ಪ್ರಧಾನಿ ಮೋದಿಗೆ ‘ನವ’ವಸಂತ: ಇಡೀ ತಿಂಗಳು ಹಲವಾರು ಕಾರ್ಯಕ್ರಮ; ಸಾಧನೆಗಳ ಹೈಲೈಟ್ಸ್‌ ಹೀಗಿದೆ..

Published : May 30, 2023, 07:47 AM IST
ಪ್ರಧಾನಿ ಮೋದಿಗೆ ‘ನವ’ವಸಂತ: ಇಡೀ ತಿಂಗಳು ಹಲವಾರು ಕಾರ್ಯಕ್ರಮ; ಸಾಧನೆಗಳ ಹೈಲೈಟ್ಸ್‌ ಹೀಗಿದೆ..

ಸಾರಾಂಶ

ಮೋದಿ ಸರ್ಕಾರದ 9ನೇ ವರ್ಷಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಇಂದಿನಿಂದ ಒಂದು ತಿಂಗಳುದ್ದಕ್ಕೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ನವದೆಹಲಿ (ಮೇ 30, 2023): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಗಳವಾರ 9 ವರ್ಷಗಳನ್ನು ಪೂರೈಸಲಿದೆ. ಲೋಕಸಭೆ ಚುನಾವಣೆಗೆ ಇನ್ನು ಒಂದೇ ವರ್ಷ ಬಾಕಿ ಇರುವ ಹಿನ್ನೆಲೆಯಲ್ಲಿ ಮೋದಿ ಸರ್ಕಾರದ 9ನೇ ವರ್ಷಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಇಂದಿನಿಂದ ಒಂದು ತಿಂಗಳುದ್ದಕ್ಕೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಇಡೀ ತಿಂಗಳು ಹಲವಾರು ಕಾರ್ಯಕ್ರಮ

  • ವಿವಿಧ ಕ್ಷೇತ್ರಗಳ 1 ಲಕ್ಷ ಪ್ರಸಿದ್ಧ ವ್ಯಕ್ತಿಗಳಿಂದ ಕೇಂದ್ರ ಸರ್ಕಾರದ ಪರವಾಗಿ ಅಭಿಯಾನ
  • 51 ಬಿಜೆಪಿ ನಾಯಕರಿಂದ ದೇಶಾದ್ಯಂತ ಸಭೆ. ಸರ್ಕಾರದ ಕೊಡುಗೆ ಜನರಿಗೆ ಮನವರಿಕೆ
  • ಪ್ರತಿ ಲೋಕಸಭೆ ಕ್ಷೇತ್ರದಲ್ಲಿ ತಲಾ 250 ಗಣ್ಯರಿಗೆ ಮೋದಿ ಕೊಡುಗೆಗಳ ಬಗ್ಗೆ ವಿವರಣೆ
  • ಬುದ್ಧಿಜೀವಿಗಳು, ಸಾಮಾಜಿಕ ಮಾಧ್ಯಮದ ಪ್ರಭಾವಿಗಳು, ವಿವಿಧ ವರ್ಗಗಳ ಜತೆ ಚರ್ಚೆ
  • ಪ್ರಧಾನಿ ಮೋದಿ ಅವರು ಇಂದು ಭಾಷಣ ಮಾಡಿ ಅಭಿಯಾನಕ್ಕೆ ಚಾಲನೆ ನೀಡುವ ಸಾಧ್ಯತೆ

ಇದನ್ನು ಓದಿ: ಈಶಾನ್ಯ ಭಾರತಕ್ಕೂ ಸಿಕ್ತು ವಂದೇ ಭಾರತ್‌ ರೈಲು: ದೇಶದ 18ನೇ ಸೆಮಿ ಹೈ ಸ್ಪೀಡ್‌ ಟ್ರೈನಿಗೆ ಪ್ರಧಾನಿ ಮೋದಿ ಚಾಲನೆ

ಸರ್ಕಾರದ ಸಾಧನೆಗಳು

  • 50000 ಕಿ.ಮೀ. ಹೆದ್ದಾರಿ: ಮೋದಿ ಸರ್ಕಾರದ 9 ವರ್ಷದ ಅವಧಿಯಲ್ಲಿ ದೇಶದಲ್ಲಿ ರಸ್ತೆ ಕ್ರಾಂತಿ
  • 4 ಕೋಟಿ ಮನೆ: ಸ್ವಂತ ಮನೆ ಹೊಂದಿಲ್ಲದ ಜನರಿಗೆ ಕೇಂದ್ರ ಸರ್ಕಾರದಿಂದ ಸೂರಿನ ಸೌಲಭ್ಯ
  • 390 ವಿವಿ: ಕಳೆದ 9 ವರ್ಷ ಅವಧಿಯಲ್ಲಿ ದೇಶಾದ್ಯಂತ ಸ್ಥಾಪನೆಯಾದ ಹೊಸ ವಿಶ್ವವಿದ್ಯಾಲಯ
  • 11 ಕೋಟಿ ಟಾಯ್ಲೆಟ್‌: ಸ್ವಚ್ಛ ಭಾರತ್‌ ಮಿಷನ್‌ನಡಿ ಕ್ರಾಂತಿ. ದಾಖಲೆ ಶೌಚಾಲಯ ನಿರ್ಮಾಣ

ಇದನ್ನೂ ಓದಿ:  ಸಂಸತ್ ಭವನ ಉದ್ಘಾಟನೆ ವೇಳೆ ಶೃಂಗೇರಿ ಪುರೋಹಿತರಿಂದ ಪೂಜಾ ಕೈಂಕರ್ಯ: ರಾಜದಂಡ ಪ್ರತಿಷ್ಠಾಪನೆಯ ಹೈಲೈಟ್ಸ್‌.. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ
Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್