
ಮುಂಬೈ(ನ.25):ಮಹತ್ವದ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರವೂ ಸೇರಿದಂತೆ ದೇಶಾದ್ಯಂತ ಸದ್ದು ಮಾಡಿದ್ದ ನೀರಾವರಿ ಹಗರಣದ ಪ್ರಮುಖ 9 ಪ್ರಕರಣಗಳನ್ನು, ಮಹಾರಾಷ್ಟ್ರ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಕೈ ಬಿಟ್ಟಿದೆ.
ಮಹಾರಾಷ್ಟ್ರದಲ್ಲಿ ಎನ್’ಸಿಪಿಯ ಅಜಿತ್ ಪವಾರ್ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ ಬೆನ್ನಲ್ಲೇ, ನೀರಾವರಿ ಹಗರಣದ ಪ್ರಮುಖ 9 ಪ್ರಕರಣಗಳು ಮೂಲೆ ಸೇರಿರುವುದು ಕುತೂಹಲ ಮೂಡಿಸಿದೆ.
ಅಜಿತ್ ಮೇಲೆ ಭ್ರಷ್ಟಾಚಾರ ಆರೋಪ ಮಾಡಿ ತನಿಖೆಗೆ ಆದೇಶಿಸಿದ್ದು ಇದೇ ಫಡ್ನವೀಸ್!
ಆದರೆ ಅಜಿತ್ ಪವಾರ್ ವಿರುದ್ಧ ದಾಖಲಾದ ಪ್ರಕರಣಗಳನ್ನು ಕೈಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿರುವ ಎಸಿಬಿ, ವಿಚಾರಣಾ ಹಂತದಲ್ಲಿ ದೋಷರಹಿತ ಎಂದು ಕಂಡುಬಂದ ಪ್ರಕರಣಗಳಿಗೆ ಇತಿಶ್ರೀ ಹಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಅಜಿತ್ ಪ್ರವಾರ್ ವಿರುದ್ಧದ ಒಂದೇ ಒಂದು ಪ್ರಕರಣವನ್ನು ಕೈಬಿಟ್ಟಿಲ್ಲ ಎಂದಿರುವ ಎಸಿಬಿ, ಪ್ರಕರಣದ ವಿಚಾರಣೆ ಯಥಾ ಪ್ರಕಾರ ನಡೆಯಲಿದೆ ಎಂದು ಭರವಸೆ ನೀಡಿದೆ.
ಅಜಿತ್ ಸೆಳೆದುಕೊಂಡ ಬಿಜೆಪಿ ಎದುರಿದೆ 'ಕಳಂಕ' ಅಳಿಸುವ ಹೊಣೆ!
ಅಜಿತ್ ಪವಾರ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಸಿಎಂ ದೇವೇಂದ್ರ ಫಡ್ನವೀಸ್ ಹಾಗೂ ಬಿಜೆಪಿ, ಇದೀಗ ಅದೇ ಪವಾರ್ ಜೊತೆ ಸರ್ಕಾರ ರಚಿಸಿರುವುದು ವಿಚಿತ್ರ ನಡೆಯಾಗಿದೆ.
2014ರಲ್ಲಿ ಫಡ್ನವೀಸ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಮರುಕ್ಷಣವೇ, ಅಜಿತ್ ಪವಾರ್ ವಿರುದ್ಧ ತನಿಖೆಗೆ ಆದೇಶ ನೀಡಿದ್ದರು. ಇದೀಗ ಅಜಿತ್ ಪವಾರ್ ಫಡ್ನವೀಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾರೆ.
ಹಗರಣಗಳ ಸರದಾರ 'ಮಹಾ' ಸರ್ಕಾರದ 'ಕಿಂಗ್ ಮೇಕರ್' ಅಜಿತ್ ಪವಾರ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ