ಪೌರತ್ವ ಕಾಯ್ದೆ ತಂದ ಬಿಜೆಪಿಗೆ ಬಿಗ್ ಶಾಕ್: 90 ನಾಯಕರ ರಾಜೀನಾಮೆ!

By Suvarna News  |  First Published Jan 24, 2020, 3:06 PM IST

ಬಿಜೆಪಿಗೆ ಗುಡ್‌ಬೈ ಎಂದ 90 ನಾಯಕರು| ಜೆ. ಪಿ ನಡ್ಡಾಗೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಣೆ| ಪೌರತ್ವ ಕಾಯ್ದೆ ತಂದ ಬಿಜೆಪಿಗೆ ಸಂಕಷ್ಟ


ಇಂದೋರ್[ಜ.24]: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ಕಾಯ್ದೆಯನ್ನು ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯ ತೀವ್ರವಾಗಿ ವಿರೋಧಿಸುತ್ತಿದೆ. ಹೀಗಿರುವಾಗ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕರ್ತರು ಈ ವಿಚಾರವಾಗಿ, ಪಕ್ಷವನ್ನು ಬೆಂಬಲಿಸಬೇಕೋ ಅಥವಾ ತಮ್ಮ ಸಮುದಾಯದ ಬೆಂಬಲಕ್ಕೆ ನಿಲ್ಲಬೇಕೋ ಎಂಬ ಗೊಂದಲ್ಲಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಬಿಜೆಪಿಗೆ ಬಹುದೊಡ್ಡ ಆಘಾತವೊಂದು ಬಂದೆರಗಿದೆ.

ನಿರುದ್ಯೋಗಿಗಳ ಪರ ಕಾಂಗ್ರೆಸ್‌ ಮಿಸ್ಡ್‌ ಕಾಲ್‌ ಅಭಿಯಾನ!

Latest Videos

undefined

ಹೌದು ಇಂದೋರ್ ನ ಬಿಜೆಪಿ ಮಂಡಲ್ ಹಾಗೂ ಮೋರ್ಚಾದ ವಿಭಿನ್ನ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು 90 ಮುಸ್ಲಿಂ ಕಾರ್ಯಕರ್ತರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. 

ಸಿಎಎ ಮೂಲಕ ದೇಶವನ್ನು ಧಾರ್ಮಿಕವಾಗಿ ವಿಂಗಡಿಸುವ ಕೆಲಸ ನಡೆಯುತ್ತಿದೆ. ಇದು ಸಂವಿಧಾನದ ಮೂಲ ಆಶಯದ ವಿರುದ್ಧವಾಗಿದೆ. ಹೀಗಾಗಿ ತಾವು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾಗೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.

ಪ್ರಜಾಪ್ರಭುತ್ವ ಪಟ್ಟಿಯಲ್ಲಿ 10 ಸ್ಥಾನ ಕೆಳಗಿಳಿದ ಭಾರತ: ವರದಿ!

ಈ ಸಂಬಂಧ ಪ್ರತಿಕ್ರಿಯಿಸಿರುವ ಮುಸ್ಲಿಂ ಅಲ್ಪಸಂಖ್ಯಾತ ನಾಯಕ ರಾಜಿಕ್ ಫರ್ಶೀವಾಲಾ 'ಕೇಂದ್ರ ಸರ್ಕಾರ ಈ ಕಾನೂನು ಜಾರಿಗೊಳಿಸಿ ಅಸಂವಿಧಾನಿಕ ಹೆಜ್ಜೆ ಇರಿಸಿದೆ. ಹೀಗಾಗಿ ಎಲ್ಲಾ ಕಾರ್ಯಕರ್ತರು ರಾಷ್ಟ್ರೀಯ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸುತ್ತಿದ್ದೇವೆ' ಎಂದಿದ್ದಾರೆ.

ಜನವರಿ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!