
ಮುಂಬೈ: 50 ವರ್ಷದ ಮಹಿಳೆಯೊಬ್ಬರಿಗೆ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ವೇಳೆಯೇ ತಲೆ ತಿರುಗಿ ರೈಲ್ವೆ ಹಳಿಗೆ ಬಿದ್ದ ಪರಿಣಾಮ ಅವರ ಎರಡೂ ಕಾಲುಗಳು ಕಟ್ ಆಗಿದೆ. ಮಹಾರಾಷ್ಟ್ರದ ಮುಂಬೈನ ಬೇಲಾಪುರ ರೈಲು ನಿಲ್ದಾಣದಲ್ಲಿ ಈ ಅವಘಡ ಸಂಭವಿಸಿದೆ. ಇನ್ನೇನು ರೈಲು ಪಾಸಾಗಬೇಕು ಎನ್ನುವಷ್ಟರಲ್ಲಿ ಮಹಿಳೆ ಪ್ಲಾಟ್‌ಫಾರ್ಮ್‌ನಿಂದ ಹಳಿಗೆ ಬಿದ್ದಿದ್ದಾರೆ. ಹಳಿಗೆ ಬಿದ್ದ ಇವರ ಮೇಲೆ ರೈಲು ಚಲಿಸಿದ್ದು, ಮಹಿಳೆಯ ಎರಡೂ ಕಾಲುಗಳು ತುಂಡರಿಸಲ್ಪಟ್ಟಿವೆ.
ಆದರೆ ಕೆಲ ಮೂಲಗಳ ವರದಿ ಪ್ರಕಾರ ಆಕೆ ಚಲಿಸುತ್ತಿದ್ದ ಥಾಣೆಗೆ ಹೊರಟಿದ್ದ ರೈಲನ್ನು ಹತ್ತಲು ಹೋಗಿ ಈ ದುರಂತ ಸಂಭವಿಸಿದೆ ಎಂದು ವರದಿ ಆಗಿದೆ. ಕಾಲು ಜಾರಿಗೆ ಹಳಿ ಮೇಲೆ ಬಿದ್ದ ಆಕೆಯ ಮೇಲೆ ರೈಲು ಚಲಿಸಿದ್ದು, ಪರಿಣಾಮ ಆಕೆಯ ಎರಡು ಕಾಲುಗಳು ಕತ್ತರಿಸಲ್ಪಟ್ಟಿವೆ. ಕೂಡಲೇ ಅಲ್ಲಿದ್ದ ಇತರ ಪ್ರಯಾಣಿಕರು ಹಾಗೂ ಸ್ಟೇಷನ್‌ನ ಭದ್ರತಾ ಸಿಬ್ಬಂದಿ ಬೊಬ್ಬೆ ಹೊಡೆದಿದ್ದು, ಕೂಡಲೇ ರೈಲು ಹಿಂದಕ್ಕೆ ಚಲಿಸಿ ನಿಂತಿದೆ.
ರೈಲ್ವೆ ಚಾಲಕರಿಗೆ 10 ದಿನಕ್ಕೆ ಒಂದೇ ರಜೆ : ರಾಹುಲ್‌ಗೆ ಚಾಲಕರ ಸಂಘದ ಅಧ್ಯಕ್ಷನ ದೂರು
ಘಟನೆಗೆ ಸಂಬಂಧಿಸಿದಂತೆ ಸೆಂಟ್ರಲ್ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಸ್ವಪ್ನಿಲ್ ನೀಲ್ ಟ್ವಿಟ್ ಮಾಡಿದ್ದು, ಟ್ರ್ಯಾಕ್‌ಗೆ ಬಿದ್ದ ಮಹಿಳೆಯನ್ನು ರಕ್ಷಿಸುವುದಕ್ಕಾಗಿ ಬೇಲಾಪುರ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ 3ರಲ್ಲಿ ಪನ್ವೇಲ್‌ನಿಂದ ಥಾಣೆಯತ್ತ ಹೊರಟ ರೈಲನ್ನು ರಿವರ್ಸ್ ಮಾಡಲಾಯ್ತು ಹಾಗೂ ಮಹಿಳೆಯನ್ನು ಸಮೀಪದ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಯ್ತು. ರೈಲು ಆಕೆಯ ಮೇಲೆ ಚಲಿಸಿರುವುದರಿಂದ ಆಕೆಗೆ ಗಂಭೀರ ಗಾಯಗಳಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವೀಡಿಯೋ ವೈರಲ್ ಆಗಿದ್ದು, ಮಹಿಳೆ ರೈಲು ರಿವರ್ಸ್ ಪಡೆದುಕೊಳ್ಳುತ್ತಿದ್ದಂತೆ ಮಲಗಿದಲ್ಲಿಂದ ಏಳುವುದನ್ನು ಕಾಣಬಹುದು. ಆದರೆ ಆಕೆಯ ಎರಡು ಕಾಲುಗಳು ತುಂಡಾಗಿವೆ. ಗಾಯಾಳು ಮಹಿಳೆ ಜೀವನಕ್ಕಾಗಿ ಮನೆ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.
ಮಂಗಳೂರಿಗೆ ಬೇಕು ಪ್ರತ್ಯೇಕ ರೈಲ್ವೆ ವಿಭಾಗ: ಜಿಲ್ಲೆಯ ರೈಲ್ವೆ ಬಳಕೆದಾರರಿಂದ ಸಹಿ ಅಭಿಯಾನ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ