ಆನ್‌ಲೈನ್‌ 'ಮಳ್ಳಿ'ಗೆ ಮನಸೋತು 60 ಲಕ್ಷ ಕಳ್ಕೊಂಡ 65 ವರ್ಷದ ವಿಧುರ

By Anusha KbFirst Published Feb 13, 2023, 2:29 PM IST
Highlights

ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದ 65 ವರ್ಷದ ವೃದ್ಧರೊಬ್ಬರು ಬ್ಲಾಕ್‌ಮೇಲ್‌ಗೆ ಒಳಗಾಗಿ 60 ಲಕ್ಷ ಕಳೆದುಕೊಂಡು ನಾಮ ಹಾಕಿಸಿಕೊಂಡ ಘಟನೆ ಮಹಾನಗರಿ ಮುಂಬೈನಲ್ಲಿ ನಡೆದಿದೆ.

ಮುಂಬೈ: ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದ 65 ವರ್ಷದ ವೃದ್ಧರೊಬ್ಬರು ಬ್ಲಾಕ್‌ಮೇಲ್‌ಗೆ ಒಳಗಾಗಿ 60 ಲಕ್ಷ ಕಳೆದುಕೊಂಡು ನಾಮ ಹಾಕಿಸಿಕೊಂಡ ಘಟನೆ ಮಹಾನಗರಿ ಮುಂಬೈನಲ್ಲಿ ನಡೆದಿದೆ.  ಪತ್ನಿಯನ್ನು ಕಳೆದುಕೊಂಡಿದ್ದ 65 ವರ್ಷದ ವಿಧುರರೊಬ್ಬರು ಜೀವನದ ಸಂಧ್ಯಾಕಾಲದಲ್ಲಿ ಜೊತೆಗೊಂದು ಜೀವ ಬೇಕು ಎಂದು ಇಳಿವಯಸ್ಸಿನಲ್ಲಿ ಮರು ಮದುವೆಯಾಗಲು ಬಯಸಿದ್ದ ಅವರು ಸಂಗಾತಿಗಾಗಿ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದರು.  

ಹೀಗೆ ಮ್ಯಾಟ್ರಿಮೋನಿ ಸೈಟ್‌ನಲ್ಲಿ ಇವರಿಗೆ ಮಹಿಳೆಯೊಬ್ಬರ ಪರಿಚಯವಾಗಿದ್ದು,  ಅಲ್ಲೇ ಚಾಟಿಂಗ್ ನಂತರ ಪರಸ್ಪರ ನಂಬರ್ ಎಕ್ಸ್‌ಚೇಂಜ್ ಮಾಡಿಕೊಂಡಿದ್ದಾರೆ. ಇದಾದ ನಂತರ ಮಹಿಳೆ ವಿಡಿಯೋ ಕಾಲ್ ಮಾಡಲು ಶುರು ಮಾಡಿದ್ದು,  ಈ ವಿಡಿಯೋ ಕಾಲ್‌ನಲ್ಲಿ ಮಹಿಳೆ ಬೆತ್ತಲಾಗಿದ್ದಲ್ಲದೇ ಅಶ್ಲೀಲವಾಗಿ ವರ್ತಿಸಿ  ಈ ವೃದ್ಧನಿಗೂ ತಾನು ಮಾಡಿದಂತೆ ಮಾಡುವಂತೆ ಹೇಳಿದ್ದಾಳೆ. ಅದರಂತೆ ಈ ವಿಧುರ ಕೂಡ ಆಕೆ ಹೇಳಿದಂತೆ ಮಾಡಿದ್ದು, ಈ ವಿಡಿಯೋ ಕಾಲ್ ರೆಕಾರ್ಡ್ ಆಗುತ್ತಿರುವುದು ವೃದ್ಧನಿಗೆ ತಿಳಿದಿಲ್ಲ. 

ವಿಡಿಯೋ ಕಾಲ್‌ನಲ್ಲಿ ಬೆತ್ತಲಾಗಿ 2 ಕೋಟಿ ಕಳೆದುಕೊಂಡ ಗುಜರಾತ್ ಉದ್ಯಮಿ

ಇದಾದ ಬಳಿಕ ವೃದ್ಧನ ಬೆತ್ತಲೆ ವಿಡಿಯೋ ಇಟ್ಟುಕೊಂಡು ಈ ಆನ್‌ಲೈನ್ ಮಳ್ಳಿ, ವೃದ್ಧನಿಗೆ ಬ್ಲಾಕ್‌ಮೇಲ್ ಮಾಡಲು ಶುರು ಮಾಡಿದ್ದಾಳೆ. ತನಗೆ 60 ಲಕ್ಷ ನೀಡುವಂತೆ ಬೇಡಿಕೆ ಇರಿಸಿದ ಆಕೆ ಒಂದು ವೇಳೆ ಕೊಡದೇ ಇದ್ದಲ್ಲಿ ಈ ಬೆತ್ತಲೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದಾಳೆ. ಅಲ್ಲದೇ ನಿಮ್ಮ ಕಂಟಾಕ್ಟ್‌ನಲ್ಲಿರುವ ನಂಬರ್ ಅನ್ನು ನಾನು ಕಾಫಿ ಮಾಡಿಕೊಂಡಿದ್ದು, ಅವರಿಗೆಲ್ಲಾ 
ಈ ವಿಡಿಯೋವನ್ನು ಕಳುಹಿಸುವುದಾಗಿ ಬೆದರಿಸಿದ್ದಾಳೆ. 

ಈ ಹಿನ್ನೆಲೆಯಲ್ಲಿ ಮಾನ ಮರ್ಯಾದೆಗೆ ಅಂಜಿದ ವೃದ್ಧ ಸ್ವಲ್ಪ ಹಣವನ್ನು ಮಹಿಳೆಯ ಬ್ಯಾಂಕ್ ಅಕೌಂಟ್‌ಗೆ ಹಾಕಿದ್ದಾರೆ. ಆದರೆ ಮಹಿಳೆಯ ಹಣದ ದಾಹ ಮಾತ್ರ ನಿಂತಿಲ್ಲ. ಆಕೆ ಮತ್ತೆ ಹಲವು ತಿಂಗಳುಗಳ ಕಾಲ ವೃದ್ಧನಿಗೆ ಬ್ಲಾಕ್‌ಮೇಲ್ (blackmaile) ಮುಂದುವರಿಸಿದ್ದು, ಸುಮಾರು 60 ಲಕ್ಷ ಹಣವನ್ನು ಮಹಿಳೆ ವೃದ್ಧನಿಂದ ಪೀಕಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. 

ಆದರೆ ನಂತರದಲ್ಲಿ ಹಣದ ಮುಗ್ಗಟ್ಟು ಹಾಗೂ ಮಾನಸಿಕ ಹಿಂಸೆ ತಡೆದುಕೊಳ್ಳಲಾಗದೇ ವೃದ್ಧರು ಸೈಬರ್ ಪೊಲೀಸ್ ಮೊರೆ ಹೋಗಿದ್ದಾರೆ.  ಘಟನೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.  ಮಹಿಳೆ ಬಳಸುತ್ತಿದ್ದ ವಾಟ್ಸಾಪ್ ನಂಬರ್ ಹಾಗೂ ಈ ವ್ಯಕ್ತಿ ಹಣ ಹಾಕಿದ್ದ ಬ್ಯಾಂಕ್ ಡಿಟೇಲ್ ನಂಬರ್ ಎಲ್ಲವನ್ನು ಪರಿಶೀಲಿಸಿ ಈ ಬ್ಲಾಕ್‌ಮೇಲ್ ಕ್ವಿನ್ ಯಾರು ಎಂಬುದನ್ನು ಪತ್ತೆ ಮಾಡುವುದಾಗಿ ಪೊಲೀಸರು ಹೇಳಿದ್ದಾರೆ. 

ವಿಡಿಯೋ ಕಾಲ್‌ನಲ್ಲಿ ಯುವತಿಯ ಮೈಮಾಟಕ್ಕೆ ಸೋತು 90 ಸಾವಿರ ಕಳೆದುಕೊಂಡ ಯುವಕ..!

ಮ್ಯಾಟ್ರಿಮೋನಿಯಲ್ ವೇದಿಕೆಯಲ್ಲಿ ನೋಂದಾಯಿಸಿಕೊಂಡವರನ್ನು ಟಾರ್ಗೆಟ್ ಮಾಡಿಕೊಂಡು ಲೈಂಗಿಕವಾಗಿ ಬ್ಯಾಕ್‌ಮೇಲ್ ಮಾಡಿದ ಮೊದಲ ಪ್ರಕರಣ ಇದಾಗಿದೆ. ಸೋಶಿಯಲ್ ಮೀಡಿಯಾ  ಮೂಲಕ ಜನರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಹಲವು ಈ ರೀತಿ ವಂಚನೆ ಪ್ರಕರಣಗಳಲ್ಲಿ ಸಂತ್ರಸ್ತರು ಗಂಡಸರಾಗಿದ್ದಾರೆ. ಈ ಬಗ್ಗೆ ಎಲ್ಲರೂ ಜಾಗರೂಕರಾಗಿರಬೇಕಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

click me!