ಸರ್ಕಾರ ಕೊಡುವ ಮನೆಯ ಒಡೆತನ ಮಹಿಳೆಗೆ: ಅಮೃತ ಮಹೋತ್ಸವದಲ್ಲಿ ಮೋದಿ ಮಾತು!

By Suvarna NewsFirst Published Oct 5, 2021, 2:50 PM IST
Highlights

* ಲಕ್ನೋದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಉದ್ದೇಶಿಸಿ ಮೋದಿ ಮಾತು

* ಪಿಎಂ ಆವಾಸ್‌ ಯೋಜನೆಯಡಿ ಮನೆಗಳನ್ನು ನೀಡಿದ ಮೋದಿ

* ಸರ್ಕಾರ ಕೊಡುವ ಮನೆಯ ಒಡೆತನ ಮಹಿಳೆಯರಿಗೆ: ಅಮೃತ ಮಹೋತ್ಸವದಲ್ಲಿ ಮೋದಿ ಮಾತು

ನವದೆಹಲಿ(ಅ.05): ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಲಕ್ನೋದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಪ್ರಧಾನ ಮಂತ್ರಿ ಆವಾಸ್(PM Awas Yojna) ಯೋಜನೆ ನಗರ ಯೋಜನೆಯಡಿಯಲ್ಲಿ ಒಂದು ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ. ಇವುಗಳಲ್ಲಿ ಶೇಕಡ 80 ಕ್ಕಿಂತಲೂ ಹೆಚ್ಚು ಮನೆಗಳ ಮಾಲೀಕತ್ವ ಮಹಿಳೆಯರಿಗೇ(Women) ವಹಿಸಲಾಗಿದೆ . ಹಿಂದಿನ ಕಾಲದಲ್ಲಿ ಮನೆಗಳು, ಅಂಗಡಿಗಳು ಅಥವಾ ವಾಹನಗಳು ಮಹಿಳೆಯರ ಹೆಸರಿನಲ್ಲಿ ಇರುತ್ತಿರಲಿಲ್ಲ, ಆದರೆ ಈಗ ಚಿತ್ರಣ ಬದಲಾಗಿದೆ. ಮೋದಿ(Narendra Modi) ಏನು ಮಾಡಿದ್ದಾರೆ ಎಂದು ಜನರು ಕೇಳುತ್ತಾರೆ, ಆದರೆ ಲಕ್ಷಾಂತರ ಬಡವರನ್ನು ಲಕ್ಷಾಧಿಪತಿ ಮಾಡುವ ಕೆಲಸವನ್ನು ಪ್ರಧಾನಿ ಮೋದಿ(PM Modi) ಮಾಡಿದ್ದಾರೆ. ಈ ಮನೆಗಳು ಅವರ ದೊಡ್ಡ ಆಸ್ತಿ ಎಂದು ಹೇಳಿದ್ದಾರೆ.

ತಂತ್ರಜ್ಞಾನದಲ್ಲಿ ಲಕ್ನೋ ಮೇಲುಗೈ

ಇಂದು ಲಕ್ನೋದಲ್ಲಿ(Lucknow) ಅನುಸರಿಸುವ ತಂತ್ರಜ್ಞಾನಕ್ಕೆ ಇಡೀ ದೇಶವೇ ಹೆಮ್ಮೆ ಪಡುತ್ತದೆ. ದೇಶದ 70 ಕ್ಕೂ ಹೆಚ್ಚು ನಗರಗಳ ಮೂಲಸೌಕರ್ಯದಲ್ಲಿ ದೊಡ್ಡ ಬದಲಾವಣೆಯಾಗಿದೆ. ನಗರಗಳಲ್ಲಿ ಕಸ ವಿಲೇವಾರಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. ತ್ಯಾಜ್ಯ ವಿಲೇವಾರಿಯಿಂದ ವಿದ್ಯುತ್ ಉತ್ಪಾದನೆಯೊಂದಿಗೆ, ರಸ್ತೆ ನಿರ್ಮಾಣವೂ ನಡೆಯುತ್ತಿದೆ. ಎಲೆಕ್ಟ್ರಿಕ್ ಬಸ್ಸುಗಳು ಆಧುನಿಕ ತಂತ್ರಜ್ಞಾನದ ಪ್ರತಿಬಿಂಬ ಎಂದು ಅವರು ಮೋದಿ ಹೇಳಿದ್ದಾರೆ.

ತಮ್ಮ ಸರ್ಕಾರ 1.13 ಕೋಟಿ ಮನೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಸರ್ಕಾರ ಇದುವರೆಗೆ 50 ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿದೆ. 2014 ರ ಮೊದಲು, ಮನೆಗಳ ಗಾತ್ರಕ್ಕೆ ಸಂಬಂಧಿಸಿದಂತೆ ಯಾವುದೇ ನೀತಿ ಇರಲಿಲ್ಲ, ಆದರೋಈಗ ತಮ್ಮ ಸರ್ಕಾರವು ಈ ಬದಲಾವಣೆಯನ್ನು ಮಾಡಿದೆ ಎಂದಿದ್ದಾರೆ. ಇದೇ ವೇಖೆ  ಮನೆ ಖರೀದಿದಾರರಿಗೆ ಸಹಾಯ ಮಾಡುವ ರೇರಾ ಕಾಯಿದೆ ಬಗ್ಗೆಯೂ ಮೋದಿ ಉಲ್ಲೇಖಿಸಿದ್ದಾರೆ.

ಬಾಡಿಗೆ ಮನೆ ಕಾನೂನು ಬದಲಾವಣೆ

ಇದೇ ವೇಳೆ ಸರ್ಕಾರವು ಬಾಡಿಗೆ ಸಂಬಂಧಿತ ಕಾನೂನನ್ನು ತರುತ್ತಿದೆ ಎಂದು ನೆನಪಿಸಿದ್ದಾರೆ ಇದು ಭೂಮಾಲೀಕರು ಮತ್ತು ಬಾಡಿಗೆದಾರರ ನಡುವಿನ ವಿವಾದವನ್ನು ಕೊನೆಗೊಳಿಸುತ್ತದೆ. ಬೀದಿ ಬದಿ ವ್ಯಾಪಾರಿಗಳಿಗೆ ನೀಡಲಾದ ಸಣ್ಣ ಸಾಲಗಳಿಂದ ಪಡೆದ ಸಹಾಯವನ್ನೂ ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ. ಎಲ್‌ಇಡಿ ಬೆಳಕಿನ ಯೋಜನೆಯ ಯಶಸ್ಸನ್ನು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ. ಅಲ್ಲದೆ, ದೇಶದಾದ್ಯಂತ ಸಿಸಿಟಿವಿ ಯೋಜನೆಯನ್ನು ಉಲ್ಲೇಖಿಸಿ, ಅಪರಾಧಿಗಳು ಯಾವುದೇ ಅಪರಾಧ ಮಾಡುವ ಮುನ್ನ ನೂರು ಬಾರಿ ಯೋಚಿಸಬೇಕು ಎಂದು ಹೇಳಿದ್ದಾರೆ. 

click me!