
ಲಕ್ನೋ: ಸುಡುವ ಬಿಸಿಲಿನಲ್ಲಿ ಮೂರು ಧ್ಯಾನ ಮಾಡಿದ್ದ 70 ವರ್ಷದ ಸ್ವಾಮೀಜಿ (Saint) ತೀವ್ರ ಅಸ್ವಸ್ಥರಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವನ್ನಪ್ಪಿದ ವೃದ್ಧ ಸ್ವಾಮೀಜಿ ಮೂಲತಃ ಉತ್ತರ ಪ್ರದೇಶದ ಅಮೇಥಿಯವರು ಎಂದು ತಿಳಿದು ಬಂದಿದ್ದು, ಇವರನ್ನು ಕಮ್ಲಿವಾಲೆ ಪಾಗಲ್ ಬಾಬಾ (Kamliwale Pagal Baba) ಎಂದೇ ಸ್ಥಳೀಯರು ಗುರುತಿಸುತ್ತಾರೆ. ಮೃತ ಸ್ವಾಮೀಜಿ ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಮೂರು ದಿನ ಮಹಾ ಧ್ಯಾನ ಮಾಡಲು ಮುಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಸ್ವಾಮೀಜಿ ಮೇ 23ರಿಂದ ಮೇ 27ರವರೆಗೆ ಕೈಲಾ ದೇವಿ ಪೊಲೀಸ್ ಠಾಣಾ ವ್ಯಾಪ್ತಿಯ ಬೇನಿಪುರದಲ್ಲಿ ಪಂಚಾಗ್ನಿ ತಪಸ್ಸು ಹೆಸರಿನಲ್ಲಿ ಧ್ಯಾನಕ್ಕೆ ಕುಳಿತಿದ್ದರು. ಈ ತಪಸ್ಸು ಆಚರಣೆಗೆ ಸ್ವಾಮೀಜಿಗಳು ಸ್ಥಳೀಯ ಪೊಲೀಸರಿಂದ ಅನುಮತಿ ಪಡೆದುಕೊಂಡಿದ್ದರು ಎಂದು ಸಂಭಾಲ್‌ನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ವಿನಯ್ ಕುಮಾರ್ ಮಿಶ್ರಾ ಮಾಹಿತಿ ನೀಡಿದ್ದಾರೆ.
ಏನಿದು ಪಂಚಾಗ್ನಿ ತಪಸ್ಸು?
ಈ ತಪಸ್ಸನ್ನು ಬಯಲು ಪ್ರದೇಶದಲ್ಲಿ ಆಚರಣೆ ಮಾಡಲಾಗುತ್ತದೆ. ಸ್ವಾಮೀಜಿಗಳ ಸುತ್ತಲೂ ಬೆಂಕಿ ಹಾಕಲಾಗುತ್ತದೆ. ಬೆಂಕಿ ಮಧ್ಯೆ ಕುಳಿತುಕೊಳ್ಳುವ ಸ್ವಾಮೀಜಿಗಳು ಕದಲದೇ ಮೂರು ದಿನ ಧ್ಯಾನ ಮಾಡುತ್ತಾರೆ. ಇದನ್ನು ಪಂಚಾಗ್ನಿ ತಪಸ್ಸು (Panchagni Tapsya) ಎಂದು ಕರೆಯಲಾಗುತ್ತದೆ.
ಪಂಚಾಗ್ನಿ ತಪಸ್ಸಿನ ವೇಳೆ ಸ್ವಾಮೀಜಿಗಳ ಆರೋಗ್ಯದಲ್ಲಿ ಏರಿಳಿತ ಉಂಟಾಗಿದೆ. ಭಾನುವಾರ ಆರೋಗ್ಯ ತುಂಬಾ ಕ್ಷೀಣಿಸಿದ ಕಾರಣ ಅವರ ಭಕ್ತರು ಸ್ವಾಮೀಜಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದರು. ಆದ್ರೆ ಆಸ್ಪತ್ರೆಗೆಮ ಸಾಗಿಸುವ ಮಾರ್ಗಮಧ್ಯೆ ಸ್ವಾಮೀಜಿಗಳ ಸಾವು ಆಗಿದೆ ಎಂದು ವಿನಯ್ ಕುಮಾರ್ ಮಿಶ್ರಾ ಹೇಳಿದ್ದಾರೆ.
ಸ್ವಾಮೀಜಿಗಳ ಪಂಚಾಗ್ನಿ ತಪಸ್ಸು ಮಾಡುತ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ 23 ಬಾರಿ ಪಂಚಾಗ್ನಿ ತಪಸ್ಸು ಆಚರಣೆಯಲ್ಲಿ ಭಾಗಿಯಾಗಿದ್ದಾರೆ. ಸ್ವಾಮೀಜಿಗಳ ಸಾವಿನ ಮಾಹಿತಿಯನ್ನು ಅವರ ಕುಟುಂಬಕ್ಕೂ ತಿಳಿಸಲಾಗಿದೆ ಎಂದು ಸಂಭಾಲ ಜಿಲ್ಲೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ವಾಮೀಜಿಗಳ ನಿಧನದಿಂದ ಸಂಭಾಲ ಹಾಗೂ ಅಮೇಥಿ ಭಾಗದಲ್ಲಿ ಮೌನ ಆವರಿಸಿದೆ.
Shocking Video: ಪುತ್ರನ ಎದೆ ಮೇಲೆ ಕುಳಿತು ತಾಯಿಯಿಂದ ಹಲ್ಲೆ; ದೂರು ಕೊಟ್ಟ ತಂದೆಗೆ ಶಾಕ್ ಕೊಟ್ಟ ಮಗ
ಕಮ್ಲಿವಾಲೆ ಪಾಗಲ್ ಬಾಬಾ ಅನುಯಾಯಿಗಳು ಹೇಳೋದೇನು?
ಕಮ್ಲಿವಾಲೆ ಪಾಗಲ್ ಬಾಬಾ ವಿಶ್ವಶಾಂತಿ ಮತ್ತಯ ಸಮಾಜವನ್ನು ಮಾದಕ ವ್ಯಸನದಿಂದ ಮುಕ್ತ ಮಾಡುವ ಉದ್ದೇಶದಿಂದ ತಪಸ್ಸು ಆಚರಣೆಗೆ ಮುಂದಾಗಿದ್ದರು. ಜಾಗತಿಕ ತಾಪಮಾನ, ಗೋವುಗಳ ರಕ್ಷಣೆ, ರಾಷ್ಟ್ರೀಯ ಮಾದಕ ವ್ಯಸನ ಅಭಿಯಾನ ಮತ್ತು ವಿಶ್ವ ಶಾಂತಿ ಮತ್ತು ಕಲ್ಯಾಣಕ್ಕಾಗಿ ಸ್ವಾಮೀಜಿಗಳು ಧ್ಯಾನ ಮಾಡುತ್ತಿದ್ದರು ಎಂದು ಕಮ್ಲಿವಾಲೆ ಪಾಗಲ್ ಬಾಬಾ ಅವರ ಅನುಯಾಯಿಗಳು ಹೇಳುತ್ತಾರೆ.
ಉತ್ತರ ಭಾರತದಲ್ಲಿ 50 ಡಿಗ್ರಿ ದಾಟಿದ ಉಷ್ಣಾಂಶ, ಸನ್ ಸ್ಟ್ರೋಕ್‌ನಿಂದ 4 ಸಾವಿರ ಜನ ಆಸ್ಪತ್ರೆಗೆ!
ಕಳೆದ ನಾಲ್ಕು ದಶಕಗಳಲ್ಲಿಯೇ ಉತ್ತರ ಪ್ರದೇಶದಲ್ಲಿ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. 45 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ತಾಪಮಾನ ದಾಖಲಾಗುತ್ತಿದ್ದು, ಜನರು ಎಚ್ಚರಿಕೆಯಿಂದಿರಬೇಕು. ಅನಾವಶ್ಯಕವಾಗಿ ಮನೆಯಿಂದ ಹೊರ ಬರದಂತೆ ಆರೋಗ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ.
ಉತ್ತರ ಭಾರತದ ರಾಜ್ಯಗಳಾದ ರಾಜಸ್ಥಾನ, ಹರಿಯಾಣ, ಪಂಜಾಬ್ ಮತ್ತು ದೆಹಲಿಗಳು ತೀವ್ರವಾದ ಉಷ್ಣಾಂಶದ ಅಲೆಗೆ ನಲುಗಿ ಹೋಗಿದೆ. ಮತ್ತು ಕೆಲವು ಪ್ರದೇಶಗಳಲ್ಲಿ ತಾಪಮಾನವು 50 ಡಿಗ್ರಿ ಸೆಲ್ಸಿಯಸ್ ಮೀರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ