90 ವರ್ಷದ ಹಿರಿಯ ಪದ್ಮಶ್ರೀ ವಿಜೇತ ಕಲಾವಿದನ ಮನೆ ಖಾಲಿ ಮಾಡಿಸಿದ ಕೇಂದ್ರ, ಗರಿಗೆದರಿದ ಚರ್ಚೆ

Published : Apr 28, 2022, 01:24 PM ISTUpdated : Apr 28, 2022, 03:08 PM IST
90 ವರ್ಷದ ಹಿರಿಯ ಪದ್ಮಶ್ರೀ ವಿಜೇತ ಕಲಾವಿದನ ಮನೆ ಖಾಲಿ ಮಾಡಿಸಿದ ಕೇಂದ್ರ, ಗರಿಗೆದರಿದ ಚರ್ಚೆ

ಸಾರಾಂಶ

Government Bunglow Eviction Row: ಗುರು ಮಾಯಾಧರ್‌ ರಾವತ್‌ ಅವರ ಮನೆಯಲ್ಲಿ ಅಧಿಕಾರಿಗಳು ಖಾಲಿ ಮಾಡಿಸುತ್ತಿರುವ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ತೊಂಭತ್ತು ವರ್ಷದ ವೃದ್ಧ ಕಲಾವಿದರ ಮನೆಯ ಸಾಮಾನುಗಳನ್ನು ಹೊರಗಿಟ್ಟಿರುವ ದೃಶ್ಯ ನೋಡಿ ಸಾರ್ವಜನಿಕ ಆಕ್ರೋಶ ಕೇಳಿಬಂದಿತ್ತು.

ನವದೆಹಲಿ: ಪದ್ಮಶ್ರೀ ಪ್ರಶಸ್ತಿ ವಿಜೇತ ಹಿರಿಯ ಓಡಿಸ್ಸಿ ನೃತ್ಯ ಕಲಾವಿದ ಗುರು ಮಾಯಾಧರ್‌ ರಾವತ್‌ ಅವರಿಗೆ ನೀಡಿದ್ದ ಸರ್ಕಾರಿ ನಿವಾಸದಿಂದ ಅವರನ್ನು ಖಾಲಿ ಮಾಡಿಸಿದ ಬೆನ್ನಲ್ಲೇ ಇನ್ನೂ ಏಳು ಖ್ಯಾತ ಕಲಾವಿದರಿಗೆ ಮನೆ ಖಾಲಿ ಮಾಡಲು ಮೇ 2ರವರೆಗೆ ಕಾಲಾವಧಿ ನೀಡಲಾಗಿದೆ. ಕೇಂದ್ರ ಸರ್ಕಾರ ಬುಧವಾರ ಈ ಆದೇಶವನ್ನು ಹೊರಡಿಸಿದ್ದು, ದೆಹಲಿ ಹೈಕೋರ್ಟ್‌ ಕೂಡ ಆದೇಶವನ್ನು ಬೆಂಬಲಿಸಿದೆ. ಸರ್ಕಾರಿ ನಿವಾಸದಿಂದ ತೆರವುಗೊಳಿಸುವ ನಿರ್ಧಾರ ಕೇಂದ್ರ ಸರ್ಕಾರದ್ದು ಮತ್ತು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ. ಇದು ಹೊಸ ಚರ್ಚೆಗಳಿಗೆ ನಾಂದಿಹಾಡಿದ್ದು, ಹಿರಿಯ ಕಲಾವಿದರ ಜೀವನಕ್ಕೆ ಸಮಸ್ಯೆಯಾಗಲಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. 

ಹಿರಿಯ ಕಲಾವಿದರಿಗೆ ಗೌರವಾರ್ಥವಾಗಿ ಉಳಿದುಕೊಳ್ಳಲು ನವದೆಹಲಿಯಲ್ಲಿ ಸರ್ಕಾರ ನಿವಾಸಗಳನ್ನು ದಶಕದ ಹಿಂದೆ ನೀಡಲಾಗಿತ್ತು. ಆದರೆ 2014ರಲ್ಲಿ ಈ ಅವಧಿ ಅಂತ್ಯವಾಗಿತ್ತು. ಇದೇ ವರ್ಷದ ಫೆಬ್ರವರಿಯಲ್ಲಿ ನಿವಾಸ ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ನೊಟೀಸ್‌ ಜಾರಿಗೊಳಿಸಿತ್ತಾದರೂ ನಿವಾಸವನ್ನು ಯಾರೂ ಖಾಲಿ ಮಾಡಿರಲಿಲ್ಲ. ಕೇಂದ್ರ ವಸತಿ ಮತ್ತು ನಗರ ಸೌಲಭ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ಒಟ್ಟೂ 28 ಕಲಾವಿದರಿಗೆ ನೊಟೀಸ್‌ ನೀಡಲಾಗಿತ್ತು. ಅದರಲ್ಲಿ ಇನ್ನೂ 8 ಮಂದಿ ನಿವಾಸ ಖಾಲಿ ಮಾಡಿಲ್ಲ. ಹಲವು ಸುತ್ತಿನ ನೊಟೀಸ್‌ ನೀಡಿದರೂ ಖಾಲಿ ಮಾಡದೇ ಇರುವುದರಿಂದ ಈಗ ಅನಿವಾರ್ಯವಾಗಿ ತೆರವುಗೊಳಿಸುವ ಅಗತ್ಯ ಸೃಷ್ಟಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

"ಈ ಎಂಟೂ ಕಲಾವಿದರು ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಕೊಂಚ ಸಮಯಾವಧಿಯಲ್ಲಿ ಕೇಳಿದ್ದಾರೆ. ಮೇ 2ರ ಒಳಗಾಗಿ ಮನೆ ಖಾಲಿ ಮಾಡುತ್ತೇವೆಂದು ಲಿಖಿತ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಅವರಿಗೆ ಹೆಚ್ಚುವರಿ ಸಮಯವನ್ನು ನೀಡಿದ್ದೇವೆ," ಎಂದು ಅಧಿಕಾರಿಯೊಬ್ಬರು ಪ್ರೆಸ್‌ ಟ್ರಸ್ಟ್‌ ಆಫ್‌ ಇಂಡಿಯಾಗೆ ಮಾಹಿತಿ ನೀಡಿದ್ದಾರೆ. 

ಗುರು ಮಾಯಾಧರ್‌ ರಾವತ್‌ ಅವರ ಮನೆಯಲ್ಲಿ ಅಧಿಕಾರಿಗಳು ಖಾಲಿ ಮಾಡಿಸುತ್ತಿರುವ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ತೊಂಭತ್ತು ವರ್ಷದ ವೃದ್ಧ ಕಲಾವಿದರ ಮನೆಯ ಸಾಮಾನುಗಳನ್ನು ಹೊರಗಿಟ್ಟಿರುವ ದೃಶ್ಯ ನೋಡಿ ಸಾರ್ವಜನಿಕ ಆಕ್ರೋಶ ಕೇಳಿಬಂದಿತ್ತು. ಸರ್ಕಾರದ ನಿಯಮಾವಳಿ ಪ್ರಕಾರ ಒಟ್ಟೂ 40 ಕಲಾವಿದರಿಗೆ ಸರ್ಕಾರಿ ನಿವಾಸ ನೀಡಬಹುದು. ಆದರೆ ಅವರ ಮಾಸಿಕ ಆದಾಯ ಇಪ್ಪತ್ತು ಸಾವಿರ ರೂಪಾಯಿಗಳನ್ನು ಮೀರಿರಬಾರದು. ಆದರೆ ಈಗ ನೊಟೀಸ್‌ ನೀಡಿರುವ ಕಲಾವಿದರ ಮಾಸಿಕ ಆದಾಯ ಹೆಚ್ಚಿದ್ದು, ಅವರು ಸರ್ಕಾರ ಬಂಗಲೆಯಲ್ಲಿ ವಾಸಿಸಲು ನಿಯಮಾವಳಿ ಒಪ್ಪುವುದಿಲ್ಲ ಎನ್ನಲಾಗಿದೆ. 

ಇದನ್ನೂ ಓದಿ: Prashant Kishor ಕಾಂಗ್ರೆಸ್‌ ಸೇರಲ್ಲ ಅನ್ನೋದನ್ನ ಮೊದಲ ದಿನವೇ ಹೇಳಿದ್ದರಂತೆ Rahul Gandhi

ತಿಂಗಳ ಆರಂಭದಲ್ಲಿ ರೀಟಾ ಗಂಗೂಲಿ ಬಂಗಲೆ ತೆರವುಮಾಡಲು ಇನ್ನಷ್ಟು ಕಾಲಾವಕಾಶ ಕೋರಿ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್‌ ಮತ್ತಷ್ಟು ಕಾಲಾವಕಾಶ ನೀಡಲು ಸಾಧ್ಯವಿಲ್ಲ ಎಂದಿತ್ತು. ಇದನ್ನು ರೀಟಾ ಗಂಗೂಲಿ ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು, ಆದರೆ ಏಪ್ರಿಲ್‌ ತಿಂಗಳ ಅಂತ್ಯದೊಳಗೆ ನಿವಾಸ ಖಾಲಿ ಮಾಡುವಂತೆ ಕೋರ್ಟ್‌ ಆದೇಶಿಸಿತ್ತು. 

ಇದನ್ನೂ ಓದಿ: ಮೋದಿ ಸಭೆ ವೇಳೆ ಮೈಮುರಿದ ಕೇಜ್ರಿವಾಲ್, ಮ್ಯಾನರ್ಸ್ ಇಲ್ಲ ಎಂದ ಬಿಜೆಪಿ!

ಸರ್ಕಾರಿ ಆದೇಶದ ಅನ್ವಯ ಹಲವು ರಾಜಕಾರಣಿಗಳು ಕೂಡ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಬೇಕು. ಬಿಜೆಪಿಯ ಹಲವು ಹಿರಿಯ ನಾಯಕರಿಗೂ ಈ ನಿಯಮ ಅನ್ವಯಿಸುತ್ತಿದೆ, ಹಲವು ಪಕ್ಷಗಳ ನಾಯಕರಿಗೆ ಈಗಾಗಲೇ ನೊಟೀಸ್‌ ಜಾರಿಗೊಳಿಸಲಾಗಿದೆ ಎನ್ನಲಾಗಿದೆ. ಮೇ ಎರಡರೊಳಗೆ ಉಳಿದ ಎಂಟು ಕಲಾವಿದರು ಮನೆ ಖಾಲಿ ಮಾಡದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಬಲವಂತದಿಂದ ತೆರವು ಪ್ರಕ್ರಿಯೆ ನಡೆಸಲಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಾರ್ಟಿ ಬಳಿಕ ಮನೆಗೆ ಡ್ರಾಪ್‌ ಮಾಡ್ತಿನಿ ಅನ್ನೋ ಸಿಇಒ ಮಾತು ನಂಬಿ ಕಾರು ಹತ್ತಿದ ಮಹಿಳಾ ಮ್ಯಾನೇಜರ್‌ ಗ್ಯಾಂಗ್‌ರೇ*ಪ್‌!
Indian Railways: ಗುಟ್ಕಾ ಪ್ರಿಯರಿಗಾಗಿ ವರ್ಷಕ್ಕೆ 1,200 ಕೋಟಿ ರೂ. ಖರ್ಚು ಮಾಡ್ತಿರೋ ರೈಲ್ವೆ ಇಲಾಖೆ!