ಜಿಂಕೆಯೊಂದು ಬೀದಿನಾಯಿಗಳಿಂದ ತಪ್ಪಿಸಿಕೊಳ್ಳಲು ಓಡಿ ಹೋಗಿ ಎಟಿಎಂ ಒಳಗೆ ನುಗ್ಗಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಗುಜರಾತ್‌ನ ಧಾರಿ ಎಂಬಲ್ಲಿ ಈ ಘಟನೆ ನಡೆದಿದೆ.
ಜಿಂಕೆಯೊಂದು ಬೀದಿನಾಯಿಗಳಿಂದ ತಪ್ಪಿಸಿಕೊಳ್ಳಲು ಓಡಿ ಹೋಗಿ ಎಟಿಎಂ ಒಳಗೆ ನುಗ್ಗಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಗುಜರಾತ್‌ನ ಧಾರಿ ಎಂಬಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋವನ್ನು ಅಲ್ಲೇ ಇದ್ದ ಸ್ಥಳೀಯರು ರೆಕಾರ್ಡ್ ಮಾಡಿಕೊಂಡಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಾಯಿಗಳ ಗುಂಪಿನಿಂದ ತಪ್ಪಿಸಿಕೊಂಡು ಪಾರಾಗಲು ಈ ಶ್ವಾನ ಅಲ್ಲೇ ಇದ್ದ ಎಟಿಎಂ ಒಳಗೆ ಹೋಗಿ ನುಗ್ಗಿದೆ. ನಂತರ ಅದಕ್ಕೆ ಸಿಲುಕಿಕೊಂಡಂತಹ ಅನುಭವವಾಗಿದ್ದು, ವಾಪಸ್ ಹೊರ ಬರಲು ತಿಳಿಯದೇ ಏಟಿಎಂಗಳ ಮೇಲೆಲ್ಲಾ ಹಾರುತ್ತಾ ಹೊರಬರಲು ಪ್ರಯತ್ನಿಸಿದೆ. ನಂತರ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಬಳಿಕ ಸ್ಥಳಕ್ಕೆ ಆಗಮಿಸಿದ ಅವರು ಎಟಿಎಂ ಒಳಗಿದ್ದ ಜಿಂಕೆಯನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಂಕೆ ನವಿಲು ಮೊಲ ಮುಂತಾದ ಕಾಡುಪ್ರಾಣಿಗಳು ಕಾಡಂಚಿನ ಜನವಸತಿ ಪ್ರದೇಶಗಳಿಗೆ ಬಂದು ಅಪಾಯಕ್ಕೆ ಸಿಲುಕುವುದು ಇತ್ತೀಚೆಗೆ ಸಾಮಾನ್ಯ ಎನಿಸಿದೆ. ಕಾಡಂಚಿನ ಗ್ರಾಮಗಳಲ್ಲಂತೂ ಆನೆ ಮಂಗ ಮುಂತಾದ ಪ್ರಾಣಿಗಳು ರೈತರ ಬೆಳೆಗಳನ್ನು ನಾಶ ಪಡಿಸುತ್ತವೆ.
ತಬ್ಬಿ ಹಿಡಿದು ಜಿಂಕೆಗೆ ಮುತ್ತಿಕ್ಕಿದ ಪೋರ
ಇಲ್ಲಿ ಜಿಂಕೆಯೊಂದಿಗೆ (Deer) ಮುದ್ದು ಮಗುವಿನ ಒಡನಾಟವೊಂದು ವೈರಲ್ ಆಗಿದೆ. jesseramirez89 ಎಂಬ ಇನ್ಸ್ಟಾ ಪೇಜ್‌ನಿಂದ ಈ ವಿಡಿಯೋ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಈಗಷ್ಟೇ ನಡೆಯಲು ಕಲಿತಿರುವ ಪುಟ್ಟ ಕಂದನೋರ್ವ ಜಿಂಕೆಯೊಂದನ್ನು ಮುದ್ದು ಮಾಡುತ್ತಿದ್ದಾನೆ. ತಲೆಗೆ ನೀಲಿ ಕ್ಯಾಪ್ ಹಾಗೂ ಕಾಲಿಗೆ ನೀಲಿ ಶೂ ಹಾಗೂ ಕಪ್ಪು ಬಣ್ಣದ ಟೀ ಶರ್ಟ್ (Tea Shirt) ಹಾಗೂ ಚಡ್ಡಿಯನ್ನು ಬಾಲಕ ಧರಿಸಿದ ಅದನ್ನು ತಬ್ಬಿಕೊಂಡು ಅದಕ್ಕೆ ಮುತ್ತ ನೀಡಲು ಬಾಲಕ (Boy) ಯತ್ನಿಸುತ್ತಿದ್ದಾನೆ. ಈ ಮುದ್ದಾದ ವಿಡಿಯೋವನ್ನು ಸಾವಿರಾರು ಜನ ಲೈಕ್ ಮಾಡಿದ್ದಾರೆ. ಪುಟ್ಟ ಬಾಲಕ ಹಾಗೂ ಜಿಂಕೆಯ ನಡುವಿನ ಮುದ್ದಾದ ಅನುಬಂಧಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಂತಹಾ ಸುಂದರ ಕ್ಷಣ, ತುಂಬಾ ಒಳ್ಳೆಯ ಹುಡುಗ (Boy), ಬದುಕು ಹೀಗೆಯೇ ಇರಬೇಕು ಎಂದು ಒಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡಿದ್ದಾರೆ. ಆದರೆ ಎಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.
ಮಕ್ಕಳೊಂದಿಗೆ ಶ್ವಾನದ ಜಾರುಬಂಡಿ ಆಟ
ಶ್ವಾನಗಳ ಅನೇಕ ಮುದ್ದಾದ ವಿಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ(Social Media) ಈಗಾಗಲೇ ನೋಡಿರಬಹುದು ಹಾಗೆಯೇ ಇಲ್ಲೊಂದು ಶ್ವಾನ ಜಾರು ಬಂಡಿ ಆಡುತ್ತಿದೆ. ಒಂದು ಬದಿಯಲ್ಲಿರುವ ಸ್ಟೆಪ್ ಮೇಲೇರುವ ಶ್ವಾನ ಮತ್ತೊಂದು ಕಡೆಯ ಇಳಿಜಾರಿನಲ್ಲಿ ಜಾರುತ್ತಾ ಹೋಗಿ ಮಕ್ಕಳಂತೆ ಎಂಜಾಯ್ ಮಾಡುತ್ತಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಮಾಡಲಾಗಿದ್ದು ವಿಡಿಯೋ ಪೋಸ್ಟ್ ಆದಾಗಿನಿಂದ ಮೂರು ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಪಾರ್ಕೊಂದರಲ್ಲಿ ಇರುವ ಜಾರು ಬಂಡಿ ಇದಾಗಿದ್ದು, ಇದರಲ್ಲಿ ಮಕ್ಕಳು ಒಬ್ಬೊಬ್ಬರಾಗಿಯೇ ಮೆಟ್ಟಿಲ ಮೂಲಕ ಹತ್ತಿ ಮತ್ತೊಂದು ಭಾಗದಲ್ಲಿ ಮೇಲಿನಿಂದ ಕೆಳಗೆ ಹಾರುತ್ತಾರೆ. ಇದನ್ನು ನೋಡಿ ಮಕ್ಕಳ ಆಟದೊಂದಿಗೆ ತಾನು ಸೇರಿಕೊಳ್ಳುವ ಶ್ವಾನ ತಾನ್ಯಾರಿಗೂ ಕಡಿಮೆ ಇಲ್ಲ ಎಂಬಂತೆ ಮಕ್ಕಳೊಂದಿಗೆ ಜಾರುಬಂಡಿ ಆಟ ಆಡುತ್ತಿದ್ದು, ಮಕ್ಕಳು ಈ ಶ್ವಾನವನ್ನು ಇಷ್ಟ ಪಡುತ್ತಿದ್ದು, ಜೊತೆ ಜೊತೆಯಲ್ಲಿ ಕರೆದೊಯ್ಯುತ್ತಿದ್ದಾರೆ. ಈ ಪುಟ್ಟ ಶ್ವಾನ ನೀಲಿ ಬಣ್ಣದ ಜಾಕೆಟ್ (Jacket) ಧರಿಸಿದ್ದು, ಒಂದೊಂದೇ ಹೆಜ್ಜೆ ಇಡುತ್ತ ಮೆಟ್ಟಿಲು ಹತ್ತಿ ಕೆಳಗೆ ಜಾರುತ್ತಿದೆ.
ದಾಳಿ ಮಾಡಲು ಬಂದ ಚಿರತೆ ಮುಂದೆ ಧೈರ್ಯವಾಗಿ ನಿಂತ ಮೂರುಕಾಲಿನ ಜಿಂಕೆ
ಗೂಡು ಕಟ್ಟಲು ಜಿಂಕೆ ಬಾಲದಿಂದ ತುಪ್ಪಳ ಕೀಳುವ ಕಾಗೆ: Interesting video