ರಾಜಕೀಯಕ್ಕೂ ಸೈ ಫ್ಯಾಷನ್‌ಗೂ ಜೈ: ಲ್ಯಾಕ್ಮಿ ಫ್ಯಾಷನ್‌ ವೀಕ್‌ನಲ್ಲಿ ಮಿಂಚಿದ ಎಎಪಿಯ ಸುಂದರಾಂಗ

Published : Mar 28, 2022, 09:55 AM ISTUpdated : Mar 28, 2022, 10:00 AM IST
ರಾಜಕೀಯಕ್ಕೂ ಸೈ ಫ್ಯಾಷನ್‌ಗೂ ಜೈ: ಲ್ಯಾಕ್ಮಿ ಫ್ಯಾಷನ್‌ ವೀಕ್‌ನಲ್ಲಿ ಮಿಂಚಿದ ಎಎಪಿಯ ಸುಂದರಾಂಗ

ಸಾರಾಂಶ

ಲ್ಯಾಕ್ಮಿ ಫ್ಯಾಷನ್‌ ವೀಕ್‌ನಲ್ಲಿ ಮಿಂಚಿದ ಎಎಪಿಯ ಸುಂದರಾಂಗ ರಾಜಕೀಯಕ್ಕೂ ಸೈ ಫ್ಯಾಷನ್‌ಗೂ ಜೈ ಸಂಸದ ರಾಘವ್‌ ಚಡ್ಡಾ ಕ್ಯಾಟ್‌ವಾಕ್ ವಿಡಿಯೋ ವೈರಲ್‌ ಮೊದಲ ನೋಟದಲ್ಲೇ ಕ್ರಶ್‌ ಆಗೋದಂತು ಗ್ಯಾರಂಟಿ

ನವದೆಹಲಿ: ಲ್ಯಾಕ್‌ಮಿ ಫ್ಯಾಷನ್ ವೀಕ್‌ 2022ರ ಶೋ ಸ್ಟಾಪರ್‌ ಯಾರಾಗಿರಬಹುದು ಎಂಬ ಊಹೆ ನಿಮಗಿದೆಯೇ. ನೀವಿದನ್ನು ಊಹೆ ಮಾಡಲು ಕೂಡ ಸಾಧ್ಯವಿಲ್ಲ. ಏಕೆಂದರೆ ಈ ಬಾರಿಯ ಲ್ಯಾಕ್‌ಮಿ ಶೋ ಸ್ಟಾಪರ್ ಆದವರು ಯಾವುದೋ ಸಿನಿಮಾ ತಾರೆಯೋ, ರೂಪದರ್ಶಿಯೋ ಅಲ್ಲ. ಒಬ್ಬರು ರಾಜಕೀಯ ನಾಯಕ. ಹೌದು ಆಮ್ ಆದ್ಮಿ ಪಕ್ಷದ ಯುವ ಸಂಸದ ರಾಘವ್ ಚಡ್ಡಾ ಅವರು ಈ ಬಾರಿಯ ಲ್ಯಾಕ್‌ಮೀ ಶೋ ಸ್ಟಾಪರ್ ಆಗಿದ್ದು, ತಾವು ರಾಜಕೀಯಕ್ಕೂ ಸೈ ಫ್ಯಾಷನ್‌ಗೂ ಜೈ ಎಂಬುದನ್ನು ಆಮ್ ಆದ್ಮಿ ಪಕ್ಷದ ಯುವ ಸಂಸದ ರಾಘವ್ ಚಡ್ಡಾ ಅವರು ಸಾಬೀತು ಮಾಡಿದ್ದಾರೆ. 

ಭಾನುವಾರ ಲ್ಯಾಕ್ಮಿ ಫ್ಯಾಶನ್ ಶೋನಲ್ಲಿ ಡಿಸೈನರ್ ಪವನ್ ಸಚ್‌ದೇವ (Pawan Sachdeva) ಅವರಿಗೆ ಶೋಸ್ಟಾಪರ್ (showstopper) ಆಗಿ ಸಂಸದ ರಾಘವ್ ಚಡ್ಡಾ ಕ್ಯಾಟ್ವಾಕ್‌ ಮಾಡಿದರು. ರಾಘವ್ ಚಡ್ಡಾ ಅವರು ನಟ ಅಪರಶಕ್ತಿ ಖುರಾನಾ (Aparshakti Khurana)ಅವರೊಂದಿಗೆ ರಾಂಪ್‌ ವಾಕ್ ಮಾಡಿದರು. ಮೋಹಕವಾಗಿ ರಾಂಪ್‌(ramp) ಮೇಲೆ ಹೆಜ್ಜೆ ಹಾಕಿದ ಚಡ್ಡಾ ಕಪ್ಪು ಚರ್ಮದ ಜಾಕೆಟ್ ಮತ್ತು  ಬರ್ಗಂಡಿ ಹೈ-ನೆಕ್‌ ಪ್ಯಾಂಟ್ ಅನ್ನು ಧರಿಸಿದ್ದರು.

ಎಎಪಿ ನಾಯಕ ರಾಂಪ್‌ ವಾಕ್‌ ಮಾಡುತ್ತಿರುವ ಫೋಟೋಗಳು ಮತ್ತು ವೀಡಿಯೊಗಳನ್ನು ಹಲವಾರು ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಮ್ ಆದ್ಮಿ ಪಕ್ಷದ ಉನ್ನತ ನಾಯಕರಲ್ಲಿ ಒಬ್ಬರಾದ ಚಡ್ಡಾ ಅವರನ್ನು ಇತ್ತೀಚೆಗೆ ರಾಜ್ಯಸಭಾಗೆ ಪಕ್ಷವು ನಾಮ ನಿರ್ದೇಶನ ಮಾಡಿತ್ತು. ಚಡ್ಡಾ ಮತ್ತು ಇತರ ನಾಲ್ಕು ಎಎಪಿ ನಾಮನಿರ್ದೇಶಿತರು ಗುರುವಾರ ಅವಿರೋಧವಾಗಿ ರಾಜ್ಯಸಭೆಗೆ (RajyaSabha) ಆಯ್ಕೆಯಾಗಿದ್ದರು. 33 ವರ್ಷದ ರಾಘವ್ ಚಡ್ಡಾ(Raghav Chadha)ಅತ್ಯಂತ ಕಿರಿಯ ರಾಜ್ಯಸಭಾ ಸದಸ್ಯರಾಗಿದ್ದಾರೆ. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಗೆಲುವಿನಲ್ಲಿ ರಾಘವ್ ಚಡ್ಡಾ ಪ್ರಮುಖ ಪಾತ್ರ ವಹಿಸಿದ್ದರು. ಪಂಜಾಬ್‌ನ 117 ವಿಧಾನಸಭಾ ಸ್ಥಾನಗಳಲ್ಲಿ 92 ಸ್ಥಾನಗಳನ್ನು ಆಮ್ ಆದ್ಮಿ ಪಕ್ಷ ಗೆದ್ದುಕೊಂಡಿದೆ.

Lakme Fashion Week 2021 : ನೆಟ್ಟಿಗರಿಂದ ಕರೀನಾ ಟ್ರೋಲ್!

ಶನಿವಾರ ನಡೆದ FDCI x Lakme Fashion Week ನ ರಾಂಪ್‌ನಲ್ಲಿ  ಫ್ಯಾಶನ್ ಡಿಸೈನರ್ ಪುನಿತ್ ಬಾಲಾನಾಗೆ (Punit Balana)  ರ‍್ಯಾಂಪ್ ವಾಕ್ ಮಾಡಿದಾಗ  ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ಎಲ್ಲರ ಗಮನ ಸೆಳೆದು ಎಲ್ಲಾ ಫ್ಯಾಷನ್‌ಗೂ ಸೈ ಎಂದು ಸಾಬೀತು ಪಡಿಸಿದ್ದಾರೆ. ಡಿಸೈನರ್ ಪುನಿತ್‌ ಬಾಲನಾ ಅವರ ಇತ್ತೀಚಿನ 'ಲಕ್ಷ್ಮಿ' ಸಂಗ್ರಹವನ್ನು ಧರಿಸಿದ ಜಾನ್ವಿ, ಕಪೂರ್‌, ಶನಿವಾರದ ಕಾರ್ಯಕ್ರಮದ ಶೋಸ್ಟಾಪರ್ ಆಗಿದ್ದರು. ಈ ಸಮಯದಲ್ಲಿ ಅವರು ಧರಿಸಿದ್ದ ಬ್ಯಾಕ್‌ಲೆಸ್ ಚೋಲಿಯೊಂದಿಗೆ ವಧುವಿನ ಲೆಹೆಂಗಾದಲ್ಲಿ ಮಿಲಿಯನ್ ಹೃದಯಗಳನ್ನು ಗೆದ್ದರು.

FDCI x Lakme Fashion Week ಬ್ಯಾಕ್‌ ಲೆಸ್‌ ಡ್ರೆಸ್‌ನಲ್ಲಿ Janhvi ರ‍್ಯಾಂಪ್ ವಾಕ್
ಪುನಿತ್ ಬಾಲನಾ ಅವರ ಸಂಗ್ರಹವು ಭಾರತೀಯ ಸಂಸ್ಕೃತಿಯ ಬಗ್ಗೆ ಅಪಾರ ಗೌರವ ಮತ್ತು ಒಲವನ್ನು ಪ್ರತಿಬಿಂಬಿಸುತ್ತದೆ. ಜಾನ್ವಿ ಕಪೂರ್ ಅದನ್ನು ಧರಿಸಿ  ಡಿಸೈನರ್‌ ಕೆಲಸಕ್ಕೆ ಪೂರ್ಣ ಪ್ರಮಾಣದ ನ್ಯಾಯ ಒದಗಿಸಿದ್ದಾರೆ. ಜಾನ್ವಿ ಕಪೂರ್ ಶನಿವಾರದಂದು ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಲವು ಫೋಟೋಗಳನ್ನು  ಹಂಚಿಕೊಂಡಿದ್ದಾರೆ, ಅಲ್ಲಿ ಅವರು  ಪುನಿತ್ ಬಾಲನಾ ಅವರ ಮಾಡ್ರನ್‌ ಅಂಶಗಳನ್ನು ಒಳಗೊಂಡಿರುವ ಎಥ್ನಿಕ್‌  ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!