ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬರಲಿದ್ದಾರೆ ಬ್ರೆಜಿಲ್ ಅಧ್ಯಕ್ಷ!

By Suvarna NewsFirst Published Jan 24, 2020, 12:53 PM IST
Highlights

ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿ| ಪ್ರಧಾನಿ ಮೋದಿ ಮನವಿಯನ್ನು ಪುರಸ್ಕರಿಸಿ ಭಾರತಕ್ಕೆ ಬರಲಿರುವ ಬ್ರೆಜಿಲ್ ಅಧ್ಯಕ್ಷ| ಇಂದಿನಿಂದಲೇ(ಜ.24) ಭಾರತ ಪ್ರವಾಸ ಕೈಗೊಳ್ಳಲಿರುವ ಜೈರ್ ಬೋಲ್ಸನಾರೊ| ಭಾರತಕ್ಕೆ ಬರಲಿದೆ ಬ್ರೆಜಿಲ್ ಸಂಪುಟದ 8 ಸಚಿವರು, ಸಂಸತ್ತಿನ ನಾಲ್ವರು ಸದಸ್ಯರು ಮತ್ತು ಉದ್ಯಮಿಗಳ ನಿಯೋಗ|

ನವದೆಹಲಿ(ಜ.24): ಈ ಬಾರಿಯ ಗಣರಾಜ್ಯೋತ್ಸವ ದಿನಾಚರಣೆಯ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಬರಲಿದ್ದಾರೆ. ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬರುವಂತೆ ಪ್ರಧಾನಿ ಮೋದಿ ಮಾಡಿದ್ದ ಮನವಿಯನ್ನು ಜೈರ್ ಬೋಲ್ಸನಾರೊ ಸ್ವೀಕರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ, ಬ್ರೆಜಿಲ್ ಅಧ್ಯಕ್ಷ ಬೋಲ್ಸೊನಾರೊ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

ಜೈರ್ ಬೋಲ್ಸನಾರೊ ಇಂದಿನಿಂದಲೇ(ಜ.24) ಭಾರತ ಪ್ರವಾಸ ಕೈಗೊಳ್ಳಲಿದ್ದು, ಜ.27ರವರೆಗೆ ಭಾರತದಲ್ಲಿ ಇರಲಿದ್ದಾರೆ. ಈ ವೇಳೆ ದೆಹಲಿಯ ರಾಜಪಥ್'ನಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್'ನ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಗಣತಂತ್ರಕ್ಕೆ ಗಣ್ಯರ ಕರೆಯಲು ಲಾಭದ ಲೆಕ್ಕಾಚಾರ: ಅಷ್ಟು ಸುಲಭವಲ್ಲ ಆಹ್ವಾನದ ವಿಚಾರ!

ಇನ್ನು ಬೋಲ್ಸನಾರೊ ಜೊತೆಗೆ ಅವರ ಸಂಪುಟದ 8 ಸಚಿವರು, ಬ್ರೆಜಿಲ್ ಸಂಸತ್ತಿನ ನಾಲ್ವರು ಸದಸ್ಯರು, ಹಿರಿಯ ಅಧಿಕಾರಿಗಳು ಮತ್ತು ಉದ್ಯಮಿಗಳ ನಿಯೋಗ ಭಾರತಕ್ಕೆ ಆಗಮಿಸುತ್ತಿರುವುದು ವಿಶೇಷ.

ವಿಶೇಷವೆಂದರೆ ಬ್ರೆಜಿಲ್‌ನ ಅಧ್ಯಕ್ಷರು ಗಣರಾಜ್ಯೋತ್ಸವ ಕಾರ್ಯಕ್ರಮದ ಅತಿಥಿಗಳಾಗಿ ಬರುತ್ತಿರುವುದು ಇದು ಮೂರನೇ ಬಾರಿ. ಆದರೆ ಬೊಲ್ಸೊನಾರೊ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ.

click me!