ಲಾಕ್‌ಡೌನ್‌ನಿಂದ ಕುಟಂಬಸ್ಥರ ನಿಂದನೆಗೆ ಬಳಲಿದ ಶೆ.73ರಷ್ಟು ಹಿರಿಯರು: ಸಮೀಕ್ಷಾ ವರದಿ!

By Suvarna NewsFirst Published Jun 14, 2021, 8:34 PM IST
Highlights
  • ಲಾಕ್‌ಡೌನ್ ಹಲವರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ
  • ಲಾಕಡೌನ್‌ ಬಳಿಕ ಕೆಲ ಕುಟುಂಬದ ನೆಮ್ಮದಿ ಹಾಳಾದ ಘಟನೆಗಳು ಇವೆ
  • ಲಾಕ್‌ಡೌನ್‌ನಲ್ಲಿ ವೃದ್ಧರು, ಹಿರಿಯರನ್ನು ನಿಂದಿಸಿದ ಕುಟುಂಬಸ್ಥರ ಸಂಖ್ಯೆ ಹೆಚ್ಚು

ನವದೆಹಲಿ(ಜೂ.14): ಕೊರೋನಾ ವೈರಸ್ ವಕ್ಕರಿಸಿದ ಬಳಿಕ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಹೇರಲಾಗಿದೆ. ಮೊದಲ ಅಲೆ ಹಾಗೂ 2ನೇ ಅಲೆಯಲ್ಲಿ ಲಾಕ್‌ಡೌನ್ ಹೇರಲಾಗಿದೆ. ಇನ್ನು ಕೊರೋನಾ ಕಾರಣ ಹಲವರು ಮನೆಯಿಂದಲೇ ಕೆಲಸ ಮಾಡುವ ಅವಕಾಶ ಪಡೆದಿದ್ದರೆ, ಬಾಗಿಲು ಮುಚ್ಚಿದ ಉದ್ಯಮದಿಂದ ಹಲವರು ಮನೆಯಲ್ಲಿ ದಿನದೂಡುವಂತಾಗಿದೆ. ಪರಿಣಾಮ ಮನೆಯಲ್ಲಿನ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗಿದೆ ಎನ್ನುತ್ತಿದೆ ಏಜ್‌ವೆಲ್ ಫೌಂಡೇಶನ್ ನಡೆಸಿದ ಸಮೀಕ್ಷಾ ವರದಿ.

ಹೊಸ ಹೋಟೆಲ್‌ಗೆ ಬೀಗ ಹಾಕಿ ಬೀದಿ ಬದಿಗೆ ಬಂದ ಬಾಬಾ ಕಾ ಡಾಬಾ!.

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಕುಟುಂಬಸ್ಥರೆಲ್ಲಾ ಮನೆಯಲ್ಲೇ ಕಾಲಕಳೆಯುವಂತಾಗಿದೆ. ಇದರಿಂದ ಕುಟುಂಬದ ಹಿರಿಯರು ಇನ್ನಿಲ್ಲದ ನೋವು ಅನುಭವಿಸಿದ್ದಾರೆ. ಇದಕ್ಕೆ ಕಾರಣನ್ನೂ ಹೇಳಿದ್ದಾರೆ. 5,000 ಹಿರಿಯ ವ್ಯಕ್ತಿಗಳನ್ನು ಸಮೀಕ್ಷೆಯಲ್ಲಿ ಸಂದರ್ಶಿಸಲಾಗಿದೆ. ಇದರಲ್ಲಿ ಶೇಕಡಾ 73 ರಷ್ಟು ಹಿರಿಯರು, ವೃದ್ಧರು ಕುಟುಂಬದಿಂದ, ನಿವಾಸಿಗಳಿಂದ ನಿಂದನೆಗೊಳಪಟ್ಟಿದ್ದಾರೆ ಎಂದು ವರದಿ ಹೇಳುತ್ತಿದೆ.

ಲಾಕ್ ಡೌನ್ ಅವಧಿ ಹಾಗೂ ಬಳಿಕ ಹಿರಿಯನ್ನು, ವೃದ್ಧರ ಮೇಲಿನ ದುರುಪಯೋಗದ ಪ್ರಕರಣಗಳು ಹೆಚ್ಚಾಗಿದೆ. ಪರಸ್ಪರ ಉತ್ತಮ ಸಂಬಂಧವಿಲ್ಲದ ಕಾರಣ ಶೇಕಡಾ 61 ರಷ್ಟು ಹಿರಿಯರು ಕುಟುಂಬದಿಂದ ನಿಂದನೆ ಎದುರಿಸಿದ್ದಾರೆ ಎಂದಿದ್ದಾರೆ. ಶೇಕಡಾ 65 ರಷ್ಟು ವೃದ್ಧರು ಅಥವಾ ಹಿರಿಯು ಕುಟುಂಬದಿಂದ ನಿರ್ಲಕ್ಷ್ಯ ಎದುರಿಸುತ್ತಿದ್ದಾರೆ ಎಂದು ಸಮೀಕ್ಷೆ ವರದಿ ಹೇಳುತ್ತಿದೆ. ಶೇಕಡಾ  58 ರಷ್ಟು ಹಿರಿಯರು ಸಮಾಜದಿಂದ ನಿಂದನೆಗೆ ಒಳಗಾಗುತ್ತಿದ್ದಾರೆ ಎಂದು ವರದಿ ಹೇಳುತ್ತಿದೆ.

ಲಾಕ್‌ಡೌನ್‌ನಿಂದ ಸ್ಯಾಂಡಲ್‌ವುಡ್‌ಗೆ ಭಾರೀ ನಷ್ಟ, ಚೇತರಿಸಿಕೊಳ್ಳೋದೆ ಸವಾಲು.

ವಯಸ್ಸಾದ ಪ್ರತಿ ಮೂರನೇ ವ್ಯಕ್ತಿ ವೃದ್ದಾಪ್ಯದಲ್ಲಿ ಕೌಟುಂಬಿಕ ಹಿಂಸಾಚರವನ್ನೂ ಎದುರಿಸಿದ್ದಾರೆ ಎಂದು ಸಮೀಕ್ಷಾ ವರದಿ ಹೇಳುತ್ತಿದೆ. ಕೊರೋನಾ ವೈರಸ್ ಭೀತಿ, ಕುಟುಂಬ, ಸಮಾಜದ ನಿಂದನೆ, ದೌರ್ಜನ್ಯ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ ಎಂದು ವರದಿ ಹೇಳುತ್ತಿದೆ.

click me!