ದೆಹಲಿ ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆ ತುರ್ತು ದ್ವಾರದಿಂದ ಹೊರಬಂದ ಪೈಲೆಟ್. ದಿಕ್ಕು ತೋಚದೆ ರಕ್ಕೆ ಮೇಲೆ ಬಂದ ವೃದ್ಧೆ. ವಿಮಾನದಿಂದ ಜಾರಿ ಹೊರಬಂದ ಪ್ರಯಾಣಿಕರು.
ನವದೆಹಲಿ (ಮೇ.29): 30 ನಿಮಿಷದಲ್ಲಿ ವಿಮಾನ ಸ್ಫೋಟಿಸಲಾಗುವುದು ಎಂಬ ಬೆದರಿಕೆಯ ಸಂದೇಶ ಹಿನ್ನೆಲೆಯಲ್ಲಿ ದಿಲ್ಲಿಯಿಂದ ವಾರಾಣಸಿಗೆ ಹೊರಟಿದ್ದ ವಿಮಾನದ ಪ್ರಯಾಣಿಕರನ್ನು ಮಂಗಳವಾರ ತರಾತುರಿಯಲ್ಲಿ ತೆರವುಗೊಳಿಸಲಾಯಿತು. ನಿರ್ಗಮನ ದ್ವಾರಗಳನ್ನು ತೆರೆದು ಜಾರು ಬಂಡೆ ರೀತಿ ವೇದಿಕೆ ಸೃಷ್ಟಿಸಿ ಪ್ರಯಾಣಿಕರನ್ನು ರಕ್ಷಿಸಲಾಯಿತು. ಬಳಿಕ ಇದೊಂದು ಹುಸಿ ಬೆದರಿಕೆ ಎಂಬುದು ಸಾಬೀತಾಯಿತು.
ಕಾರ್ಗಿಲ್ ದಾಳಿ ನಮ್ಮದೇ ತಪ್ಪು, 24 ವರ್ಷಗಳ ನಂತರ ತಪ್ಪೊಪ್ಪಿಕೊಂಡ ನವಾಜ್ ಷರೀಫ್!
undefined
ದೆಹಲಿಯಿಂದ ವಾರಣಾಸಿಗೆ ಹೊರಟಿದ್ದ ವಿಮಾನವನ್ನು ಇನ್ನು 30 ನಿಮಿಷಗಳಲ್ಲಿ ಸ್ಫೋಟಿಸಲಾಗುವುದು ಎಂಬ ಬೆದರಿಕೆ ಪತ್ರ ಪತ್ತೆಯಾದ ಹಿನ್ನೆಲೆಯಲ್ಲಿ ಇಡೀ ವಿಮಾನವನ್ನೇ ಖಾಲಿ ಮಾಡಿ ತಪಾಸಣೆ ಮಾಡಲಾಯಿತು. ತಪಾಸಣೆ ಬಳಿಕ ಅದೊಂದು ಹುಸಿ ಬೆದರಿಕೆ ಎಂದು ಖಚಿತಪಟ್ಟಿದೆ.
176 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಇಂಡಿಗೋ ವಿಮಾನ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 5 ಗಂಟೆ ಸುಮಾರಿಗೆ ಟೇಕ್ ಆಫ್ ಆಗಬೇಕಿತ್ತು. ಈ ವೇಳೆ ವಿಮಾನದ ಶೌಚಾಲಯದೊಳಗೆ ಇನ್ನು 30 ನಿಮಿಷದಲ್ಲಿ ಬಾಂಬ್ ಸ್ಫೋಟಗೊಳ್ಳುತ್ತದೆ ಎಂದು ಟಿಶ್ಯೂ ಪೇಪರ್‌ನಲ್ಲಿ ಬರೆದ ಬರಹ ಪೈಲಟ್ ಕೈಗೆ ಸಿಕ್ಕಿತ್ತು. ವಿಚಾರ ತಿಳಿಯುತ್ತಿದ್ದಂತೆ ವಿಮಾನವನ್ನು ರನ್‌ವೇನಿಂದ ಬದಿಗೆ ಕೊಂಡೊಯ್ದ ಸಿಬ್ಬಂದಿ, ಎಲ್ಲ ಪ್ರಯಾಣಿಕರನ್ನು ತುರ್ತು ಘಟಕದ ಮೂಲಕ ಸುರಕ್ಷಿತವಾಗಿ ಕೆಳಗಿಳಿಸಿದರು. ಈ ವೇಳೆ ವೃದ್ಧ ಮಹಿಳೆಯೊಬ್ಬರನ್ನು ಮಹಿಳಾ ಸಿಬ್ಬಂದಿ ಸುರಕ್ಷಿತವಾಗಿ ಕರೆತರುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಕನ್ನಡ ಯೂಟ್ಯೂಬರ್ ಡಾ ಬ್ರೋ ಗೆ ಯಾವ ಧರ್ಮದವರು ಹೆಚ್ಚು ಭಿಕ್ಷೆ ಹಾಕಿದರು!
ಎಲ್ಲಾ ಪ್ರಯಾಣಿಕರು ಕೆಳಗಿಳಿದ ಬಳಿಕ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತಪಾಸಣೆ ನಡೆಸಿದರು. ಆದರೆ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ. ಬಳಿಕ ದೆಹಲಿಯಿಂದ ವಾರಣಾಸಿಗೆ ಪ್ರಯಾಣಿಕರಿಗೆ ಪರ್ಯಾಯ ವಿಮಾನದ ವ್ಯವಸ್ಥೆಯನ್ನು ಮಾಡಲಾಯಿತು.