
ನವದೆಹಲಿ(ಜ. 21) ಬಾಲಿವುಡ್ ನಟ ಸೈಫ್ ಆಲಿಖಾನ್ ಭಾರತದ ಇತಿಹಾಸದ ಬಗ್ಗೆ ನೀಡಿರುವ ಹೇಳಿಕೆ ವಿರುದ್ಧ ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಖಿ ತಿರುಗಿ ಬಿದ್ದಿದ್ದಾರೆ.
ಸೈಫ್ ಅಲಿಖಾನ್ ಇತ್ತೀಚಿಗೆ ತನ್ನ ಮೂರು ವರ್ಷದ ಮಗ ತೈಮೂರು ಹೆಸರು ಉಲ್ಲೇಖಿಸಿ ಭಾರತದ ಇತಿಹಾಸದ ಕುರಿತು ನೀಡಿರುವ ಹೇಳಿಕೆ ಖಂಡಿಸಿರುವ ಲೇಖಿ, ತಮ್ಮ ಇತ್ತೀಚಿನ ಚಿತ್ರ ತನ್ಹಾಜಿಯ ರಾಜಕೀಯ ಸನ್ನಿವೇಶದ ಕುರಿತು ಸಂದರ್ಶನವೊಂದರಲ್ಲಿ ಉತ್ತರಿಸಿದ ಸೈಫ್, "ಇದು ಇತಿಹಾಸ ಎಂದು ನಾನು ಭಾವಿಸುವುದಿಲ್ಲ. ಬ್ರಿಟಿಷರು ಅದನ್ನು ನೀಡುವವರೆಗೂ ಭಾರತದ ಪರಿಕಲ್ಪನೆ ಇತ್ತು ಎಂದು ನನಗೆ ಅನ್ನಿಸುವುದಿಲ್ಲ ಎಂದು ಹೇಳಿದ್ದರು.
ಹೊನ್ನಾಳಿ ಕೇಸರಿಮಯ ಮಾಡ್ತೆನೆ, ರೇಣುಕಾ ಗುಡುಗು
ಟರ್ಕಿಗಳು ಕೂಡಾ ಸಹ ತೈಮೂರ್ ನ್ನು ರಾಕ್ಷಕರು ಎಂದುಕೊಳ್ಳುತ್ತಾರೆ. ಆದರೆ ಕೆಲವರು ತಮ್ಮ ಮಕ್ಕಳಿಗೆ ತೈಮೂರ್ ಎಂದು ನಾಮಕರಣ ಮಾಡುತ್ತಾರೆ ಎಂದು ಟೀಕಿಸಿದ್ದಾರೆ.
ಸೈಫ್ ಅಲಿ ಖಾನ್ ಮತ್ತು ಪತ್ನಿ ಕರೀನಾ ಕಪೂರ್ ದಂಪತಿಗೆ ಡಿಸೆಂಬರ್ 2016ರಲ್ಲಿ ಜನಿಸಿದ ತೈಮೂರ್ ಅಲಿಖಾನ್ ಪಟೌಡಿ ಹೆಸರಿನ ಕುರಿತಾಗಿ ಈ ಹಿಂದೆಯೂ ಟ್ರೋಲ್ ಗಳಾಗಿದ್ದವು. ಸೋಶಿಯಲ್ ಮೀಡಿಯಾ ಸಹ ತನ್ನದೇ ಆದ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸಿತ್ತು. ಹೇಳಿಕೆ ನೀಡಿದ ಸೈಫ್ ಗೆ ಇದೀಗ ತಿರುಗೇಟು ಸಿಕ್ಕಿದ್ದು ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ