ಪ್ಯಾನ್ ಕಾರ್ಡ್‌ಗೆ ಆಧಾರ್ ನಂಬರ್ ಲಿಂಕ್ ಮಾಡಲು ಇನ್ನೆರಡೇ ದಿನ ಬಾಕಿ; ಇಲ್ಲದಿದ್ದರೆ ಏನಾಗುತ್ತೆ ಗೊತ್ತಾ?

By Sathish Kumar KHFirst Published May 29, 2024, 12:53 PM IST
Highlights

ಪ್ಯಾನ್ ಕಾರ್ಡ್‌ಗೆ ಆಧಾರ್‌ನಂಬರ್ ಲಿಂಕ್ ಮಾಡಲು ರಡು ದಿನಗಳು (ಮೇ 31) ಮಾತ್ರ ಬಾಕಿಯಿದೆ. ಈ ಅವಧಿಯಲ್ಲಿ ಆಧಾರ್ ಲಿಂಕ್ ಮಾಡರ್ 11 ಕೋಟಿ ಪ್ಯಾನ್‌ ಕಾರ್ಡ್‌ಗಳ ಸೇವೆ ನಿಷ್ಕ್ರಿಯವಾಗಲಿವೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ಬೆಂಗಳೂರು (ಮೇ 29): ದೇಶದಲ್ಲಿ ಪ್ಯಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಇನ್ನು ಎರಡು ದಿನಗಳು ಮಾತ್ರ ಬಾಕಿಯಿದೆ. ಮೇ 31ರೊಳಗೆ ಪ್ಯಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ರದ್ದಾಗಲಿವೆ. ಇನ್ನೂ 11 ಕೋಟಿ ಪ್ಯಾನ್‌ ಕಾರ್ಡ್ ಬಳಕೆದಾರರು ಆಧಾರ್ ಲಿಂಕ್ ಮಾಡದಿರಯವ ಕಾರಣ ಅವರ ಪ್ಯಾನ್ ಕಾರ್ಡ್ ರದ್ದಾಗಲಿದೆ ಎಂದು ಕೇಂದ್ರ ಸರ್ಕಾರದಿಂದ ಮುನ್ಸೂಚನೆ ನೀಡಲಾಗಿದೆ.

ಹೌದು, ಈಗಾಗಲೇ ದೇಶದಲ್ಲಿ ಪ್ರತಿಯೊಬ್ಬ ಪ್ಯಾನ್ ಕಾರ್ಡ್‌ ಹೋಲ್ಡರ್‌ಗಳು ಕಡ್ಡಾಯವಾಗಿ ತಮ್ಮ ಪ್ಯಾನ್‌ಗೆ ಆಧಾರ್ ಕಾರ್ಡ್‌ ನಂಬರ್ ಲಿಂಕ್ ಮಾಡಬೇಕು ಎಂದು 2023ರ ಜೂ.30ರವರೆಗೆ ಗಡುವು ನೀಡಲಾಗಿತ್ತು. ಆಗ ಉಚಿತವಾಗಿಯೇ ಎಲ್ಲರೂ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಿಕೊಳ್ಳಬಹುದಿತ್ತು. ಇದಾದ ನಂತರ ಪ್ರತಿ ಪ್ಯಾನ್ ಮತ್ತು ಅಧಾರ್ ಕಾರ್ಡ್ ಲಿಂಕ್‌ಗೆ 1,000 ರೂ. ದಂಡವನ್ನು ವಿಧಿಸಲಾಗುತ್ತಿದೆ. ಹೀಗೆ, ಪ್ಯಾನ್ ಮತ್ತು ಆಧಾರ್‌ ಲಿಂಕ್ ಮಾಡಿದ ದಂಡದಿಂದ ಬರೋಬ್ಬರಿ 600 ಕೋಟಿ ರೂ. ಆದಾಯ ಸಂಗ್ರವಾಗಿದೆ ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವರು ಮಾಹಿತಿ ನೀಡಿದ್ದರು.

Latest Videos

ಪ್ಯಾನ್-ಆಧಾರ್ ಲಿಂಕ್ ಮಾಡಲು ಪ್ರಯತ್ನಿಸುತ್ತಿದ್ದೀರಾ? ದಂಡ ಪಾವತಿಸೋದು ಹೇಗೆ, ಎಲ್ಲಿ ಗೊತ್ತಾಗ್ತ ಇಲ್ವಾ? ಇಲ್ಲಿದೆ ಮಾಹಿತಿ

ಈಗ ಎಲ್ಲ ಪ್ಯಾನ್ ಮತ್ತು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡುವವರಿಗೆ 1,000 ರೂ. ದಂಡವನ್ನು ವಿಧಿಸಲಾಗುತ್ತಿದೆ. ಹೀಗೆ ಲಿಂಕ್ ಮಾಡುವ ಅವಧಿ ಕೂಡ ಇದೇ ಮೇ 31ಕ್ಕೆ ಕೊನೆಗೊಳ್ಳಲಿದೆ. ಅಂದರೆ, ಇನ್ನು ಎರಡು ದಿನಗಳು ಮಾತ್ರ ಬಾಕಿಯಿದೆ. ಆದರೂ ಇನ್ನೂ 11 ಕೋಟಿ ಪ್ಯಾನ್ ಕಾರ್ಡ್‌ ಬಳಕೆದಾರರು ತಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡದೇ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಸರ್ಕಾರದಿಂದ ಮಾಹಿತಿ ನೀಡಲಾಗಿದೆ. ಹೀಗೆ, ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದವರ ಪ್ಯಾನ್ ಕಾರ್ಡ್ ಜೂ.1ರಿಂದ ನಿಷ್ಕ್ರಿಯಗೊಳ್ಳಲಿವೆ. ನಂತರ ಪ್ಯಾನ್ ಕಾರ್ಡ್‌ ರಹಿತ ಹಣ ವರ್ಗಾವಣೆಗೆ ಶೇ.20 ತೆರಿಗೆ ವಿಧಿಸಲಾಗುತ್ತದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸುವ ಸಾಧ್ಯತೆ ಇದೆ ಎಂದು ಸರ್ಕಾರದಿಂದ ಸೂಚನೆ ನೀಡಲಾಗಿದೆ.

ಪ್ಯಾನ್‌ಗೆ ಆಧಾರ್ ಲಿಂಕ್ ಮಾಡದಿದ್ದರೆ ಏನಾಗುತ್ತದೆ:

  • ಆಧಾರ್ ಲಿಂಕ್ ಆಗದ  ಪ್ಯಾನ್‌ ಕಾರ್ಡ್‌ ನಿಷ್ಕ್ರಿಯಗೊಳ್ಳುತ್ತದೆ.
  • ವಾರ್ಷಿಕ ವರಮಾನದಲ್ಲಿ ಸಾಮಾನ್ಯಕ್ಕಿಂತ ದುಪ್ಪಟ್ಟು ಪ್ರಮಾಣದ (ಶೇ.20) ಟಿಡಿಎಸ್‌ ಕಡಿತಗೊಳ್ಳಲಿದೆ.
  • ಆಧಾರ್ ಲಿಂಕ್ ಆಗದ ಪ್ಯಾನ್ ಕಾರ್ಡ್ ಬಳಕೆದಾರರ ಐಟಿ ರಿಟರ್ನ್ಸ್ ರಿಪೋರ್ಟ್ (ಐಟಿಆರ್) ತಿರಸ್ಕೃತಗೊಳ್ಳಲಿದೆ.
  • ಸರ್ಕಾರ ವಿಧಿಸುವ ದುಬಾರಿ ದಂಡ ಪಾವತಿಸಿ ಪ್ಯಾನ್ ಸಕ್ರಿಯ ಮಾಡಿಕೊಳ್ಳಬೇಕಾಗುತ್ತದೆ.
  • ಪ್ಯಾನ್‌ಗೆ ಆಧಾರ್ ಲಿಂಕ್ ಮಾಡಿಸದ ಜನರು ಬ್ಯಾಂಕ್‌ನಲ್ಲಿ 1 ಲಕ್ಷ ರೂ. ವರ್ಗಾವಣೆ ಮಾಡಿದರೆ 20,000 ರೂ. ಹಣ ತೆರಿಗೆ ರೂಪದಲ್ಲಿ ಕಡಿತವಾಗಲಿದೆ.

ಚಿಕನ್ ಸುಕ್ಕಾ ಮಾಡಲು ತಲೆ ಕತ್ತರಿಸಿದರೂ 18 ತಿಂಗಳು ಬದುಕಿದ ಫಾರಂ ಕೋಳಿ

ಪ್ಯಾನ್ ಕಾರ್ಡ್‌ಗೆ ಆಧಾರ್ ನಂಬರ್ ಲಿಂಕ್ ಮಾಡುವುದು ಹೇಗೆ?
ನೀವು ಮೊದಲು ಆದಾಯ ತೆರಿಗೆಯ ಇ-ಫೈಲಿಂಗ್ ಪೋರ್ಟಲ್ https://incometaxindiaefiling.gov.in/ಗೆ ಭೇಟಿ ನೀಡಿ.
ಅಲ್ಲಿ ತೋರಿಸುವ 'ಕ್ವಿಕ್ ಲಿಂಕ್ಸ್' (Quick Links) ಅಡಿಯಲ್ಲಿ ಇರುವ 'ಲಿಂಕ್‌ ಆಧಾರ್‌' (Link Aadhaar) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಅಲ್ಲಿ ನಿಮ್ಮ ಪ್ಯಾನ್‌ ಮತ್ತು ಆಧಾರ್‌ ಕಾರ್ಡ್ ಮೇಲಿರುವ ಸಂಖ್ಯೆಗಳನ್ನು ನಮೂದಿಸಿ.
ಪ್ರಸ್ತುತ ಮೇ 31ರೊಳಗೆ ದಂಡ ಪಾವತಿಸಲು 'Continue to Pay Through e-Pay Tax' ಎಂಬುದನ್ನು ಕ್ಲಿಕ್‌ ಮಾಡಿ.
ಮುಂದೆ ಕಾಣಿಸುವ ಪೇಜ್‌ನಲ್ಲಿ ನಿಮ್ಮ ಪ್ಯಾನ್‌ ಸಂಖ್ಯೆ ನಮೂದಿಸಿ, ಅದನ್ನು ಖಚಿತಪಡಿಸಿಕೊಂಡು ಒಟಿಪಿ ಪಡೆಯುವ ಮೊಬೈಲ್ ನಂಬರ್ ನಮೂದಿಸಿ.
ಮೊಬೈಲ್‌ಗೆ ಬಂದ ಒಟಿಪಿ ಪರಿಶೀಲನೆಯ ನಂತರ, ತೋರಿಸುವ ಇ-ಪೇ ಟ್ಯಾಕ್ಸ್‌ ಪೇಜ್‌ (e-Pay Tax) ಪುಟ ತೆರೆದುಕೊಳ್ಳುತ್ತದೆ.
ಆಗ ಇನ್‌ಕಂ ಟ್ಯಾಕ್ಸ್‌ (Income Tax) ಪೇಜ್‌ನ ಮೇಲಿರುವ ಪ್ರೊಸೀಡ್‌ (Proceed) ಆಪ್ಸನ್ ಮೇಲೆ ಕ್ಲಿಕ್‌ ಮಾಡಿ.
ನಂತರ ತೋರಿಸುವ ಹಣದ ಮೊತ್ತವನ್ನು ಪಾವತಿಸಿಬಹುದು.

click me!