ಧಾರಾವಿ ಕೊರೋನಾ ಮುಕ್ತ: ಏಷ್ಯಾದ ಅತೀ ದೊಡ್ಡ ಸ್ಲಂನಲ್ಲಿ ಝೀರೋ ಕೋವಿಡ್‌ ಕೇಸ್‌!

By Suvarna NewsFirst Published Jun 14, 2021, 6:03 PM IST
Highlights

* ಮುಂಬೈನ ಧಾರಾವಿಯಲ್ಲಿ ಕೊರೋನಾ ಹೊಸ ಪ್ರಕರಣಗಳಿಲ್ಲ

* ಏಷ್ಯಾದ ಅತೀ ದೊಡ್ಡ ಸ್ಲಂ ಈಗ ಕೊರೋನಾ ಮುಕ್ತ

* ಏಪ್ರಿಲ್ 8 ರಂದು ಧಾರಾವಿಯಲ್ಲಿ ಅತೀ ಹೆಚ್ಚು 99 ಪ್ರಕರಣಗಳು ಒಂದೇ ದಿನ ವರದಿಯಾಗಿದ್ದವು

ಮುಂಬೈ(ಜೂ.14): ದೇಶದಲ್ಲಿ ಅಬ್ಬರಿಸುತ್ತಿದ್ದ ಎರಡನೇ ಕೊರೋನಾ ಅಲೆ ಕೊಂಚ ಶಾಂತಗೊಂಡಿದೆ. ಅದರಲ್ಲೂ ಕೊರೋನಾ ಪ್ರಕರಂಣಗಳು ಅತೀ ಹೆಚ್ಚು ದಾಖಲಾಗುತ್ತಿದ್ದ ಮಹಾರಾಷ್ಟ್ರದಲ್ಲಿ, ಸದ್ಯ ಈ ಸಂಖ್ಯೆ ಬಹಳ ಕಡಿಮೆಯಾಗಿದೆ.  ಹೀಗಿರುವಾಗ ಮುಂಬೈನ ಧಾರಾವಿಯಲ್ಲಿ ಸೋಮವಾರ ಒಂದೇ ಒಂದು ಪ್ರಕರಣ ವರದಿಯಾಗಿಲ್ಲ ಎಂಬುವುದು ಅತ್ಯಂತ ಖುಷಿ ಕೊಟ್ಟಿದೆ. ಧಾರಾವಿ ಏಷ್ಯಾದ ಅತೀ ದೊಡ್ಡ ಸ್ಲಂ ಏರಿಯಾ ಎಂಬುವುದು ಉಲ್ಲೇಖನೀಯ.

ಗ್ರೇಟರ್ ಮುಂಬೈ ಮುನ್ಸಿಪಾಲ್ ಅನ್ವಯ ಸೋಮವಾರದಂದು ಕೊರೊನಾದ ಒಂದೇ ಒಂದು ಪ್ರಕರಣ ಧಾರಾವಿಯಲ್ಲಿ ವರದಿಯಾಗಿಲ್ಲ. ಇನ್ನು ಏಪ್ರಿಲ್ 8 ರಂದು ಧಾರಾವಿಯಲ್ಲಿ ಅತೀ ಹೆಚ್ಚು 99 ಪ್ರಕರಣಗಳು ಒಂದೇ ದಿನ ವರದಿಯಾಗಿದ್ದವು.

ಧಾರಾವಿಗೆ ವಿಶ್ವಸಂಸ್ಥೆ ಮೆಚ್ಚುಗೆ: ಕೊರೋನಾ ನಿಯಂತ್ರಿಸಲು ಯಶಸ್ವಿಯಾದ ಏಷ್ಯಾದ ಅತಿದೊಡ್ಡ ಸ್ಲಂ! Page views: 2241

ಭಾನುವಾರ ಕೇವಲ ಎರಡು ಪ್ರಕರಣ

ಇನ್ನು ಭಾನುವಾರ ಧಾರಾವಿಯಲ್ಲಿ ಕೇವಲ ಎರಡು ಪ್ರಕರಣಗಳು ಧಾರಾವಿಯಲ್ಲಿ ವರದಿಯಾಗಿದ್ದವು. ಇನ್ನು ಕೇವಲ 13 ಸಕ್ರಿಯ ಪ್ರಕರಣಗಳಷ್ಟೇ ಇಲ್ಲಿವೆ. ಇವೆಲ್ಲಕ್ಕೂ ಮಿಗಿಲಾಗಿ ಇಲ್ಲಿ ಎರಡನೇ ಅಲೆ ಹೆಚ್ಚು ಪರಿಣಾಮ ಬೀರಿಲ್ಲ.

ಮೊದಲ ಅಲೆಯಲ್ಲಿ 350 ಸಾವು

ಕೊರೋನಾ ಮೊದಲ ಅಲೆ ಧಾರಾವಿಯಲ್ಲಿ ಮರಣ ಮೃದಂಗ ಬಾರಿಸಿತ್ತು. 2020ರಲ್ಲಿ ಇಲ್ಲಿ ದಾಳಿ ಇಟ್ಟಿದ್ದ ಕೊರೊನಾ ಮೊದಲ ಅಲೆಗೆ ಬರೋಬ್ಬರಿ  350 ಮಂದಿ ಬಲಿಯಾಗಿದ್ದರು. ಆದರೆ ಈ ಬಾರಿ ಇಲ್ಲಿ ಕೇವಲ 42 ಮಂದಿ ಮೃತಪಟ್ಟಿದ್ದಾರೆಂಬುವುದು ಸಮಾಧಾನಪಡಿಸುವ ವಿಚಾರವಾಗಿದೆ.

ಮುಂಬೈನ ಈ ಸ್ಲಂ ಪ್ರವಾಸೀ ಕೇಂದ್ರ!: ವರ್ಷಕ್ಕೆ 3 ಸಾವಿರ ಕೋಟಿ ವಹಿವಾಟು!

ಏಷ್ಯಾದ ಅತೀ ದೊಡ್ಡ ಸ್ಲಂ

ಮುಂಬೈನ 520 ಎಕರೆ ಪ್ರದೇಶದಲ್ಲಿ ಹಬ್ಬಿಕೊಂಡಿರುವ ಧಾರಾವಿ ಏಷ್ಯಾದ ಅತೀ ದೊಡ್ಡ ಸ್ಲಂ ಏರಿಯಾ ಆಗಿದೆ. ಅತೀ ಹೆಚ್ಚು ಜನಸಂಖ್ಯೆ ಇರುವ ಈ ಪ್ರದೇಶದಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆ. 

click me!