ಕೋವಿಡ್ ಗುಣಮುಖರಿಗೆ ಒಂದು ಡೋಸ್ ಲಸಿಕೆ ಸಾಕು; ಅಧ್ಯಯನ ವರದಿ ಬಹಿರಂಗ!

By Suvarna NewsFirst Published Jun 14, 2021, 6:34 PM IST
Highlights
  • AIG ಆಸ್ಪತ್ರೆ ನಡೆಸಿದ ಸಂಶೋಧನಾ ಅಧ್ಯಯನ ವರದಿ ಬಹಿರಂಗ
  • ಕೋವಿಡ್‌ನಿಂದ ಗುಣಮುಖರಾದರಲ್ಲಿ ಒಂದು ಡೋಸ್ ಪರಿಣಾಮಕಾರಿ
  • ಅಧ್ಯಯನ ವರದಿ ಹೆಚ್ಚಿನ ಮಾಹಿತಿ ಇಲ್ಲಿದೆ
     

ಹೈದರಾಬಾದ್(ಜೂ.14): ಕೊರೋನಾ ವೈರಸ್ ನಿಯಂತ್ರಣಕ್ಕೆ ಸಂಪೂರ್ಣ ಭಾರತೀಯರಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಅವಿರತ ಪ್ರಯತ್ನ ಮಾಡುತ್ತಿದೆ. ಅಲ್ಪ ಉತ್ಪಾದನೆ, ಲಸಿಕೆ ಅಭಾವ, ಪೂರೈಕೆ ಕೊರತೆ ಸೇರಿದಂತೆ ಹಲವು ಅಡೆತಡೆಗಳ ನಡುವೆ ಡೋಸ್ ಅಂತರವನ್ನು ಹೆಚ್ಚಿಸಲಾಗಿದೆ. ಇದೀಗ ಹೈದರಾಬಾದ್‌ನ AIG ಆಸ್ಪತ್ರೆ ನಡೆಸಿದ ಅಧ್ಯಯನ ವರದಿ ಹೊಸ ಅಂಶ ಬಹಿರಂಗ ಪಡಿಸಿದೆ.

ಲಕ್ಷ ಲಕ್ಷ ಲಸಿಕೆ ಡೋಸ್ ಪೋಲು: ಜಾರ್ಖಂಡ್‌ನಲ್ಲಿ ಗರಿಷ್ಠ,ಕೇರಳದಲ್ಲಿ ಕನಿಷ್ಠ!.

Latest Videos

ಅಧ್ಯಯನ ವರದಿ ಪ್ರಕಾರ, ಕೋವಿಡ್‌ನಿಂದ ಗುಣಮುಖರಾದವರಿಗೆ ಒಂದು ಡೋಸ್ ಲಸಿಕೆ ಸಾಕು. ಒಂದು ಡೋಸ್ ಲಸಿಕೆ ಪಡೆದ ಗುಣಮುಖರಲ್ಲಿ ಆ್ಯಂಟಿ ಬಾಡಿ ಉತ್ಪಾದನೆ ಹೆಚ್ಚು ಎಂದಿದೆ. ಕೊರೋನಾದಿಂದ ಗುಣಮುಖರಾದವರು ಹಾಗೂ ಸೋಂಕಿತರಲ್ಲದ 260ಕ್ಕೂ ಹೆಚ್ಚು ಮಂದಿಯ ಆ್ಯಂಟಿ ಬಾಡಿ ಪರೀಕ್ಷೆಯನ್ನು ಈ ಅಧ್ಯಯನ ವರದಿಗೆ ಬಳಸಿಕೊಳ್ಳಲಾಗಿದೆ.

ಇದೇ ಕೋವಿಡ್ ರಹಿತ ವ್ಯಕ್ತಿಗಳಲ್ಲಿ ಎರಡು ಡೋಸ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಆದರೆ ಕೊರೋನಾದಿಂದ ಗುಣಮುಖರಾವರಲ್ಲಿ ಕೇವಲ ಒಂದು ಡೋಸ್ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಅಧ್ಯಯನ ವರದಿ ಹೇಳುತ್ತಿದೆ.

ಖಾಸಗಿ ಆಸ್ಪತ್ರೆಗೆ ಲಸಿಕೆ ದರ ನಿಗದಿಪಡಿಸಿದ ಕೇಂದ್ರ; ಇಲ್ಲಿದೆ 3 ವಾಕ್ಸಿನ್ ಬೆಲೆ !

ಕೊರೋನಾದಿಂದ ಗುಣಮುಖರಾದವರೂ 2 ಡೋಸ್ ಪಡೆಯುವುದರಿಂದ ಸಮಸ್ಯೆ ಇಲ್ಲ. ಆದರೆ ಒಂದು ಡೋಸ್ ಪರಿಣಾಮಕಾರಿ. 2ನೇ ಡೋಸ್ ಅಂತರವನ್ನೂ ಈ ವ್ಯಕ್ತಿಗಳು ಹೆಚ್ಚಿಸಬಹುದು. ಇದರಿಂದ ಸದ್ಯ ಎದುರಾಗಿರುವ ಲಸಿಕೆ ಅಭಾವವನ್ನೂ ಕಡಿಮೆ ಮಾಡಲಿದೆ ಎಂದು ವರದಿ ಹೇಳುತ್ತಿದೆ.

click me!