40 ವರ್ಷದ ನಂತ್ರ ಕುಟುಂಬ ಸೇರಿದ 93ರ ಅಜ್ಜಿ..! ಮೊಮ್ಮಗನ ಜೊತೆ ಹೊರಟು ನಿಂತಾಗ ಊರೇ ಅತ್ತಿತ್ತು

Suvarna News   | Asianet News
Published : Jun 21, 2020, 03:34 PM ISTUpdated : Jun 21, 2020, 10:52 PM IST
40 ವರ್ಷದ ನಂತ್ರ ಕುಟುಂಬ ಸೇರಿದ 93ರ ಅಜ್ಜಿ..! ಮೊಮ್ಮಗನ ಜೊತೆ ಹೊರಟು ನಿಂತಾಗ ಊರೇ ಅತ್ತಿತ್ತು

ಸಾರಾಂಶ

ಅಜ್ಜಿಯ ಮೊಮ್ಮಗ ಪೃಥ್ವಿ ಕುಮಾರ್ ಬಂದು ಅಜ್ಜಿಯನ್ನು ಕರೆದೊಯ್ಯುವಾಗ ಗ್ರಾಮಸ್ಥರೆಲ್ಲ ಪಂಚುಭಾಯಿ ಹೋಗುತ್ತಿರುವ ದಃಖದಲ್ಲಿ ಕಣ್ಣೀರಿಟ್ಟಿದ್ದಾರೆ. 40 ವರ್ಷದಿಂದ ಜೊತೆಗಿದ್ದ ಅಜ್ಜಿಯನ್ನು ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ.

ಭೋಪಾಲ್‌(ಜೂ.21): 40 ವರ್ಷಗಳ ಹಿಂದೆ 53 ವರ್ಷದ ಪಂಚುಭಾಯಿ ಆಕಸ್ಮಿಕವಾಗಿ ಮಧ್ಯಪ್ರದೇಶದ ಹಳ್ಳಿ ಸೇರಿದ್ದರು. ಕಳೆದ 4 ದಶಕಗಳಿಂದ ಅದೇ ಹಳ್ಳಿಯಲ್ಲಿ ಬದುಕಿದ್ದ ಆಕೆ ಕೊನೆಗೂ ತನ್ನ ಕುಟುಂಬವನ್ನು ಸೇರಿದ್ದಾರೆ.

93ರ ಅಜ್ಜಿಯನ್ನು ಆಂಟಿ ಎಂದು ಕರೆಯುತ್ತಿದ್ದ ಗ್ರಾಮಸ್ಥರು ಪಂಚುಭಾಯಿಯನ್ನು ಭಾವುಕರಾಗಿ ಬೀಳ್ಕೊಟ್ಟಿದ್ದಾರೆ. ಪುರುಷರೂ, ಮಹಿಳೆಯರೂ ಅಜ್ಜಿಯನ್ನು ಕಳುಹಿಸುವಾಗ ಭಾವುಕರಾಗಿದ್ದರು. ಗ್ರಾಮಸ್ಥರೆಲ್ಲ ಅಜ್ಜಿಯನ್ನು ಬೀಳ್ಕೊಡುತ್ತಿರುವ ವಿಡಿಯೋ ಕಾಣಬಹುದು.

ಮೈ ಕೊರೆಯುವ ಚಳಿಯಲ್ಲೂ ಲಡಾಖ್ ಗಡಿಯಲ್ಲಿ ನಮ್ಮ ಯೋಧರಿಂದ ಯೋಗ!

ಅಜ್ಜಿಯ ಮೊಮ್ಮಗ ಪೃಥ್ವಿ ಕುಮಾರ್ ಬಂದು ಅಜ್ಜಿಯನ್ನು ಕರೆದೊಯ್ಯುವಾಗ ಗ್ರಾಮಸ್ಥರೆಲ್ಲ ಪಂಚುಭಾಯಿ ಹೋಗುತ್ತಿರುವ ದಃಖದಲ್ಲಿ ಕಣ್ಣೀರಿಟ್ಟಿದ್ದಾರೆ. 40 ವರ್ಷದ ಹಿಂದೆ ಪಂಚುಭಾಯಿಯನ್ನು ರಕ್ಷಿಸಿದ ಕುಟುಂಬದಲ್ಲಿ ಈ ಅಜ್ಜಿ ಮನೆಯ ಸದಸ್ಯರಂತೆಯೇ ಇದ್ದರು. ಅಜ್ಜಿಯನ್ನು ಮನೆಗೆ ಕರೆತಂದ ವ್ಯಕ್ತಿ ನಿಧನರಾದರೂ, ಮನೆಯವರು ಮಾತ್ರ ಅಜ್ಜಿಯ ನಂಟು ಬಿಟ್ಟಿರಲಿಲ್ಲ. ತಮ್ಮ ಸ್ವಂತ ಅಜ್ಜಿಯಂತೆಯೇ ನೋಡಿಕೊಂಡಿದ್ದರು.

ಕೊರೋನಾ ಮಾಹಿತಿ ಹಂಚಿಕೆ: ಕರ್ನಾಟಕ ಬೆಸ್ಟ್‌, ತಾಲೂಕು ಮಟ್ಟದ ಮಾಹಿತಿಯೂ ಲಭ್ಯ!

ಮೇ 3ರಂದು ಮೊಬೈಲ್ ನೋಡುತ್ತಿದ್ದ ಪಂಚುಭಾಯಿಯ ಮೊಮ್ಮಗ ಆಕೆಯಲ್ಲಿ ಆಕೆಯ ಕುಟುಂಬದ ಬಗ್ಗೆ ಕೇಳಿ ಆ ಮಾಹಿತಿ ಪಡೆದು ಆ ಗ್ರಾಮಸ್ಥರನ್ನು ಸಂಪರ್ಕಿಸಿದ್ದಾನೆ. ವಾಟ್ಸಾಪ್ ಮೂಲಕ ಅಜ್ಜಿಯ ಫೋಟೋ ಕಳುಹಿಸಲಾಗಿತ್ತು. ಸ್ವಲ್ಪ ಸಮಯದಲ್ಲೇ ಅಜ್ಜಿಯ ನಿಜವಾದ ಮೊಮ್ಮಗ, ಅವರ ಕುಟುಂಬದ ಮಾಹಿತಿ ಲಭ್ಯವಾಗಿತ್ತು.

ಅಜ್ಜಿಯನ್ನು ಕರೆದೊಯ್ಯಲು ಬಂದ ಮೊಮ್ಮಗ ಗ್ರಾಮಸ್ಥರ ಪ್ರೀತಿ ಕಂಡು ಅಚ್ಚರಿಗೊಳಗಾಗಿದ್ದಾರೆ. ಗ್ರಾಮಸ್ಥರು ಆಕೆಯನ್ನು ನೋಡಿಕೊಂಡ ರೀತಿಗೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?