ಲಿಫ್ಟ್‌ನಲ್ಲಿ 3 ಗಂಟೆಗಳ ಕಾಲ ಸಿಕ್ಕಿಹಾಕಿಕೊಂಡ 8 ವರ್ಷದ ಬಾಲಕ, ಚಾಣಾಕ್ಷತೆಗೆ ಮೆಚ್ಚಿದ ಜನ!

Published : Aug 21, 2023, 01:30 PM IST
ಲಿಫ್ಟ್‌ನಲ್ಲಿ 3 ಗಂಟೆಗಳ ಕಾಲ ಸಿಕ್ಕಿಹಾಕಿಕೊಂಡ 8 ವರ್ಷದ ಬಾಲಕ, ಚಾಣಾಕ್ಷತೆಗೆ ಮೆಚ್ಚಿದ ಜನ!

ಸಾರಾಂಶ

ಫರಿದಾಬಾದ್‌ನಲ್ಲಿ, ಎರಡು ವಿಭಿನ್ನ ಅಪಾರ್ಟ್‌ಮೆಂಟ್‌ಗಳಲ್ಲಿ ಎರಡು ದಿನಗಳಲ್ಲಿ ಲಿಫ್ಟ್ ಸ್ಥಗಿತಗೊಂಡ ಪ್ರಕರಣಗಳನ್ನು ವರದಿ ಮಾಡಿದೆ. ಎರಡೂ ಸಂದರ್ಭಗಳಲ್ಲಿ ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದೆ ಗಂಟೆಗಳ ಕಾಲ ಲಿಫ್ಟ್‌ನೊಳಗೆ ಬಂಧಿಯಾಗಿದ್ದರು. ಸ್ವಲ್ಪ ತಡ ಮಾಡಿದ್ದರೆ ಮಕ್ಕಳಿಬ್ಬರ ಜೀವಕ್ಕೆ ಅಪಾಯವಾಗುತ್ತಿತ್ತು.

ನವದೆಹಲಿ (ಆ.21): ಬಹುಮಹಡಿ ವಸತಿ ಸಮುಚ್ಛಯದಲ್ಲಿ ನೀವು ವಾಸ ಮಾಡುತ್ತಿದ್ದರೆ ಈ ಸುದ್ದಿಯನ್ನು ಓದಲೇಬೇಕು. ಹರಿಯಾಣದ ಫರೀದಾಬಾದ್‌ನಲ್ಲಿ ಎರಡು ವಿಭಿನ್ನ ಹೌಸಿಂಗ್‌ ಸೊಸೈಟಿಯ ಅಪಾರ್ಟ್‌ಮೆಂಟ್‌ನಲ್ಲಿ ಎರಡು ಆಘಾತಕಾರಿ ಪ್ರಕರಣಗಳು ಬೆಳಕಿಗೆ ಬಂದಿವೆ. ಎರಡೂ ಬಾರಿಯೂ ಪುಟ್ಟ ಮಕ್ಕಳು ಲಿಫ್ಟ್‌ನಲ್ಲಿ ಗಂಟೆಗಳ ಕಾಲ ಬಂದಿಯಾಗಿದ್ದರು. ಈ ಸಮಯದಲ್ಲಿ ಅವರೊಂದಿಗೆ ಯಾರೂ ಇದ್ದಿರಲಿಲ್ಲ. ಹಾಗಿದ್ದರೂ ಲಿಫ್ಟ್‌ನಲ್ಲಿ ಬಂಧಿಯಾಗಿದ್ದ ಮಗು ಯಾವುದೇ ಗಾಬರಿಯನ್ನು ತೋರದೆ ಸಹನೆಯಿಂದ ಇದ್ದರು. ತಮ್ಮ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ ಲಿಫ್ಟ್‌ನಲ್ಲಿ ಹೋಮ್‌ವರ್ಕ್‌ ಕೂಡ ಮಾಡಿ ಚಾಣಾಕ್ಷತನ ಮೆರೆದಿದ್ದಾರೆ. ಫರಿದಾಬಾದ್‌ನ ಓಮ್ಯಾಕ್ಸ್ ರೆಸಿಡೆನ್ಸಿ ಸೊಸೈಟಿಗೆ ಸೇರಿದ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಶನಿವಾರ ಸಂಜೆ 8 ವರ್ಷದ ಬಾಲಕ ಸುಮಾರು ಎರಡೂವರೆ ಗಂಟೆಗಳ ಕಾಲ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ. ದೊಡ್ಡವರೂ ಕೂಡ ಗಾಬರಿಯಾಗುವಂಥ ಹಂತದಲ್ಲಿ ಮಗು ಯಾವುದೇ ರೀತಿಯಲ್ಲಿ ಗಾಬರಿಗೆ ಒಳಗಾಗದೇ ಲಿಫ್ಟ್‌ನಲ್ಲಿಯೇ ಕುಳಿತು ಶಾಲೆ ಹಾಗೂ ಟ್ಯೂಷನ್‌ ಎರಡರ ಹೋಮ್‌ವರ್ಕ್‌ಅನ್ನು ಮುಗಿಸಿದೆ.

ಮಾಹಿತಿ ಪ್ರಕಾರ, ಗೌರವವಿತ್ ಸಂಜೆ 5 ಗಂಟೆಗೆ ಟ್ಯೂಷನ್‌ಗಾಗಿ 5 ನೇ ಮಹಡಿಯಿಂದ ಲಿಫ್ಟ್ ಮೂಲಕ ಕೆಳಗೆ ಹೋಗಿದ್ದರು. ಸಾಮಾನ್ಯವಾಗಿ ಆತ 6 ಗಂಟೆಯ ವೇಳೆಗೆ ವಾಪಾಸ್‌ ಬರಬೇಕಿತ್ತು. ಸಂಜೆ 7 ಗಂಟೆಯಾದರೂ ಆತ ಬರದೇ ಇದ್ದಾಗ ಪೋಷಕರು ಟ್ಯೂಷನ್‌ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಆತ ಟ್ಯೂಷನ್‌ಗೆ ಬಂದಿಲ್ಲ ಎಂದು ಅವರು ತಿಳಿಸಿದಾಗ, ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಈ ನಡುವೆ ಸಂಜೆ 5 ಗಂಟೆಯಿಂದ ಲಿಫ್ಟ್‌ ಬಂದ್‌ ಆಗಿದೆ ಎಂದು ತಿಳಿದುಬಂದಿದೆ. ಮಗ ಲಿಫ್ಟ್‌ನಲ್ಲಿಯೇ ಲಾಕ್‌ ಆಗಿರಬಹುದು ಎಂದುಕೊಂಡು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದರು. ಕೂಡಲೇ ಈ ಬಗ್ಗೆ ಲಿಫ್ಟ್ ಮ್ಯಾನೇಜರ್ ಗೆ ಮಾಹಿತಿ ನೀಡಲಾಗಿದೆ. ಲಿಫ್ಟ್ ತೆರೆದು ನೋಡಿದಾಗ ಗೌರವವಿತ್ ಒಳಗೆ ಇದ್ದದ್ದು ಕಂಡು ಬಂದಿದೆ.

ಲಿಫ್ಟ್‌ ಅಂದಾಜು ಮೂರು ಗಂಟೆಯ ಕಾಲ ಬಂದ್‌ ಆಗಿತ್ತು. ಈ ಬಗ್ಗೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಿಫ್ಟ್‌ ಒಳಗೆ ಯಾರಾದರೂ ಲಾಕ್ ಆಗಿದ್ದಾರೆಯೇ ಇಲ್ಲವೇ ಎನ್ನುವುದನ್ನೂ ತಿಳಿಯಲು ಕೂಡ ಯಾರೂ ಪ್ರಯತ್ನ ಪಟ್ಟಿಲ್ಲ. ತಾನು ಜೋರಾಗಿ ಕೂಗಿ ಎಮರ್ಜೆನ್ಸಿ ಬಟನ್‌ ಒತ್ತಿದ್ದೆ ಎಂದು ಮಗು ಹೇಳಿದ್ದು, ಯಾರೂ ಕೂಡ ಸಹಾಯಕ್ಕೆ ಬಂದಿರಲಿಲ್ಲ ಎಂದಿದ್ದಾನೆ. ತನ್ನ ಗಮನವನ್ನು ಬೇರೆಡೆಗೆ ಸೆಳೆಯಲು ಲಿಫ್ಟ್‌ನಲ್ಲಿಯೇ ಹೋಮ್‌ವರ್ಕ್ ಮಾಡಲು ಪ್ರಾರಂಭಿಸಿದೆ ಎಂದು ಗೌರವ್‌ನಿತ್‌ ಮಾಹಿತಿ ನೀಡಿದ್ದಾರೆ

ಎರಡನೇ ಪ್ರಕರಣ ಫರಿದಾಬಾದ್‌ನ ಎಸ್‌ಆರ್‌ಎಸ್ ರೆಸಿಡೆನ್ಶಿಯಲ್ ಸೊಸೈಟಿಯಲ್ಲಿ ನಡೆದಿದೆ. ಇಲ್ಲಿನ ಸಿ7 ಟವರ್‌ನಲ್ಲಿರುವ ಫ್ಲಾಟ್ ನಂಬರ್ 406ರಲ್ಲಿ ವಾಸಿಸುತ್ತಿರುವ ವಿಕಾಸ್ ಶ್ರೀವಾಸ್ತವ ಅವರ 6ನೇ ತರಗತಿಯಲ್ಲಿ ಓದುತ್ತಿರುವ 11 ವರ್ಷದ ಮಗಳು ಸ್ನೇಹಾ ಭಾನುವಾರ ಸಂಜೆ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದಾಳೆ. ಪ್ರತಿದಿನ ಮಧ್ಯಾಹ್ನ 3:00 ರಿಂದ ಟ್ಯೂಷನ್‌ಗೆ ಹೋಗುತ್ತಿದ್ದ ಆಕೆ, ಸಂಜೆ 5.45ಕ್ಕೆ ಬರುತ್ತಿದ್ದಳು ಎಂದು ಹುಡುಗಿಯ ತಂದೆ ಹೇಳಿದ್ದಾರೆ. ಭಾನುವಾರ ಮನೆಗೆ ಬಂದು 6 ಗಂಟೆಯ ವೇಳೆಗೆ ಮತ್ತೆ ವಾಪಾಸ್‌ ಹೋಗಿದ್ದಾರೆ.

Chandrayaan-3: ಇಸ್ರೋ ಮಾತ್ರವಲ್ಲ ವಿಕ್ರಮನ ಬೆನ್ನುಬಿದ್ದಿದೆ ನಾಸಾ, ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ!

ಆಮೇಲೆ ಎಷ್ಟು ಹೊತ್ತಾದರೂ ಬರದ ಕಾರಣ ಅಕ್ಕಪಕ್ಕದ ಮನೆಯವರು ವಿಚಾರಿಸಿದ್ದಾರೆ. ಆದರೆ ಎಲ್ಲಿಂದಲೋ ಏನೂ ಸಿಗಲಿಲ್ಲ. ಸ್ನೇಹಾಳ ತಂದೆ ಬಹಳ ಸಮಯ ಆಕೆಗಾಗಿ ಹುಡುಕಾಟ ನಡೆಸಿದ್ದು, ಹುಡುಕಿ ಬೇಸತ್ತ ಬಳಿಕ ಟವರ್‌ನಲ್ಲಿರುವ ಫ್ಲಾಟ್ ನಂಬರ್ 906ರಲ್ಲಿ ವಾಸಿಸುತ್ತಿದ್ದ ತನ್ನ ಸಹೋದರನಿಗೆ ಪುಟ್ಟ ಬಾಲಕಿ ಸ್ನೇಹಾ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರ ನಂತರ ಅವನ ಸಹೋದರ ಪ್ರತಿ ಟವರ್‌ನಲ್ಲಿ ಮಗುವನ್ನು ಹುಡುಕಲು ಪ್ರಾರಂಭಿಸಿದ್ದರು. ಆಗ ಬಾಲಕಿ ನೆಲಮಹಡಿಯಲ್ಲಿರುವ ಲಿಫ್ಟ್‌ನಲ್ಲಿದ್ದು ಸುಮಾರು ಎರಡೂವರೆ ಗಂಟೆಗಳ ಕಾಲ ಲಿಫ್ಟ್ ಮುಚ್ಚಿರುವುದು ತಿಳಿದು ಬಂದಿದೆ.

Chandrayaan-3 Landing: ಚಂದ್ರನ ಮೇಲೆ ಭಾರತದ ಸಾಫ್ಟ್‌ ಲ್ಯಾಂಡಿಗ್‌, ನೀವು ಎಲ್ಲೆಲ್ಲಾ ವೀಕ್ಷಿಸಬಹುದು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು
India Latest News Live: ಆಯೋಧ್ಯೆಯ ಬಾಬ್ರಿ ಮಸೀದಿಯನ್ನೇ ಹೋಲುವಂತಹ ಮಸೀದಿಗೆ ಶಂಕು ಸ್ಥಾಪನೆ