
ನವದೆಹಲಿ(ನ.02): ಅತೀ ವೇಗದ ಬುಲೆಟ್ ರೈಲು ಯೋಜನೆ ಕಾರ್ಯ ಆರಂಭಗೊಂಡಿದೆ. ಮುಂಬೈ-ಪುಣೆ-ಹೈದರಾಬಾದ್‌ಗೆ ರೈಲಿನಲ್ಲಿ ಪ್ರಯಾಣ ಮಾಡಲು 13 ಗಂಟೆ ಪ್ರಯಾಣದ ಸಮಯ ಅತ್ಯವಶ್ಯಕ. ಆದರೆ ಬುಲೆಟ್ ರೈಲಿನಲ್ಲಿ ಕೇವಲ 3.5 ಗಂಟೆಯಲ್ಲಿ ನಿಗದಿತ ಸ್ಥಳ ತಲುಪಬಹುದು. ಬರೋಬ್ಬರಿ 9.5 ಗಂಟೆ ಸಮಯ ಉಳಿತಾಯವಾಗಲಿದೆ.
ಚೆನ್ನೈ- ಮೈಸೂರು ಸೇರಿ ದೇಶದಲ್ಲಿ 7 ಬುಲೆಟ್ ರೈಲು ಮಾರ್ಗ?.
ಪ್ರಸ್ತಾವಿತ ಮುಂಬೈ-ಹೈದರಾಬಾದ್ ರೈಲು 711 ಕಿಲೋಮೀಟರ್ ಅತೀ ದೊಡ್ಡ ಯೋಜನೆಯಾಗಿದೆ. ಬಹುನಿರೀಕ್ಷಿತ ಬುಲೆಟ್ ರೈಲು ಯೋಜನೆಯ ಭೂ ಸಮೀಕ್ಷೆ, ಬಿಡ್ಡಿಂಗ್ ಮತ್ತು ಯೋಜನೆಯ ಕಾರ್ಯಸಾಧ್ಯತೆ ನವೆಂಬರ್ 5 ರಿಂದ ಆರಂಭವಾಗುವ ನಿರೀಕ್ಷೆಯಿದೆ.
ಹೈದರಾಬಾದ್-ಪುಣೆ-ಮುಂಬೈ ರೈಲು ಯೋಜನೆಯು ಈ ವರ್ಷ ರಾಷ್ಟ್ರೀಯ ಹೈ-ಸ್ಪೀಡ್ ರೈಲು ನಿಗಮ(NHSRCL)ಕೈಗೆತ್ತಿಕೊಂಡ 7 ಬುಲೆಟ್ ರೈಲು ಟೆಂಡರ್‌ಗಳ ಭಾಗವಾಗಿದೆ. ಮುಂಬೈ ಮತ್ತು ಹೈದರಾಬಾದ್ ಬುಲೆಟ್ ರೈಲು ಪ್ರತಿ ಗಂಟೆಗೆ 320 ಕಿ.ಮೀ ವೇಗದಲ್ಲಿ ಸಾಗಲಿದೆ. ಸಾಮಾನ್ಯ ರೈಲುಗಳು 80 ರಿಂದ 120 ಕಿ.ಮೀ ವೇಗದಲ್ಲಿ ಸಂಚರಿಸುತ್ತದೆ.
ಬುಲೆಟ್ ರೈಲು ಯೋಜನೆ ಕಾಮಗಾರಿ ಬಿಡ್ ಮಾಡುವರಿಗಾಗಿ ನವೆಂಬರ್ 5 ರಂದು ಬೆಳಗ್ಗೆ 11 ಗಂಟೆ ವಿಡಿಯೋ ಕಾನ್ಫರೆನ್ಸ್ ಸಭೆ ಆಯೋಜಿಸಲಾಗಿದೆ. ಬಿಡ್ಡಿಂಗ್ ದಾರರು 2,22,843 ರೂ ಭದ್ರತೆ ಠೇವಣಿ ಇಡಬೇಕಾಗಿದೆ. 16 ವಾರಗಳಲ್ಲಿ ಸಮೀಕ್ಷೆಯ ಕಾರ್ಯಗಳು ಪೂರ್ಣಗೊಳ್ಳಲಿದೆ. ಈ ಯೋಜನೆಯಲ್ಲಿ ಮುಂಬೈ, ಪನ್ವೆಲ್, ನವೀ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಲೋನವಾಲ, ಪಿಂಪ್ರಿ-ಚಿಂಚ್‌ವಾಡ್, ಪುಣೆ, ಬಾರಾಮತಿ, ಸೋಲಾಪುರ, ಗುಲ್ಬರ್ಗಾ, ಹುಮನಾಬಾದ್-ಜಹೀರಾಬಾದ್, ಸಂಗರೆಡ್ಡಿ ಮತ್ತು ಹೈದರಾಬಾದ್‌ನಲ್ಲಿ 12 ನಿಲ್ದಾಣಗಳನ್ನು ನಿರ್ಮಿಸಲಾಗುವುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ