83 ಭಾರತೀಯ ರಕ್ಷಣಾ ಸಿಬ್ಬಂದಿ ಪಾಕ್‌ ವಶದಲ್ಲಿ

By Kannadaprabha News  |  First Published Feb 10, 2023, 11:05 AM IST

ನವದೆಹಲಿ: ಕಾಣೆಯಾಗಿರುವ ಯುದ್ಧಖೈದಿಗಳು ಸೇರಿದಂತೆ 83 ಭಾರತೀಯ ರಕ್ಷಣಾ ಪಡೆ ಸಿಬ್ಬಂದಿಗಳು ಪಾಕಿಸ್ತಾನದ ವಶದಲ್ಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿ. ಮುರಳೀಧರನ್‌ ಗುರುವಾರ ರಾಜ್ಯಸಭೆಗೆ ತಿಳಿಸಿದರು.


ನವದೆಹಲಿ: ಕಾಣೆಯಾಗಿರುವ ಯುದ್ಧಖೈದಿಗಳು ಸೇರಿದಂತೆ 83 ಭಾರತೀಯ ರಕ್ಷಣಾ ಪಡೆ ಸಿಬ್ಬಂದಿಗಳು ಪಾಕಿಸ್ತಾನದ ವಶದಲ್ಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿ. ಮುರಳೀಧರನ್‌ ಗುರುವಾರ ರಾಜ್ಯಸಭೆಗೆ ತಿಳಿಸಿದರು. ಇವರ ಬಿಡುಗಡೆ ಕುರಿತ ಭಾರತದ ಪ್ರಸ್ತಾಪವನ್ನು ಪಾಕಿಸ್ತಾನವನ್ನು ನಿರಂತರವಾಗಿ ನಿರಾಕರಿಸುತ್ತಿದೆ. ಕಾಣೆಯಾಗಿರುವ ರಕ್ಷಣಾ ಸಿಬ್ಬಂದಿಗಳ ಬಿಡುಗಡೆ ಹಾಗೂ ವಾಪಸಾತಿಗಾಗಿ ಸರ್ಕಾರ ರಾಜತಾಂತ್ರಿಕ ಮಾರ್ಗಗಳನ್ನು ಅನುಸರಿಸುತ್ತಿದೆ. ಇಸ್ಲಾಮಾಬಾದ್‌ನಲ್ಲಿರುವ ಭಾರತದ ಹೈ ಕಮೀಷನ್‌ 2023ರ ಜ.1 ರಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಈ ವಿಷಯವನ್ನು ಮತ್ತೊಮ್ಮೆ ಪ್ರಸ್ತಾಪಿಸಿದೆ. 2014ರಿಂದ ಈವೆರೆಗೆ 58 ಭಾರತೀಯ ಖೈದಿಗಳು, 2,160 ಮೀನುಗಾರರು ಹಾಗೂ 57 ಮೀನುಗಾರಿಕೆ ದೋಣಿಗಳನ್ನು ಪಾಕಿಸ್ತಾನ ಭಾರತಕ್ಕೆ ಹಿಂದಿರುಗಿಸಿದೆ.

ಜಮ್ಮು ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ: ವಿಶ್ವಸಂಸ್ಥೆಯಲ್ಲಿ ಭಾರತ ಪುನರುಚ್ಚಾರ; ಪಾಕ್‌ಗೆ ತಿರುಗೇಟು

Tap to resize

Latest Videos

ಭಾರತ- ಪಾಕ್‌ ಜಲಸಮರ: ಸಿಂಧೂ ನದಿ ಒಪ್ಪಂದ ಮಾರ್ಪಾಡಿಗಾಗಿ ಪಾಕ್‌ಗೆ ಭಾರತ ನೋಟಿಸ್‌

click me!