ಮದ್ವೆ ದಿನವೂ ಕೋರ್ಟ್ ಕಲಾಪದಲ್ಲಿ ಭಾಗಿಯಾಗಿ ಸದ್ದು| ಮದುವೆ ಬಿಟ್ಟು ಕಕ್ಷಿದಾರನ ಜಾಮೀನಿಗೆ ವಕೀಲ ನೆರವು ಪಂಜಾಬ್ ಮತ್ತು ಹರಾರಯಣ ಹೈಕೋರ್ಟ್ ವಕೀಲ ಲುಪಿಲ್ ಗುಪ್ತಾ
ಹರ್ಯಾಣ(ನ.02): ಮದ್ವೆ ಅಂದ್ಮೇಲೆ ಮಂತ್ರ ಮತ್ತು ವಾದ್ಯಗೋಷ್ಠಿ ಇದ್ದೇ ಇರುತ್ತೆ. ಅಲ್ಲದೆ, ಇದೇ ಮುಹೂರ್ಥಕ್ಕೆ ತಾಳಿಯಾಗಬೇಕು ಎಂಬ ಅಲಿಖಿತ ನಿಯಮವೂ ಪಾಲನೆಯಾಗ್ಲೇಬೇಕು.
ಆದ್ರೆ, ಇದ್ಯಾವುದನ್ನೂ ಲೆಕ್ಕಿಸದ ಪಂಜಾಬ್ ಮತ್ತು ಹರಾರಯಣ ಹೈಕೋರ್ಟ್ ವಕೀಲ ಲುಪಿಲ್ ಗುಪ್ತಾ(27) ಮಾತ್ರ ಮದ್ವೆ ದಿನವೂ ಕೋರ್ಟ್ ಕಲಾಪದಲ್ಲಿ ಭಾಗಿಯಾಗಿ ಸದ್ದು ಮಾಡಿದ್ದಾರೆ.
ಹೌದು, ಮದ್ವೆ ದಿನವೂ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಕಲಾಪದಲ್ಲಿ ಭಾಗಿಯಾದ ಗುಪ್ತಾ ಅವರು ತಮ್ಮ ಕಕ್ಷಿದಾರನಿಗೆ ನಿರೀಕ್ಷಣಾ ಜಾಮೀನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವೇಳೆ ಮದ್ವೆ ಶಾಸ್ತ್ರ ನೆರವೇರಿಸಲು ವರ ಮತ್ತು ವಧುವಿನ ಕುಟುಂಬಸ್ಥರು ಅನ್ಯ ದಾರಿಯಿಲ್ಲದೆ ಕಾದು ಕುಳಿತ್ತಿದ್ದರಂತೆ!