
ಹೈದರಾಬಾದ್(ಜೂ. 21) ಕೊರೋನಾ ಪಾಸಿಟಿವ್ ಲಕ್ಷಣಗಳಿದ್ದ 39 ವರ್ಷದ ನರೇಂದ್ರ ಸಿಂಗ್ ಹೈದರಾಬಾದಿನ ಗಾಂಧಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು. ಈಗ ವಿಚಿತ್ರ ಎಂಬಂತೆ ಆತನ ಶವ ಆಸ್ಪತ್ರೆಯ ಶವಾಗಾರದಲ್ಲಿ ಪತ್ತೆಯಾಗಿದೆ.
ಅಪರಚಿತ ಶವಗಳ ಜತೆ ನರೇಂದ್ರ ಸಿಂಗ್ ಶವ ಇತ್ತು, ನರೇಂದ್ರ ಸಿಂಗ್ ಅವರನ್ನು ಕುಟುಂಬದವರು ಗುರುತು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ವಾರಂಟೈನ್ ಕೇಂದ್ರದಲ್ಲಿ ಯುವತಿ ತೆರಳಿದ್ದ ಬಾತ್ ರೂಂಗೆ ನುಗ್ಗಿದ
ಮೇ 30 ರಂದು ನರೇಂದ್ರ ಸಿಂಗ್ ಆಸ್ಪತ್ರೆಯ ಹೊರರೋಗಿಯಾಗಿ ದಾಖಲಾಗಿದ್ದರು. ಜ್ವರ ಮತ್ತು ಶೀತದಿಂದ ಬಳಲುತ್ತಿದ್ದರು. ಮೊದಲು ಒಸ್ಮಾನಿಯಾ ಆಸ್ಪತ್ರೆಗೆ ತೆರಳಿದ್ದ ಸಿಂಗ್ ರನ್ನು ನಂತರ ಗಾಂಧಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಮೇ 31 ರಿಂದ ಆತ ಕಣ್ಮರೆಯಾಗಿದ್ದು ಕುಟುಂಬದವರು ನಾಪತ್ತೆ ದೂರು ಸಹ ದಾಖಲಿಸಿದ್ದರು.
ತನಿಖೆ ಕೈಗೆತ್ತಿಕೊಂಡ ಪೊಲೀಸರು ಆಸ್ಪತ್ರೆಯ ಶವಾಗಾರದಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅನುಮಾನ ಬಂದು ಕುಟುಂಬದವರನ್ನು ಕರೆಸಿ ಗುರುತು ಪತ್ತೆ ಮಾಡಲು ಹೇಳಿದಾಗ ನರೇಂದ್ರ ಸಿಂಗ್ ಶವ ಪತ್ತೆಯಾಗಿದೆ. ನರೇಂದ್ರ ಸಿಂಗ್ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಪೊಲೀಸರು ಶವಾಗಾರದಲ್ಲಿದ್ದ 35 ರಿಂದ 40 ವರ್ಷ ವಯೋಮಾನದವರ ಶವಗಳ ಪರಿಶೀಲನೆ ಮಾಡಿದ್ದಾರೆ. ಅಲ್ಲಿ ನರೇಂದ್ರ ಸಿಂಗ್ ಪತ್ತೆಯಾದರೂ ಆಸ್ಪತ್ರೆಯ ರಿಜಿಸ್ಟರ್ ನಲ್ಲಿ ಆತನ ವಯಸ್ಸು 55 ಎಂದು ದಾಖಲು ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಳ್ಳುವ ಯತ್ನ ಮಾಡಿದ್ದರೂ ಸಾಧ್ಯವಾಗಿಲ್ಲ. ನರೇಂದ್ರ ಸಿಂಗ್ ಮೊಬೈಲ್ ಆಧಾರದಲ್ಲಿಯೂ ತನಿಖೆ ನಡೆಯುತ್ತಿದೆ.
ನರೇಂದ್ರ ಸಿಂಗ್ ಮೇ 31 ರಂದು ರಾತ್ರಿ 10.30 ಕ್ಕೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಆರಂಭಿಕ ಮಾಹಿತಿ ನೀಡಿದ್ದಾರೆ. ಆಂಬುಲೆನ್ಸ್ ಚಾಲಕನೊಬ್ಬ ನರೇಂದ್ರ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದ ಎನ್ನಲಾಗಿದ್ದು ಆ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ