Attari border: ಇಂಡೋ-ಪಾಕ್ ಗಡಿಯಲ್ಲಿ ಜನಿಸಿದ ಪಾಕ್ ಮಗುವಿಗೆ 'ಬಾರ್ಡರ್' ಎಂದು ನಾಮಕರಣ

Published : Dec 06, 2021, 10:43 AM ISTUpdated : Dec 06, 2021, 10:46 AM IST
Attari border: ಇಂಡೋ-ಪಾಕ್ ಗಡಿಯಲ್ಲಿ ಜನಿಸಿದ ಪಾಕ್ ಮಗುವಿಗೆ  'ಬಾರ್ಡರ್' ಎಂದು ನಾಮಕರಣ

ಸಾರಾಂಶ

ತಮಗೆ ಜನಿಸಿದ ಮಗುವಿಗೆ 'ಬಾರ್ಡರ್' ಎಂದು ಹೆಸರಿಟ್ಟ ಪಾಕ್ ದಂಪತಿ ಅಟ್ಟಾರಿ ಗಡಿಯ ಟೆಂಟ್ ನಲ್ಲಿ ಜನಿಸಿದ ಮಗು ಕಳೆದ 71 ದಿನಗಳಿಂದ ಅಟ್ಟಾರಿ ಗಡಿಯಲ್ಲಿ ಸಿಲುಕಿರುವ ದಂಪತಿ  

ಅಟ್ಟಾರಿ (ಡಿ.6): ಡಿಸೆಂಬರ್ 2, 2021 ರಂದು ಇಂಡೋ-ಪಾಕ್ ನ ಅಟ್ಟಾರಿ ಗಡಿಯಲ್ಲಿ (Attari border) ಪಾಕಿಸ್ತಾನ ಮೂಲದ ಮಹಿಳೆಯೊಬ್ಬರಿಗೆ ಗಂಡು ಮಗುವೊಂದು ಜನಿಸಿತು.   ಪಾಕ್ ದಂಪತಿ ಮಗುವಿಗೆ 'ಬಾರ್ಡರ್' (border) ಎಂದು ನಾಮಕರಣ ಮಾಡಿದ್ದಾರೆ. ಈ ಪಾಕ್  ದಂಪತಿಗಳು ಕಳೆದ 71 ದಿನಗಳಿಂದ ಅಟ್ಟಾರಿ ಗಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಇವರ ಜೊತೆಗೆ ಇತರೆ 98 ಪಾಕಿಸ್ತಾನಿ ಪ್ರಜೆಗಳು ಕೂಡ ಇದ್ದಾರೆ. ಪಾಕಿಸ್ತಾನದ ಪಂಜಾಬ್ (Punjab) ಪ್ರಾಂತ್ಯದ ರಾಜನ್‌ಪುರ ಜಿಲ್ಲೆಗೆ ಸೇರಿದ  ನಿಂಬು ಬಾಯಿ ಮತ್ತು ಬಲಮ್ ರಾಮ್ ಅವರ ಈ ಮಗು ಭಾರತ-ಪಾಕ್ ಗಡಿಯಲ್ಲಿ ಜನಿಸಿದ ಕಾರಣ "ಬಾರ್ಡರ್" ಎಂದು ಹೆಸರಿಡಲಾಗಿದೆ.

ತುಂಬು ಗರ್ಭಿಣಿಯಾಗಿದ್ದ ನಿಂಬು ಬಾಯಿಗೆ ಡಿಸೆಂಬರ್ 2 ರಂದು ಹೆರಿಗೆ ನೋವು ಕಾಣಿಸಿಕೊಂಡಿತ್ತು. ವಿಚಾರ ತಿಳಿದ ನೆರೆಯ ಗ್ರಾಮದ ಮಹಿಳೆಯರು ನಿಂಬು ಬಾಯಿಯ ಸಹಾಯಕ್ಕೆ ಬಂದಿದ್ದಾರೆ. ಹೆರಿಗೆಗೆ  ಬೇಕಾದ ವೈದ್ಯಕೀಯ ಸೌಲಭ್ಯಗಳ ಜೊತೆಗೆ ಇತರ ಸಹಾಯವನ್ನೂ ಕೂಡ ಸ್ಥಳೀಯರು ಮಾಡಿದ್ದಾರೆ.

Pakistan Embassy: 3 ತಿಂಗಳಿಂದ ವೇತನ ಸಿಕ್ಕಿಲ್ಲ, ಪಾಕ್ ಪ್ರಧಾನಿ ಇಮ್ರಾನ್‌ಗೆ ರಾಯಭಾರ ಕಚೇರಿಯಿಂದ 'ಪೂಜೆ'!

ಲಾಕ್ ಡೌನ್ ಗೂ ಮುನ್ನ ಸಂಬಂಧಿಕರನ್ನು ಭೇಟಿ ಮಾಡಲು ಭಾರತಕ್ಕೆ ಬಂದಿದ್ದೆವು. ಜೊತೆಗೆ  ತೀರ್ಥಯಾತ್ರೆ (Pilgrimage) ಕೂಡ ಮಾಡಿಕೊಂಡು ಹೋಗಲು ಇತರ 98 ಮಂದಿ ನಾಗರಿಕರ (Civilian) ಜೊತೆಗೆ ಭಾರತಕ್ಕೆ ಬಂದೆವು. ಆದರೆ ಅಗತ್ಯ ದಾಖಲೆಗಳ ಕೊರತೆಯಿಂದಾಗಿ ಮನೆಗೆ ಮರಳಲು ಸಾಧ್ಯವಾಗಲಿಲ್ಲ. ಹೀಗಾಗಿ ಇಲ್ಲಿ ಉಳಿದುಕೊಂಡಿದ್ದೇವೆ ಎಂದು ಬಲಮ್ ರಾಮ್ ಮಾಹಿತಿ ತಿಳಿಸಿದ್ದಾರೆ.

India's Aid to Afghan : ಅಫ್ಘಾನ್‌ಗೆ ಭಾರತದ ನೆರವಿಗೆ ಪಾಕ್‌ ಅಡ್ಡಿ

ಬಲಮ್ ರಾಮ್ ಕುಟುಂಬದ ಹೊರತಾಗಿ, ಇದೇ ಟೆಂಟ್‌ನಲ್ಲಿ ವಾಸಿಸುತ್ತಿದ್ದ ಇನ್ನೊಬ್ಬ ಪಾಕಿಸ್ತಾನಿ ಪ್ರಜೆ ಲಗ್ಯಾರಾಮ್ ಎನ್ನುವವರು 2020 ರಲ್ಲಿ ಜೋಧ್‌ಪುರದಲ್ಲಿ ಜನಿಸಿದ ಅವರ ಮಗನಿಗೆ 'ಭರತ್' ಎಂದು ನಾಮಕರಣ ಮಾಡಿದ್ದಾರೆ. ಲಗ್ಯಾ ಜೋಧ್‌ಪುರದಲ್ಲಿರುವ ತನ್ನ ಸಹೋದರನನ್ನು ಭೇಟಿಯಾಗಲು ಬಂದಿದ್ದರು. ಆದರೆ, ಮರಳಿ ಪಾಕಿಸ್ತಾನಕ್ಕೆ ತೆರಳಲು ಅವರಿಗೆ ಈವರೆಗೆ ಸಾಧ್ಯವಾಗದೆ ಅಟ್ಟಾರಿ ಗಡಿಯ ಟೆಂಟ್ ನಲ್ಲಿದ್ದಾರೆ. 

ಗಡಿಯಲ್ಲಿ ಹೈಅಲರ್ಟ್; ವಾಘಾ ಬಾರ್ಡರ್‌ನಲ್ಲಿ ಫುಲ್ ಬಾಡಿ ಟ್ರಕ್ ಸ್ಕ್ಯಾನರ್ ಅಳವಡಿಸಿದ ಭಾರತ!

ಇನ್ನು ದಾಖಲೆಗಳ ಕೊರತೆಯಿಂದ ಅಟ್ಟಾರಿ ಗಡಿಯಲ್ಲಿ ಬಾಕಿಯಾಗಿರುವ ವ್ಯಕ್ತಗಳಲ್ಲಿ ಮೋಹನ್ ಮತ್ತು ಸುಂದರ್ ದಾಸ್ ಎಂಬುವವರೂ ಇದ್ದಾರೆ. ಇವರೆಲ್ಲರೂ ರಹೀಮ್ ಯಾರ್ ಖಾನ್ ಮತ್ತು ರಾಜನ್‌ಪುರ ಸೇರಿದಂತೆ ಪಾಕಿಸ್ತಾನದ ವಿವಿಧ ಜಿಲ್ಲೆಗಳಿಗೆ ಸೇರಿದವರು. ಪಾಕಿಸ್ತಾನಿ ರೇಂಜರ್‌ಗಳು ಇವರೆಲ್ಲರನ್ನು ಸ್ವೀಕರಿಸದೆ ತಡೆದಿರುವುದರಿಂದ , ಪ್ರಸ್ತುತ ಅಟ್ಟಾರಿ ಗಡಿಯಲ್ಲಿ ಟೆಂಟ್‌ನಲ್ಲಿ ಜೀವಿಸುತ್ತಿದ್ದಾರೆ.

ಪ್ರೇಕ್ಷಕರಿಲ್ಲದೆ ವಾಘಾ ಬೀಟಿಂಗ್‌ ರಿಟ್ರೀಟ್‌: 61 ವರ್ಷದಲ್ಲೇ ಮೊದಲು!

ಇಷ್ಟು ಮಂದಿ ಕೂಡ  ಅಟ್ಟಾರಿ ಅಂತರಾಷ್ಟ್ರೀಯ ಚೆಕ್ ಪೋಸ್ಟ್ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಬೀಡುಬಿಟ್ಟಿವೆ. ಸ್ಥಳೀಯರು ಇವರಿಗೆ ಮೂರು ಹೊತ್ತಿನ ಊಟ, ಔಷಧ, ಬಟ್ಟೆ ನೀಡಿ ಉಪಚಾರ ಮಾಡುತ್ತಿದ್ದಾರೆ.  ಸದ್ಯ ತಮ್ಮೂರಿಗೆ ಮರಳಲು ಪಾಕ್ ಪ್ರಜೆಗಳು ಕಾತುರದಿಂದ ಕಾಯುತ್ತಿದ್ದಾರೆ.

190 ಮಂದಿ ಮರಳಿ ಪಾಕ್ ಗೆ : ಕೋವಿಡ್ ನಿಂದಾಗಿ ಗಡಿಮುಚ್ಚಿದ ಕಾರಣ ಭಾರತದಲ್ಲಿ ಸಿಲುಕಿಕೊಂಡಿದ್ದ 190 ಪಾಕಿಸ್ತಾನದ (Pakistan) ಪ್ರಜೆಗಳನ್ನು ಕಳೆದ ಸೆಪ್ಟೆಂಬರ್ ನಲ್ಲಿ ಅಟ್ಟಾರಿ - ವಾಘಾ ಗಡಿ ಮೂಲಕ ಅವರ ತಾಯ್ನಾಡಿಗೆ ಕಳುಹಿಸಲಾಗಿತ್ತು. ಹಿಂದೂ ಮತ್ತ ಸಿಖ್ ಆರಾಧನಾಲಯಗಳಿಗೆ ತೀರ್ಥಯಾತ್ರೆ ಮಾಡುವ ಸಲುವಾಗಿ ಇವರೆಲ್ಲರೂ ಭಾರತಕ್ಕೆ ಬಂದಿದ್ದರು.  ಸುಮಾರು ಒಂದು ವರ್ಷದ ಬಳಿಕ ಭಾರತದಲ್ಲಿ ಇದ್ದು, ಬಳಿಕ ಪಾಕ್ ಗೆ ಮರಳಿದ್ದರು. ವೈದ್ಯಕೀಯ ಪ್ರಮಾಣಪತ್ರ ಸೇರಿದಂತೆ ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಭಾರತ ನೀಡಿ ಕಳುಹಿಸಿತ್ತು. ಹೀಗೆ ಹಂತ ಹಂತವಾಗಿ ಭಾರತ ಗಡಿಯಲ್ಲಿ ಸಿಲುಕಿರುವ ಪಾಕ್ ಪ್ರಜೆಗಳನ್ನು  ಬ್ಯಾಚ್ ಮೂಲಕ ಕಳುಹಿಸಿ ಕೊಡುತ್ತಿದೆ.

ಪಾಕ್ ನಿಂದ ಮರಳಿದ ಭಾರತೀಯರು: ಕೋವಿಡ್‌ ನಿರ್ಬಂಧದಿಂದ ಪಾಕಿಸ್ತಾನದಲ್ಲಿ ಸಿಲುಕಿದ್ದ ಭಾರತೀಯರು ಮತ್ತು ಎನ್‌ಒಆರ್‌ಐ (NORI) ವೀಸಾ ಹೊಂದಿರುವವರನ್ನು ಪಾಕಿಸ್ತಾನ ಕಳೆದ ವರ್ಷ ಭಾರತಕ್ಕೆ (India) ಕಳುಹಿಸಿ ಕೊಟ್ಟಿತ್ತು. ಕೊರೊನಾ ಹಬ್ಬಿದರ ಪರಿಣಾಮ ಅಂತಾರಾಷ್ಟ್ರೀಯ ಗಡಿ ಮುಚ್ಚಲಾಯಿತು. ಈ ವೇಳೆ ಪಾಕಿಸ್ತಾನದಿಂದ ಹಿಂದಿರುಗಿದ ಎಲ್ಲ ಭಾರತೀಯರಿಗೆ ಕೋವಿಡ್​-19 (covid-19) ಪರೀಕ್ಷೆಯನ್ನು ಗಡಿಯಲ್ಲಿ ಕಡ್ಡಾಯವಾಗಿ ಮಾಡಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?
ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್‌ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!