
ನವದೆಹಲಿ (ಮೇ 30, 2023): ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರಕ್ಕೆ 9 ವರ್ಷಗಳು ಪೂರೈಸಿರುವ ಕುರಿತು ಸರ್ಕಾರದ ವಿರುದ್ಧ ಕಿಡಿಕಾರಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 9 ವರ್ಷಗಳಿಂದ ಮೋದಿ ಸರ್ಕಾರ ಮಾರಣಾಂತಿಕ ಹಣದುಬ್ಬರದಿಂದ ಜನರನ್ನು ಲೂಟಿ ಮಾಡುತ್ತಿದೆ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ ‘9 ವರ್ಷಗಳಲ್ಲಿ ಮಾರಣಾಂತಿಕ ಹಣದುಬ್ಬರದಿಂದ ಬಿಜೆಪಿಯು ಜನರ ಹಣವನ್ನು ಲೂಟಿ ಮಾಡಿದೆ. ಎಲ್ಲ ಮುಖ್ಯ ವಸ್ತುಗಳ ಮೇಲೆ ಜಿಎಸ್‌ಟಿ ಕೆಟ್ಟ ಪರಿಣಾಮವನ್ನು ಬೀರಿ ಬಜೆಟ್ ಅನ್ನು ಹಾಳು ಮಾಡಿ, ಜೀವನವನ್ನು ಕಷ್ಟಕರವಾಗಿಸಿತು’ ಎಂದಿದ್ದಾರೆ.
ಇದನ್ನು ಓದಿ: ಮೋದಿ @ 9: 1 ತಿಂಗಳು ಬಿಜೆಪಿ ಪ್ರಚಾರ, 51 ನಾಯಕರಿಂದ ದೇಶದ ವಿವಿಧೆಡೆ ರ‍್ಯಾಲಿ, 2024 ಲೋಕಸಭೆ ಚುನಾವಣೆ ಟಾರ್ಗೆಟ್
ಆದರೆ ಬಿಜೆಪಿ ನಾಯಕರು ಎಲ್ಲೂ ‘ಹಣದುಬ್ಬರ ಕಾಣಿಸುತ್ತಿಲ್ಲ, ಅಥವಾ ನಾವು ದುಬಾರಿ ವಸ್ತುಗಳನ್ನು ನಾವು ತಿನ್ನವುದಿಲ್ಲ ಎನ್ನುವ ಮೂಲಕ ಹಣದುಬ್ಬರ ನಿರಾಕರಿಸುತ್ತಿದ್ದಾರೆ. ‘ಅಚ್ಛೇ ದಿನ್’ ದಿಂದ ಅಮೃತ ಕಾಲದವರೆಗೆ ಹಣದುಬ್ಬರದಿಂದ ಜನರನ್ನು ಲೂಟಿ ಮಾಡುವ ಪ್ರಯಾಣ ಹೆಚ್ಚಾಗಿದೆ’ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ‘ನವ’ವಸಂತ: ಇಡೀ ತಿಂಗಳು ಹಲವಾರು ಕಾರ್ಯಕ್ರಮ; ಸಾಧನೆಗಳ ಹೈಲೈಟ್ಸ್ ಹೀಗಿದೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ