ದಿಲ್ಲಿ ಪಾಲಿಕೆ ಚುನಾವಣೆಗೆ ಟಿಕೆಟ್‌ ನೀಡದ್ದಕ್ಕೆ ಟವರ್‌ ಏರಿದ ಆಪ್‌ ಮುಖಂಡ..!

By Kannadaprabha News  |  First Published Nov 14, 2022, 9:43 AM IST

ನಾಳೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ನನ್ನ ದಾಖಲೆಗಳು ಪಕ್ಷದ ಅತಿಶಿ ಮತ್ತು ದುರ್ಗೇಶ್‌ ಪಾಠಕ್‌ ಅವರ ಬಳಿ ಇವೆ. ನನ್ನ ಬ್ಯಾಂಕ್‌ ಖಾತೆ ಸೇರಿದಂತೆ ಅನೇಕ ದಾಖಲೆಗಳನ್ನು ಅವರು ಹಿಂದಿರುಗಿಸುತ್ತಿಲ್ಲ. ನಾನು ಸತ್ತರೆ ಅದಕ್ಕೆ ನೇರವಾಗಿ ಈ ಇಬ್ಬರು ಹಾಗೂ ಆಮ್‌ ಆದ್ಮಿ ಪಾರ್ಟಿಯೇ ಹೊಣೆ ಎಂದು ಹಸನ್‌ ಆರೋಪಿಸಿದ್ದಾರೆ.


ನವದೆಹಲಿ: ಮುಂಬರುವ ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೆ (Delhi Civic Body Polls) ಪಕ್ಷದಿಂದ ಟಿಕೆಟ್‌ ಸಿಕ್ಕಿಲ್ಲ ಎಂಬ ಕಾರಣಕ್ಕೆ ಹಸೀಬ್‌ ಉಲ್‌ ಹಸನ್‌ (Haseeb-ul Hasan) ಎಂಬ ಆಪ್‌ (AAP) ಮುಖಂಡನೊಬ್ಬ ಮೊಬೈಲ್‌ ಟವರ್‌ (Mobile Tower) ಏರಿ ಕುಳಿತು ಫೇಸ್‌ಬುಕ್‌ ಲೈವ್‌ (Facebook Live) ಬಂದ ಘಟನೆ ಭಾನುವಾರ ನಡೆದಿದೆ. ಈ ವೇಳೆ ಲೈವ್‌ನಲ್ಲಿ ‘ನಾಳೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ನನ್ನ ದಾಖಲೆಗಳು ಪಕ್ಷದ ಅತಿಶಿ (Atishi) ಮತ್ತು ದುರ್ಗೇಶ್‌ ಪಾಠಕ್‌ (Durgesh Pathak) ಅವರ ಬಳಿ ಇವೆ. ನನ್ನ ಬ್ಯಾಂಕ್‌ ಖಾತೆ ಸೇರಿದಂತೆ ಅನೇಕ ದಾಖಲೆಗಳನ್ನು ಅವರು ಹಿಂದಿರುಗಿಸುತ್ತಿಲ್ಲ. ನಾನು ಸತ್ತರೆ ಅದಕ್ಕೆ ನೇರವಾಗಿ ಈ ಇಬ್ಬರು ಹಾಗೂ ಆಮ್‌ ಆದ್ಮಿ ಪಾರ್ಟಿಯೇ ಹೊಣೆ’ ಎಂದು ಹಸೀಬ್‌ ಉಲ್‌ ಹಸನ್‌ ಆರೋಪಿಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ ಬಳಿಕ ಅವರು ಕೆಳಗೆ ಇಳಿದಿದ್ದಾರೆ.

ಮಾದ್ಯಮದವರು ಇಂದು ಬರದಿದ್ದರೆ, ದುರ್ಗೇಶ್‌ ಪಾಠಕ್‌, ಅತಿಶಿ ಹಾಗೂ ಸಂಜಯ್‌ ಸಿಂಗ್ ನನಗೆ ನನ್ನ ದಾಖಲೆಗಳನ್ನು ವಾಪಸ್‌ ನೀಡುತ್ತಿರಲಿಲ್ಲ. ಅವರು ಮೂವರೂ ಭ್ರಷ್ಟರು. ನನಗೆ ಪಕ್ಷದ ಟಿಕೆಟ್‌ ಪಡೆಯಲು ನನ್ನ ಬಳಿ 3 ಕೋಟಿ ರೂ. ಇರಲಿಲ್ಲ. ರೌಡಿಯೊಬ್ಬರಿಗೆ ಪಕ್ಷ ಟಿಕೆಟ್‌ ನೀಡಿದೆ ಎಂದೂ ಹಸೀಬ್‌ ಉಲ್‌ ಹಸನ್‌ ಆರೋಪಿಸಿದ್ದಾರೆ. ಈ ಮೂಲಕ ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೆ ಎಎಪಿ ಟಿಕೆಟ್‌ ನೀಡಲು 3 ಕೋಟಿ ರೂ. ಡಿಮ್ಯಾಂಡ್‌ ಮಾಡಿದೆ ಎಂದು ಆತ ಆರೋಪಿಸಿದ್ದಾರೆ. ಇನ್ನು, ಈ ಆರೋಪ ಸಂಬಂಧ ಎಎಪಿ ನಾಯಕತ್ವ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Tap to resize

Latest Videos

ಇದನ್ನು ಓದಿ: MCD Election 2022: ಪಾಲಿಕೆ ಚುನಾವಣೆಯಲ್ಲಿ ಯಾರಿಗೆ ಡೆಲ್ಲಿಯ ದಿಲ್‌?

ಫೇಸ್‌ಬುಕ್‌ ಲೈವ್‌ನಲ್ಲಿ ಈತ ನೆಲದಿಂದ ಕ್ಯಾಮೆರಾವನ್ನು ತೋರಿಸಿದ್ದು, ತಾನು ಎಷ್ಟು ಎತ್ತರ ಟವರ್‌ ಏರಿದ್ದೇನೆ ಎಂದು ತೋರಿಸಿದ್ದ. ಅಲ್ಲದೆ, ನನಗೆ ಪಾಲಿಕೆ ಚುನಾವಣೆಯಲ್ಲಿ ಎಎಪಿ ಪಕ್ಷ ಟಿಕೆಟ್‌ ನೀಡುತ್ತದೋ ಇಲ್ಲವೋ ಬೇಕಾಗಿಲ್ಲ, ಆದರೆ ನನಗೆ ನನ್ನ ದಾಖಲೆಗಳು ವಾಪಸ್‌ ಬೇಕು ಎಂದು ಹಸೀಬ್‌ ಉಲ್‌ ಹಸನ್‌ ಹೇಳಿದ್ದಾರೆ. 

ವ್ಯಕ್ತಿಯೊಬ್ಬರು ಕೆಳಗೆ ಬನ್ನಿ ಅಣ್ಣ, ನೀವೇಕೆ ಹಾಗೆ ಮಾಡುತ್ತಿದ್ದೀರಿ ಎಂದು ಹೇಳಿರುವುದು ಸಹ ವಿಡಿಯೋದಲ್ಲಿ ಸೆರೆಯಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯ ಶಾಸ್ತ್ರಿ ಪಾರ್ಕ್‌ ಮೆಟ್ರೋ ಸ್ಟೇಷನ್‌ ಬಳಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ತಂಡದವರು ಸಹ ಸ್ಥಳಕ್ಕೆ ಭೇಟಿ ನೀಡಿದ ಬಳಿಕವೇ ಹಸೀಬ್‌ ಉಲ್‌ ಹಸನ್‌ ಟವರ್‌ನಿಂದ ಕೆಳಕ್ಕಿಳಿದಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಗವರ್ನರ್ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ದ ಆಪ್ ಸರ್ಕಾರಕ್ಕೆ ಮುಖಭಂಗ, ಕೇಜ್ರಿವಾಲ್‌ಗೆ ಮಂಗಳಾರತಿ!

ಇದಕ್ಕೂ ಮುನ್ನ ಇದೇ ವರ್ಷದಲ್ಲೇ ಹಸೀಬ್‌ ಉಲ್‌ ಹಸನ್‌ ಒಳಚರಂಡಿ ಶುಚಿ ಮಾಡುವ ಮೂಲಕ ಅವರು ಮಾದ್ಯಮಗಳಲ್ಲಿ ಸುದ್ದಿಯಾಗಿದ್ದರು.  ಮಾರ್ಚ್‌ ತಿಂಗಳಲ್ಲಿ ದೆಹಲಿಯ ಶಾಸ್ತ್ರಿ ಪಾರ್ಕ್‌ನಲ್ಲಿ ತುಂಬಿ ಹರಿಯುತ್ತಿರುವ ಚರಂಡಿಯನ್ನು ಕ್ಲೀನ್‌ ಮಾಡಲು ನೆಗೆದಿದ್ದರು. ಹೊಳೆಯುತ್ತಿದ್ದ ಬಿಳಿಯ ಕುರ್ತಾ ಹಾಕಿಕೊಂಡಿದ್ದ ಆಪ್‌ ಮುಖಂಡ ಆ ಚರಂಡಿಗೆ ಇಳಿದು ಎದೆಯ ಮಟ್ಟದ ನೀರು ಹರಿಯುತ್ತಿದ್ದ ಜಾಗದಲ್ಲಿ ನಿಂತುಕೊಂಡು ಕುಂಟೆಯಲ್ಲಿ ಗಲೀಜನ್ನು ತೆಗೆಯುವಂತೆ ಶುಚಿಗೊಳಿಸುತ್ತಿದ್ದಂತೆ ವಿಡಿಯೋದಲ್ಲಿ ಸೆರೆಯಾಗಿತ್ತು. 

ಇದನ್ನೂ ಓದಿ: ಆಪ್‌ ವಿರುದ್ದ ದೂರು ವಾಪಸ್‌ಗೆ ಒತ್ತಾಯ; ನನ್ನ ಮರ್ಮಾಂಗದ ಮೇಲೆ ಜೈಲು ಸಿಬ್ಬಂದಿ ಹಲ್ಲೆ: ಸುಖೇಶ್ ಚಂದ್ರಶೇಖರ್‌

click me!