
ತಿರುವನಂತಪುರಂ (ನ.06) ಅರಣ್ಯದಲ್ಲಿ ತೀವ್ರ ಅನಾರೋಗ್ಯದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಆನೆ ಮರಿಯನ್ನು ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ತನ್ನ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಆರಂಭಿಸಿದ್ದಾರೆ. ಆದರೆ ಆನೆ ಮರಿಯ ಆರೋಗ್ಯ ಕ್ಷೀಣಿಸುತ್ತಾ ಸಾಗಿದೆ. 18 ತಿಂಗಳ ಆನೆ ಮರಿ ಉಳಿಸಲು ಅರಣ್ಯ ಇಲಾಖೆ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಗುಜರಾತ್‌ನಲ್ಲಿರುವ ಅನಂತ್ ಅಂಬಾನಿಯ ವಂತಾರಾಗೆ ಏರ್‌ಲಿಫ್ಟ್ ಮಾಡಿದೆ. ವಿಮಾನದ ಮೂಲಕ ಕೇರಳದಿಂದ ಗುಜರಾತ್‌ನ ವಂತಾರಾಗೆ ಆನೆ ಮರಿಯನ್ನು ಏರ್‌ಲಿಫ್ಟ್ ಮಾಡಿದ್ದಾರೆ.
ಜಾಮ್‌ನಗರದಲ್ಲಿರುವ ರಿಲಯನ್ಸ್ ವಂತಾರಾ ವನ್ಯಜೀವಿ ಪುನರ್ವತಸಿ ಕೇಂದ್ರಕ್ಕೆ ಆನೆ ಮರಿಯನ್ನು ವಿಮಾನ ಮೂಲಕ ಕರೆದೊಯ್ಯಲಾಗಿದೆ. ಭಾರತದ ವನ್ಯಜೀವಿ ಆರೈಕೆ ಇತಿಹಾಸದಲ್ಲಿ ಕೇರಳದಿಂದ ವಂತಾರಾಗೆ ಇದೇ ಮೊದಲ ಬಾರಿಗೆ ಆನೆ ಮರಿಯನ್ನು ಏರ್‌ಲಿಫ್ಟ್ ಮೂಲಕ ಕರೆದೊಯ್ಯಲಾಗಿದೆ. ಇದು ಕೇರಳ ಅರಣ್ಯ ಇಲಾಖೆ ಕೈಗೊಂಡು ಮಾನವೀಯ ಹಾಗೂ ಹೃದಯಸ್ವರ್ಶಿ ನಿರ್ಧಾರವಾಗಿದೆ.
ಕೆಲವೇ ತಿಂಗಳ ಹಿಂದೆ ವಯನಾಡು ಅರಣ್ಯ ಗಡಿ ಭಾಗದಲ್ಲಿ ತಾಯಿಯಿಂದ ಬೇರ್ಪಟ್ಟ ಆನೆ ಮರಿಯನ್ನು ಅರಣ್ಯ ಇಲಾಖೆ ರಕ್ಷಿಸಿತ್ತು. ಮಾಯಾ ಎಂದು ಹೆಸರಿಡಲಾಗಿತ್ತು. ಕೊಯ್ಯಂ ಆನೆ ಪುನರ್ವಸತಿ ಕೇಂದ್ದಲ್ಲಿ ಆರೈಕೆ ಮಾಡುತ್ತಿದ್ದ ವೇಳೆ ಆನೆಗೆ ಕರುಳಿನ ಸೋಂಕು ಕಾಣಿಸಿಕೊಂಡಿತ್ತು. ಜೊತೆಗೆ ಅಪೌಷ್ಠಿಕತೆ, ಯಕೃತ್ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಂಡಿತ್ತು. ಕೇರಳದ ವೈದ್ಯಕೀಯ ತಂಡ ಶಕ್ತಿ ಮೀರಿ ಪ್ರಯತ್ನಿಸಿದರೂ ಆನೆ ಮರೆಯ ಆರೋಗ್ಯ ಚೇತರಿಕೆ ಕಾಣಲಿಲ್ಲ. ತೀವ್ರ ಅಸ್ವಸ್ಥಗೊಂಡ ಆನೆ ಮರಿ ಆರೋಗ್ಯ ಕ್ಷಣದಿಂದ ಕ್ಷಣಕ್ಕೆ ಕ್ಷೀಣಿಸುತ್ತಿತ್ತು. ಹೆಚ್ಚಿನ ಚಿಕಿತ್ಸೆ ಕೊರತೆ ಕಾರಣ ವನ್ಯಜೀವಿ ತಜ್ಞರ ಸೂಚನೆಯಂತೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಹೊಂದಿರುವ ಅನಂತ್ ಅಂಬಾನಿಯ ವಂತಾರಾ ಕೇಂದ್ರಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು.
ಆನೆ ಮರಿ ಆರೋಗ್ಯ ತೀವ್ರವಾಗಿ ಹದಗೆಟ್ಟಿರುವ ಕಾರಣ ಕೇರಳ ಅರಣ್ಯ ಇಲಾಖೆ ತಕ್ಷಣವೇ ವಿಮಾನದ ಮೂಲಕ ಗುಜರಾತ್‌ನ ಜಾಮ್‌ನಗರದ ವಂತಾರಗೆ ಏರ್‌ಲಿಫ್ಟ್ ಮಾಡಲು ಸೂಚಿಸಿತ್ತು. ಇದರಂತೆ ಕೊಚ್ಟಿ ವಿಮಾನ ನಿಲ್ದಾಣದಿಂದ ವಿಶೇಷ ಸರಕು ಸಾಗಾಣೆ ವಿಮಾನದ ಮೂಲಕ ಮಾಯ ಆನೆ ಮರಿಯನ್ನು ಶಿಫ್ಟ್ ಮಾಡಲಾಗಿದೆ. ವಂತಾರಾ ವೈದ್ಯಕೀಯ ಹಾಗೂ ಲಾಜಿಸ್ಟಿಕ್ ತಂಡದ ನೆರವಿನೊಂದಿಗೆ ಮಾಯಾ ಆನೆ ಮರಿಯನ್ನು ವಿಮಾನದ ಮೂಲಕ ಏರ್‌ಲಿಫ್ಟ್ ಮಾಡಲಾಗಿದೆ. ಇದೀಗ ಮಾಯಾ ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಲವರು ಪ್ರಾರ್ಥಿಸಿದ್ದಾರೆ.
An abandoned newborn elephant calf rescued at Kaprikkad in April 2025 is being airlifted from Abhayaranyam to Vantara, Jamnagar, for bone treatment.
CWLW Dr. P. Pugazhendi IFS ordered the move on Nov 5, 2026. The mahout & vet doctor accompany it. 🐘 https://t.co/ZI6VbDRKqK
— Kerala Forest Department (@keralaforestdep) November 6, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ