ಅದಾನಿ ಸಮೂಹ ಸಂಸ್ಥೆಗಳ ಷೇರು ಮೌಲ್ಯ ಕುಸಿತದಿಂದಾಗಿ ಎಲ್‌ಐಸಿ ಮತ್ತು ಎಸ್‌ಬಿಐ ಒಟ್ಟಾರೆ 78 ಸಾವಿರ ಕೋಟಿ ರು. ನಷ್ಟಅನುಭವಿಸಿವೆ. ಇಷ್ಟಾದರೂ ಕೇಂದ್ರ ವಿತ್ತ ಸಚಿವಾಲಯ ಮೌನವಾಗಿದೆ ಎಂದು ಕಾಂಗ್ರೆಸ್ ಶನಿವಾರ ವಾಗ್ದಾಳಿ ನಡೆಸಿದೆ.
ನವದೆಹಲಿ: ಅದಾನಿ ಸಮೂಹ ಸಂಸ್ಥೆಗಳ ಷೇರು ಮೌಲ್ಯ ಕುಸಿತದಿಂದಾಗಿ ಎಲ್‌ಐಸಿ ಮತ್ತು ಎಸ್‌ಬಿಐ ಒಟ್ಟಾರೆ 78 ಸಾವಿರ ಕೋಟಿ ರು. ನಷ್ಟಅನುಭವಿಸಿವೆ. ಇಷ್ಟಾದರೂ ಕೇಂದ್ರ ವಿತ್ತ ಸಚಿವಾಲಯ ಮೌನವಾಗಿದೆ ಎಂದು ಕಾಂಗ್ರೆಸ್ ಶನಿವಾರ ವಾಗ್ದಾಳಿ ನಡೆಸಿದೆ.
ಅದಾನಿ ಸಮೂಹ ಅಕ್ರಮ ನಡೆಸಿದೆ ಎಂದು ಹಿಂಡನ್ಬರ್ಗ್ ಸಂಸ್ಥೆ (Hindenburg report) ವರದಿ ಬಿಡುಗಡೆಯಾದ ಬಳಿಕ ಅದಾನಿ ಸಮೂಹದ ವಿವಿಧ ಕಂಪನಿಗಳಲ್ಲಿ ಎಲ್‌ಐಸಿ ಮಾಡಿದ್ದ ಷೇರು ಹೂಡಿಕೆಯ (LIC's share investment) ಮೌಲ್ಯ 77000 ಕೋಟಿ ರು.ನಿಂದ 53000 ಕೋಟಿ ರು.ಗೆ ಇಳಿಕೆಯಾಗಿದೆ. ಅಂದರೆ ಎಲ್‌ಐಸಿಯ 23000 ಕೋಟಿ ಸಂಪತ್ತು ಕರಗಿ ಹೋಗಿದೆ. ಮತ್ತೊಂದೆಡೆ ಅದಾನಿ ಸಮೂಹಕ್ಕೆ ಸಾಲ ನೀಡಿರುವ ಎಸ್‌ಬಿಐನ ಷೇರು ಮೌಲ್ಯವೂ 54,618 ಕೋಟಿ ರು.ನಷ್ಟುಇಳಿಕೆಯಾಗಿದೆ. ಹೀಗೆ ಒಟ್ಟು 78000 ಕೋಟಿ ರು. ಹಣ ಕರಗಿ ಹೋಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ (Congress general secretary Randeep Surjewala)ಆರೋಪಿಸಿದ್ದಾರೆ.
ಒಂದೇ ಒಂದು ರಿಪೋರ್ಟ್, 1.44 ಲಕ್ಷ ಕೋಟಿ ಕಳೆದುಕೊಂಡ ಗೌತಮ್ ಅದಾನಿ!
ಜೊತೆಗೆ ಹಿಂಡನ್ಬರ್ಗ್ಸಂಸ್ಥೆಯ ವರದಿ ಬಿಡುಗಡೆಯಾದ ಬಳಿಕವೂ ಎಲ್‌ಐಸಿ ಮತ್ತು ಎಸ್‌ಬಿಐ ಅದಾನಿ ಸಮೂಹದ ಉದ್ಯಮಿಗಳಲ್ಲಿ ಹೂಡಿಕೆ ಮುಂದುವರೆಸಿವೆ. ಅದಾನಿ ಸಮೂಹಕ್ಕೆ ಎಸ್‌ಬಿಐ ಮತ್ತು ಇತರೆ ಬ್ಯಾಂಕ್‌ಗಳು 81000 ಕೋಟಿ ರು. ನೀಡಿವೆ ಎಂದು ಸುರ್ಜೇವಾಲಾ ಹೇಳಿದ್ದಾರೆ. ಹಿಂಡನ್‌ಬಗ್‌ರ್ ಸಂಸ್ಥೆ ತನ್ನ ಮೇಲೆ ಮಾಡಿರುವ ಭ್ರಷ್ಟಾಚಾರದ ಆರೋಪಗಳನ್ನು ಅದಾನಿ ಸಮೂಹ ಈಗಾಗಲೇ ಅಲ್ಲಗಳೆದಿದ್ದು, ಅಮೆರಿಕ ಕಂಪನಿ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.
ಅದಾನಿ ಗ್ರೂಪ್ ವಿರುದ್ಧ ವಂಚನೆ ಆರೋಪ; LIC, SBIಯಲ್ಲಿನ ನಿಮ್ಮ ಹೂಡಿಕೆಗೂ ಅಪಾಯ ಇದೆಯಾ?