ಸ್ವಾತಂತ್ರ್ಯ ಕುರಿತು ವಿವಾದಾತ್ಮಕ ಹೇಳಿಕೆ: ಕಂಗನಾ ವಿರುದ್ಧ 7 ಪುಟಗಳ ದೂರು ದಾಖಲು!

By Suvarna NewsFirst Published Nov 17, 2021, 12:18 PM IST
Highlights

*ಸ್ವಾತಂತ್ರ್ಯ ಹೋರಾಟದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕಂಗನಾ
*ಹಲವು ರಾಜಕೀಯ ನಾಯಕರಿಂದ ಕ್ಷಮೆ ಕೇಳುವಂತೆ ಆಗ್ರಹ
*ರಾಜಸ್ಥಾನದ ಜೈಪುರದಲ್ಲಿ 7 ಪುಟಗಳ ದೂರು ದಾಖಲು
*ಕಂಗನಾ ಬಿಟ್ಟು ಎಲ್ಲರು ಸ್ವಾತಂತ್ರ್ಯ ಗೌರವಿಸುತ್ತಾರೆ ಎಂದು ಕಾಂಗ್ರೆಸ್‌ ನಾಯಕ

ಜೈಪುರ್(ನ.17): ಪದ್ಮಶ್ರೀ ಪುರಸ್ಕೃತ  ನಟಿ ಕಂಗನಾ ರಾಣಾವತ್‌ (Kangana Ranaut) ಅವರ ‘ಭಾರತಕ್ಕೆ ನೈಜ ಸ್ವಾತಂತ್ರ್ಯ ದೊರಕಿದ್ದು 2014ರಲ್ಲಿ, 1947ರಲ್ಲಿ ನಮಗೆ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಭಿಕ್ಷೆ’ ಎಂಬ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಪಕ್ಷ ಭೇದವಿಲ್ಲದೆ ಹಲವಾರು ರಾಜಕೀಯ ನಾಯಕರು ಕಂಗನಾ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಂಗನಾ ಹೊರತುಪಡಿಸಿ ಇಡೀ ದೇಶವು ಈ ಸ್ವಾತಂತ್ರ್ಯವನ್ನು ಗೌರವಿಸುತ್ತದೆ ಎಂದು  ರಾಜಸ್ಥಾನದ ಕಾಂಗ್ರೆಸ್  ನಾಯಕ ಅಶೋಕ  ಶರ್ಮಾ ಹೇಳಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಈ ವಿಷಯ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಂಗನಾ ಹೇಳಿಕೆಗೆ ಹಲವು ರಾಜಕೀಯ ಮತ್ತು ಇತರ ನಾಯಕರು ತಿರುಗೇಟು ನೀಡುತ್ತಿದ್ದರೆ, ಇತ್ತ ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಬಾಲಿವುಡ್‌ ಬೆಡಗಿ ಕಂಗನಾ ಮತ್ತಷ್ಟು ವಿವಾದಗಳನ್ನು (Contraversy) ಸೃಷ್ಟಿಸುತ್ತಿದ್ದಾರೆ. ಈಗಾಗಲೇ ಕಂಗನಾ ವಿರುದ್ಧ ದೇಶಾದ್ಯಂತ  ಅನೇಕರು ದೂರುಗಳನ್ನು ನೀಡಿದ್ದಾರೆ.

ರಾಜಸ್ಥಾನದಲ್ಲಿ ಏಳು ಪುಟಗಳ ದೂರು!

ಇದಕ್ಕೆ ಪೂರಕವೆಂಬಂತೆ ರಾಜಸ್ಥಾನದಲ್ಲಿ  ವೈಶಾಲಿ ನಗರ (Vaishali Nagar) ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರು ಏಳು ಪುಟಗಳ ದೂರನ್ನು ನೀಡಿದ್ದಾರೆ. ವೈಶಾಲಿ ನಗರ ಬ್ಲಾಕ್ ಕಾಂಗ್ರೆಸ್ (Congress) ಸಮಿತಿ ಅಧ್ಯಕ್ಷ ಅಶೋಕ್ ಶರ್ಮಾ (Ashok Sharma) ದೂರು ದಾಖಲಿಸಿದ್ದಾರೆ. ಚಿತ್ರನಟಿ ಕಂಗನಾ ರಣಾವತ್ ನೀಡಿರುವ ಹೇಳಿಕೆ ವಿವಾದಾತ್ಮಕವಾಗಿದೆ ಎಂದು ಏಳು ಪುಟಗಳ ದೂರಿನಲ್ಲಿ ತಿಳಿಸಲಾಗಿದೆ. ಈ ಹೇಳಿಕೆಯು ದೇಶವಿರೋಧಿಯಾಗಿದ್ದು, ಪ್ರತಿಯೊಬ್ಬ ಭಾರತೀಯ (Indian) ಪ್ರಜೆಗೂ ನೋವುಂಟು ಮಾಡಿದೆ. ಕಂಗನಾ ವಿರುದ್ಧ ದೇಶದ್ರೋಹ (disloyalty) ಮತ್ತಿತರ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಕಂಗನಾ ರಣಾವತ್ ಸಂವಿಧಾನಕ್ಕೆ (Constitution) ಅವಮಾನ ಮಾಡುವಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಹಾಗೂ ತಪ್ಪು ದಾರಿಯಲ್ಲಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ದೂರಿನಲ್ಲಿ ಬರೆಯಲಾಗಿದೆ. 

ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುವುದನ್ನು ಸಹಿಸುವುದಿಲ್ಲ!

ವೈಶಾಲಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಶರ್ಮಾ ಮಾತನಾಡಿ, ಈ ಹೇಳಿಕೆ ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಸ್ವಾತಂತ್ರ್ಯ ಹೋರಾಟಗಾರರನ್ನೂ ಅವಮಾನಿಸಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರು ವರ್ಷಗಟ್ಟಲೆ ಆಂದೋಲನಗಳನ್ನು ನಡೆಸಿದ್ದಾರೆ. ಜತಗೆ ಜೈಲಿಗೆ ಹೋಗಿ ಎಲ್ಲ ರೀತಿಯಲ್ಲೂ ಪ್ರತಿಭಟಿಸಿದ್ದಾರೆ. ಈ ಸ್ವಾತಂತ್ರ್ಯವನ್ನು ಭಿಕ್ಷಾಟನೆಯಲ್ಲಿ ಪಡೆದ ಸ್ವಾತಂತ್ರ್ಯ ಎಂದು ಕಂಗನಾ ಬಣ್ಣಿಸುತ್ತಿದ್ದಾರೆ. ಮಹಾತ್ಮ ಗಾಂಧೀಜಿ (Mahatma Gandhi) , ನೆಹರೂ ಅವರಿಂದ ಹಿಡಿದು ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಸೇರಿದಂತೆ ಅನೇಕ ವ್ಯಕ್ತಿಗಳು ತಮ್ಮ ಇಡೀ ಜೀವನವನ್ನು ಸ್ವಾತಂತ್ರ್ಯಕ್ಕಾಗಿ ಅರ್ಪಿಸಿದ್ದಾರೆ. ಕಂಗನಾ ಹೊರತುಪಡಿಸಿ ಇಡೀ ದೇಶವು ಈ ಸ್ವಾತಂತ್ರ್ಯವನ್ನು ಗೌರವಿಸುತ್ತದೆ ಎಂದು ಶರ್ಮಾ ಹೇಳಿದ್ದಾರೆ. ಅವರ ವಿರುದ್ಧ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸ್ವಾತಂತ್ರ್ಯ ಪಡೆದದ್ದಲ್ಲ, ಬ್ರಿಟೀಷರು ಕೊಟ್ಟಿದ್ದು : ಕಂಗನಾ ಹೇಳಿಕೆ ಸರಿ ಎಂದ ಚಿತ್ರನಟ!

ಕಂಗನಾ  ಹೇಳಿಕೆಯ ನಂತರ ಅವರ ವಿರುದ್ಧ ದೇಶಾದ್ಯಂತ  ಹಲವು ಪ್ರಕರಣಗಳು ದಾಖಲಾಗಿವೆ. ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ ಈಗ ಪ್ರಕರಣ ದಾಖಲಾಗಿದ್ದು ಕಂಗನಾ ಕ್ಷಮೆ ಕೇಳುವಂತೆ  ಕಾಂಗ್ರೆಸ್‌ ಆಗ್ರಹಿಸಿದೆ. ಜೈಪುರಕ್ಕೂ ಮುನ್ನ ಕಂಗನಾ ವಿರುದ್ಧ ಕಾಂಗ್ರೆಸ್ ಹಲವು ಪ್ರಕರಣಗಳನ್ನು ದಾಖಲಾಗಿವೆ. ರಾಜ್ಯ ಮಹಿಳಾ ಕಾಂಗ್ರೆಸ್ ಕರೆಯ ಮೇರೆಗೆ ನಗರ ಶಾಸಕ ಹಾಗೂ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಮನಿಷಾ ಪನ್ವಾರ್ ಹಾಗೂ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಜೋಧಪುರದ ಶಾಸ್ತ್ರಿನಗರ ಪೊಲೀಸ್ ಠಾಣೆಯಲ್ಲಿ ಕಂಗನಾ ರಣಾವತ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಚುರು ಮತ್ತು ಉದಯಪುರದಲ್ಲಿ ಪ್ರಕರಣಗಳು ದಾಖಲಾಗಿವೆ.

click me!