2024ರಲ್ಲಿ ಮೋದಿಗೇ ಸಿಎಂ ನಿತೀಶ್‌ ಸವಾಲು: ಚಿರಾಗ್‌ ಪಾಸ್ವಾನ್‌ ಭವಿಷ್ಯ!

By Suvarna NewsFirst Published Nov 2, 2020, 3:02 PM IST
Highlights

ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರು ವಿಧಾನಸಭೆ ಚುನಾವಣೆ ಬಳಿಕ ಆರ್‌ಜೆಡಿ ನೇತೃತ್ವದ ಮಹಾ ಘಟಬಂಧನ್‌ ಜತೆ ಸೇರ್ಪಡೆ| 2024ರಲ್ಲಿ ಮೋದಿಗೇ ಸಿಎಂ ನಿತೀಶ್‌ ಸವಾಲು| ಚಿರಾಗ್‌ ಪಾಸ್ವಾನ್‌ ಭವಿಷ್ಯ

ಪಟನಾ(ನ.02): ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರು ವಿಧಾನಸಭೆ ಚುನಾವಣೆ ಬಳಿಕ ಆರ್‌ಜೆಡಿ ನೇತೃತ್ವದ ಮಹಾ ಘಟಬಂಧನ್‌ ಜತೆ ಸೇರಿಕೊಂಡು 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಗೆ ಸವಾಲೆಯುತ್ತಾರೆ ಎಂದು ಎಲ್‌ಜೆಪಿ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌ ಭವಿಷ್ಯ ನುಡಿದಿದ್ದಾರೆ.

ಅಲ್ಲದೇ ತಮ್ಮ ಪಕ್ಷ ಲೋಕ ಜನಶಕ್ತ ಪಾರ್ಟಿ ಬಿಜೆಪಿಗೆ ನಿಷ್ಠವಾಗಿ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಕಳೆದ ಚುನಾವಣೆಯಲ್ಲಿ ನಿತೀಶ್‌ ಕುಮಾರ್‌ ತನ್ನ ದೀರ್ಘಕಾಲದ ಎದುರಾಳಿ ಆರ್‌ಜೆಡಿ ಜತೆ ಮೈತ್ರಿ ಮಾಡಿಕೊಂಡದ್ದು, ಮೋದಿ ಗುಜರಾತ್‌ ಪ್ರಧಾನಿಯಾಗಿದ್ದ ವೇಳೆ ಟೀಕೆ ಮಾಡಿದ್ದು ಮುಂತಾದವುಗಳನ್ನು ನೆನಪಿಸಿದ್ದಾರೆ.

 ನಾಳೆ ಎರಡನೇ ಹಂತದ ಮತದಾನ

ಬಿಹಾರ ವಿಧಾನಸಭೆಗೆ ನ.3ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಸೀಮಾಂಚಲ ವಲಯದ 17 ಜಿಲ್ಲೆಗಳ 94 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಪ್ರದೇಶಗಳಲ್ಲಿ ಆರ್‌ಜೆಡಿ ಹೆಚ್ಚಿನ ಪ್ರಾಬಲ್ಯ ಹೊಂದಿದೆ.

ಒಟ್ಟು ಮೂರು ಹಂತಗಳಲ್ಲಿ ಮತದಾನ ನಡೆಯಲಿದ್ದು, ಅ.28ರಂದು ನಡೆದ ಮೊದಲ ಹಂತದಲ್ಲಿ 17 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶೇ.54.3ರಷ್ಟುಮತದಾನ ನಡೆದಿತ್ತು. ನ.7ಕ್ಕೆ ಕೊನೆಯ ಹಂತದ ಮತದಾನ ನಡೆಯಲಿದ್ದು, ನ.10ಕ್ಕೆ ಫಲಿತಾಂಶ ಹೊರ ಬೀಳಲಿದೆ.

click me!