
ಕಾಠ್ಮಂಡು[ಜ.22]: ನೇಪಾಳ ಪ್ರವಾಸಕ್ಕೆ ತೆರಳಿದ್ದ ಕೇರಳದ ಇಬ್ಬರು ದಂಪತಿಗಳು ಹಾಗೂ ನಾಲ್ಕು ಮಕ್ಕಳು ರೆಸಾರ್ಟ್ ಒಂದರಲ್ಲಿ ಸಾವನ್ನಪ್ಪಿದ್ದು, ಗ್ಯಾಸ್ ಸೋರಿಕೆಯಿಂದಾಗಿ ಉಸಿರುಗಟ್ಟಿಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.
ನೇಪಾಳದ ಪ್ರಸಿದ್ದ ಪೋಖ್ರಾ ಹಿಮಾಲಯ ಬೆಟ್ಟಕ್ಕೆ ಪ್ರವಾಸ ತೆರಳಿದ್ದ ಹದಿನೈದು ಮಂದಿಯ ಗುಂಪಿನಲ್ಲಿ ಈ ಎಂಟು ಮಂದಿ ಇದ್ದರು.
ಪ್ರವಾಸ ಮುಗಿಸಿ ಮರಳುವುದಕ್ಕೂ ಮುನ್ನ ಸೋಮವಾರ ರಾತ್ರಿ ಮಖವಾನ್‌ಪುರ ಜಿಲ್ಲೆಯ ದಮಾನ್‌ನ ಎವರೆಸ್ಟ್ ಪನೋರಮ ರೆಸಾರ್ಟ್‌ನ ಒಂದೇ ಈ ರೂಮ್‌ನಲ್ಲಿ ಎಂಟು ಮಂದಿ ತಂಗಿದ್ದರು.
ವಿಶ್ವದ ಅತ್ಯಂತ ಕುಬ್ಜ ಮನುಷ್ಯ ಖಗೇಂದ್ರ ಥಾಪಾ ಇನ್ನಿಲ್ಲ!...
ಈ ವೇಳೆ ಚಳಿಯಿಂದ ರಕ್ಷಣೆ ಪಡೆಯಲು ಗ್ಯಾಸ್ ಹೀಟರ್ ಚಾಲೂ ಮಾಡಿ ನಿದ್ದೆಗೆ ಜಾರಿದ್ದರು. ಕೋಣೆಯ ಬಾಗಿಲು, ಕಿಟಕಿಗಳನ್ನು ಒಳಗಿನಿಂದ ಬಂದ್ ಮಾಡಿದ್ದರಿಂದ ಉಸಿರು ಗಟ್ಟಿಮೃತ ಪಟ್ಟಿರಬಹುದು ಎಂದು ಹೊಟೇಲ್ ಮ್ಯಾನೇಜರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ