂದೊಡಿದ್ದೆ. ಕರ್ನಾಟಕದಲ್ಲಿ ಕನ್ನಡವವೇ ಸಾರ್ವಭೌಮ ಹೀಗಾಗಿ ತಕ್ಷಣವೇ ಎಚ್ಚೆತ್ತ ಕೆ.ಎಸ್. ಈಶ್ವರಪ್ಪ ತಮಿಳು ನಾಡಗೀತೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ್ದಾರೆ.

ಕರ್ನಾಟಕದ 224 ಸ್ಥಾನಗಳ ವಿಧಾನಸಭೆಗೆ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ. ಹೀಗಾಗಿ ಪ್ರತಿಯೊಂದು ಸಮುದಾಯದ ಜನರ ಮತ ಬೇಟೆಗೆ  ಬಿಜೆಪಿ ಯೋಜನೆ ರೂಪಿಸಿ ನಿನ್ನೆ ತಮಿಳು ಸಮಾಜದ ಸಮಾವೇಶ ಆಯೋಜಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!