ಮುಸ್ಲಿಮರ ಒತ್ತಾಯದಂತೆ ಶಿವಸೇನೆ ಜತೆ ಕಾಂಗ್ರೆಸ್‌ ಮೈತ್ರಿ

By Sujatha NR  |  First Published Jan 22, 2020, 10:37 AM IST

ಮುಸ್ಲಿಂ ಸಮುದಾಯದ ಒತ್ತಾಯದ ಮೇರೆಗೆ ನಾವು ಶಿವಸೇನೆಯೊಂದಿಗೆ ಕೈ ಜೋಡಿಸಿ ಸರ್ಕಾರ ರಚಿಸಿದೆವು ಎಂದು ಕಾಂಗ್ರೆಸ್‌ ನಾಯಕ ಅಶೋಕ್‌ ಚವ್ಹಾಣ್‌ ಹೇಳಿದ್ದಾರೆ. 


ಔರಂಗಾಬಾದ್‌ [ಜ.22]: ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಮುಸ್ಲಿಂ ಸಮುದಾಯಕ್ಕೆ ಇಷ್ಟವಿರಲಿಲ್ಲ. ಹಾಗಾಗಿ ಅವರ ಒತ್ತಾಯದ  ಮೇರೆಗೆ ನಾವು ಶಿವಸೇನೆಯೊಂದಿಗೆ ಕೈ ಜೋಡಿಸಿ ಸರ್ಕಾರ ರಚಿಸಿದೆವು ಎಂದು ಕಾಂಗ್ರೆಸ್‌ ನಾಯಕ ಅಶೋಕ್‌ ಚವ್ಹಾಣ್‌ ಹೇಳಿದ್ದಾರೆ. 

ಮರಾಠವಾಡ ಪ್ರಾಂತ್ಯದ ನಾಂದೇಡ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷದಿಂದ ರಾಜ್ಯಕ್ಕಾದ ನಷ್ಟಮತ್ತೆ ಮರುಕಳಿಸುವುದು ಬೇಡ ಎಂದು ನಾವು ಸರ್ಕಾರ ರಚನೆಗೆ ಕೈ ಜೋಡಿಸಿದೆವು. 

Tap to resize

Latest Videos

ಸಾಯಿಬಾಬಾ ಜನ್ಮಸ್ಥಾನ: ಹೇಳಿಕೆ ಹಿಂಪಡೆದ ಉದ್ಧವ್‌...

ದೊಡ್ಡ ಶತ್ರು ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಮುಸ್ಲಿಂ ಸಹೋದರರು ಒತ್ತಾಯಿಸಿದ್ದರಿಂದ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡೆವು ಎಂದು ಹೇಳಿದ್ದಾರೆ. 

ಗಡಿವಿವಾದ: ಸುಪ್ರೀಂ ತೀರ್ಪಿಗೆ ಬದ್ಧ ಎಂದ ಸಂಜಯ ರಾವುತ್‌!...

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆಯೇ, ನಾನು ಮುಸ್ಲಿಂ ಸಮುದಾಯ ಮಾತ್ರ ಎಂದು ಹೇಳಿಲ್ಲ. ಎಲ್ಲಾ ಸಮುದಾಯದವರೂ ಒತ್ತಾಯಿಸಿದ್ದರು ಎಂದು ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ

click me!