ದುಡ್ಡಿನ ಜೊತೆ ಹೆಂಡ್ತಿ ಓಡಿ ಹೋಗೋ ಭಯದಲ್ಲಿ ಮದ್ವೆನೇ ಆಗದ ಆಸಾಮಿಯ ಸಾವು- ಕೂಡಿಟ್ಟ 70 ಲಕ್ಷ ರೂ. ಅನಾಥ

Published : Nov 06, 2026, 09:35 PM IST
Death Case

ಸಾರಾಂಶ

ಪ್ರಯಾಗರಾಜ್‌ನಲ್ಲಿ ಕ್ಷಯರೋಗದಿಂದ ಮೃತಪಟ್ಟ ಸ್ವಚ್ಛತಾ ಕಾರ್ಮಿಕನ ಬ್ಯಾಂಕ್ ಖಾತೆಯಲ್ಲಿ 70 ಲಕ್ಷ ರೂ. ಪತ್ತೆಯಾಗಿದೆ. ಪತ್ನಿ ಹಣ ದೋಚುತ್ತಾಳೆಂಬ ಭಯದಿಂದ ಆತ ಮದುವೆಯಾಗದೆ, ಚಿಕಿತ್ಸೆಗೂ ಹಣ ಬಳಸದೆ ಪ್ರಾಣ ಬಿಟ್ಟಿದ್ದಾನೆ. ಈ ಬೃಹತ್ ಮೊತ್ತದ ವಾರಸುದಾರರು ಯಾರೆಂಬುದು ಇನ್ನೂ ತಿಳಿದುಬಂದಿಲ್ಲ.

ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನಿಂದ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರು ಮೃತಪಟ್ಟ ನಂತರ, ಅವರ ಬ್ಯಾಂಕ್ ಖಾತೆಯಲ್ಲಿ ಸುಮಾರು 70 ಲಕ್ಷ ರೂಪಾಯಿಗಳು ಇರುವುದು ಪತ್ತೆಯಾಗಿದೆ. ಮೃತ ವ್ಯಕ್ತಿ ಆಸ್ಪತ್ರೆಯೊಂದರಲ್ಲಿ ನೈರ್ಮಲ್ಯ ಕಾರ್ಮಿಕರಾಗಿ (ಸ್ವಚ್ಛತಾ ಸಿಬ್ಬಂದಿ) ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅವರು ದೀರ್ಘಕಾಲದಿಂದ ಕ್ಷಯರೋಗದಿಂದ (ಟಿಬಿ) ಬಳಲುತ್ತಿದ್ದರು, ಆದರೆ ಅದಕ್ಕೆ ಯಾವುದೇ ವೈದ್ಯಕೀಯ ಚಿಕಿತ್ಸೆ ಪಡೆದಿರಲಿಲ್ಲ. ಕಾಯಿಲೆ ಉಲ್ಬಣಗೊಂಡಿದ್ದರಿಂದ ಅವರ ಆರೋಗ್ಯ ಸ್ಥಿತಿ ಹದಗೆಟ್ಟು, ಅಂತಿಮವಾಗಿ ಅವರು ಮೃತಪಟ್ಟರು. ಈ ಘಟನೆಯು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಹೆಣ್ಣಿನ ಭಯ!

ತನ್ನ ಹಣವನ್ನು ಹೆಂಡತಿ ಕೊಂಡೊಯ್ಯಬಹುದು ಎಂಬ ಭಯದಿಂದ ಈ ಪುಣ್ಯಾತ್ಮ ಮದುವೆಯಾಗಿರಲಿಲ್ಲ. ಮದುವೆಯಾದರೆ, ಪತ್ನಿ ಎಲ್ಲಿ ತನ್ನ ಹಣವನ್ನು ಲಪಟಾಯಿಸಿಕೊಂಡು ಓಡಿ ಹೋಗುತ್ತಾಳೋ ಎನ್ನುವ ಭಯದಿಂದ ಮದುವೆಯಾಗಿರಲಿಲ್ಲ. ಆದರೆ, ಈಗ ಆಗಿದ್ದೇ ಬೇರೆ. ಈ ಪ್ರಕರಣವು ಈಗ ಚರ್ಚೆಯ ವಿಷಯವಾಗಿದೆ. ತನ್ನ ಜೀವಮಾನದ ಉಳಿತಾಯವನ್ನು ಹೆಂಡತಿ ತೆಗೆದುಕೊಂಡು ಹೋಗಿಬಿಡಬಹುದು ಎಂಬ ಭಯ ಅವರಿಗಿತ್ತು ಎಂದು ಹೇಳಲಾಗಿದೆ. ಹೀಗಾಗಿ, ಅವರು ಒಂಟಿಯಾಗಿ ಬದುಕಲು ನಿರ್ಧರಿಸಿ, ತಮ್ಮ ಗಳಿಕೆಯನ್ನು ಖರ್ಚು ಮಾಡುವ ಬದಲು ಉಳಿತಾಯ ಮಾಡಿದ್ದರು.

70 ಲಕ್ಷ ಹಣ

ಅವರ ಮರಣದ ನಂತರವೇ ಅವರ ಖಾತೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತ ಇರುವುದು ಬಹಿರಂಗವಾಯಿತು. ಆದಾಗ್ಯೂ, ಖಾತೆಯಲ್ಲಿರುವ ನಿಖರವಾದ ಮೊತ್ತ, ಅವರ ಕಾನೂನುಬದ್ಧ ಉತ್ತರಾಧಿಕಾರಿ ಯಾರು ಮತ್ತು ಈ ಘಟನೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳ ಬಗ್ಗೆ ಅಧಿಕೃತ ದೃಢೀಕರಣ ಇನ್ನೂ ಸಿಗಬೇಕಿದೆ.

ಮೃತ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿ ದೊಡ್ಡ ಮೊತ್ತ ಪತ್ತೆಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೂ, ಅವರು ವೈದ್ಯಕೀಯ ಚಿಕಿತ್ಸೆಗಾಗಿ ಹಣವನ್ನು ಏಕೆ ಖರ್ಚು ಮಾಡಲಿಲ್ಲ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಅಲ್ಲದೆ, ಅವರ ಕುಟುಂಬದವರಿಗೆ ಅಥವಾ ಪರಿಚಯಸ್ಥರಿಗೆ ಅವರ ಉಳಿತಾಯದ ಬಗ್ಗೆ ಎಷ್ಟರ ಮಟ್ಟಿಗೆ ತಿಳಿದಿತ್ತು ಎಂಬುದು ಸ್ಪಷ್ಟವಾಗಿಲ್ಲ. ಖಾತೆಯಲ್ಲಿರುವ ಹಣವನ್ನು ಕಾನೂನುಬದ್ಧವಾಗಿ ಯಾರು ಪಡೆಯುತ್ತಾರೆ ಎಂಬುದು, ಉತ್ತರಾಧಿಕಾರಿಯನ್ನು ಗುರುತಿಸಿ ಅಗತ್ಯ ದಾಖಲೆಗಳನ್ನು ಒದಗಿಸಿದ ನಂತರವಷ್ಟೇ ತಿಳಿಯಲಿದೆ. ಸದ್ಯ ಲಭ್ಯವಿರುವ ಮಾಹಿತಿಯಲ್ಲಿ ಈ ಅಂಶಗಳ ಬಗ್ಗೆ ಯಾವುದೇ ವಿವರಗಳಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

RAMAYANA: ರಾಮಾಯಣ ಬಾಕ್ಸ್ ಆಫೀಸ್‌ನಲ್ಲಿ ರಾಕಿಂಗ್ ಸ್ಟಾರ್ 'ರಾವಣ'ನ ಅಬ್ಬರ; ಯಶ್‌ಗೆ ತೆರೆ ಮೇಲೆ ಜೈಕಾರ, ತೆರೆ ಹಿಂದೆ ಝಣಝಣ ಕಾಂಚಾಣ!
ಕಾಂಗ್ರೆಸ್ ಕಾರ್ಯಕರ್ತರೇ ಮತ್ತೆ ದೆಹಲಿಗೆ ತೆರಳಲು ಸಜ್ಜಾಗಿ, ನ.26ಕ್ಕೆ ರಾಜಧಾನಿಯಲ್ಲಿ ರಣಕಹಳೆ