Bhagwat Karad: ಖುದ್ದು ಚಿಕಿತ್ಸೆ ನೀಡಿ ಅಸ್ವಸ್ಥ ಪ್ರಯಾಣಿಕನ ಜೀವ ಉಳಿಸಿದ ಕೇಂದ್ರ ಸಚಿವ

Suvarna News   | Asianet News
Published : Nov 17, 2021, 11:08 AM ISTUpdated : Nov 17, 2021, 11:15 AM IST
Bhagwat Karad: ಖುದ್ದು ಚಿಕಿತ್ಸೆ ನೀಡಿ ಅಸ್ವಸ್ಥ ಪ್ರಯಾಣಿಕನ ಜೀವ ಉಳಿಸಿದ ಕೇಂದ್ರ ಸಚಿವ

ಸಾರಾಂಶ

Bhagwat Karad : ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಅಸ್ವಸ್ಥ ಖುದ್ದು ಪ್ರಯಾಣಿಕನಿಗೆ ಚಿಕಿತ್ಸೆ ನೀಡಿದ ಜೀವ ಉಳಿಸಿದ ಕೇಂದ್ರ ಸಚಿವ ಸಚಿವರೊಳಗಿನ ವೈದ್ಯ ಜಾಗೃತನಾಗಿ, ಉಳಿಯಿತು ಪ್ರಯಾಣಿಕನ ಜೀವ ಕೇಂದ್ರ ಸಚಿವರ ಸರಳತೆ, ತಕ್ಷಣದ ಸ್ಪಂದನೆಗೆ ಭಾರೀ ಪ್ರಶಂಸೆ

ದೆಹಲಿ(ನ.17): ಸ್ಥಾನ, ಮಾನ, ಪದವಿ ಏನೇ ಇರಲಿ. ಕೊನೆಗೆ ಯಾವುದೇ ವ್ಯಕ್ತಿಯಲ್ಲಿ ಇರಬೇಕಾದ ಮಾನವೀಯ ಗುಣ ಸರ್ವರ ಮೆಚ್ಚುಗೆ ಪಡೆಯುತ್ತದೆ. ಇದೀಗ ಕೇಂದ್ರ ಸಚಿವರ ಸರಳ ಮಾನವೀಯ ಗುಣ ಎಲ್ಲೆಡೆ ಸುದ್ದಿಯಾಗಿದೆ. ಸೆಲೆಬ್ರಿಟಿಗಳು ಗಣ್ಯರು ಖಾಸಗಿಯಾಗಿ ಲಕ್ಷುರಿಯಾಗಿ ಓಡಾಡುವ ಜಮಾನದಲ್ಲಿ ಸಾಮಾನ್ಯರಾಗಿ ಇಂಡಿಗೋ ಹತ್ತಿದ್ದೇ ವಿಶೇಷ. ಅದರಲ್ಲೂ ವಿಮಾನದಲ್ಲಿ ಸಚಿವರ ಸಮಯೋಚಿತವಾದ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ತಿಳಿಸುತ್ತಿದ್ದಾರೆ.

ಕೇಂದ್ರ ಸಚಿವ ಡಾ. ಭಾಗವತ್ ಕೃಷ್ಣ ರಾವ್ ಕರದ್ ಅವರು ಅಸ್ವಸ್ಥನಾಗಿದ್ದ ಸಹ ಪ್ರಯಾಣಿಕನಿಗೆ ಸಮಯೋಚಿತ ಚಿಕಿತ್ಸೆ ನೀಡಿದ ಜೀವ ಉಳಿಸಿ ಈಗ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರಿಗೆ ತುರ್ತು ಆರೋಗ್ಯ ಸೇವೆ ನೀಡಿದ್ದರು ಸಚಿವ. ಈ ಘಟನೆ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದರು, ಮನಸಿನಲ್ಲಿ ಅವರು ಯಾವಾಗಲೂ ವೈದ್ಯರೇ.. ಗ್ರೇಟ್. ನನ್ನ ಸಹುದ್ಯೋಗಿಯ ಉನ್ನತ ಕಾರ್ಯ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

Audit Diwas| 'ಹಿಂದಿನ ಸರ್ಕಾರಗಳ ಸತ್ಯ ನಾವು ಪ್ರಾಮಾಣಿಕವಾಗಿ ಇಟ್ಟುಕೊಂಡಿದ್ದೇವೆ

ಭಾಗವತ್ ಕರದ್ ಅವರು ಇಂಡಿಗೋ ವಿಮಾನ 6E 171 ರಲ್ಲಿ ದೆಹಲಿಯಿಂದ ಮುಂಬೈಗೆ ಪ್ರಯಾಣಿಸುತ್ತಿದ್ದರು. ಟೇಕ್ ಆಫ್ ಆದ ಸರಿಸುಮಾರು ಒಂದು ಗಂಟೆಯ ನಂತರ ಪ್ರಯಾಣಿಕರೊಬ್ಬರಲ್ಲಿ ತೀವ್ರ ಅಸ್ವಸ್ಥತೆ ಕಾಣಿಸಿಕೊಂಡಿದೆ. ಕ್ಯಾಬಿನ್ ಸಿಬ್ಬಂದಿ ತಕ್ಷಣ ವಿಮಾನದಲ್ಲಿದ್ದ ವೈದ್ಯರನ್ನು ಸಹಾಯಕ್ಕೆ ಕರೆದಿದ್ದಾರೆ. ಈ ಸಂದರ್ಭ ಪರಿಸ್ಥತಿ ಕಂಡಂತಹ ವೃತ್ತಿಯಲ್ಲಿ ವೈದ್ಯರಾಗಿರುವ ಸಚಿವ ಭಾಗವತ್ ಕರದ್ ಸಹಾಯಕ್ಕೆ ಧಾವಿಸಿದ್ದಾರೆ. ಕೇಂದ್ರ ಸಚಿವರು ಕೆಲವು ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆ ನೀಡಿದ್ದಾರೆ. ವಿಮಾನದ ತುರ್ತು ಕಿಟ್‌ನಲ್ಲಿ ಲಭ್ಯವಿರುವ ಇಂಜೆಕ್ಷನ್ ಅನ್ನು ಸಹ ನೀಡಿದ್ದಾರೆ.

ಒಮ್ಮೆ ಪ್ರಯಾಣಿಕ ತಲೆತಿರುಗುವುದು ಹಾಗೂ ಅಸ್ವಸ್ಥತನಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಡಾ. ಕರದ್ ತಮ್ಮ ಆಸನವನ್ನು ಬಿಟ್ಟು ಪ್ರಯಾಣಿಕರ ಸಹಾಯಕ್ಕೆ ಧಾವಿಸಿದ್ದಾರೆ. ಅವರು ತಮ್ಮ ಪಾದಗಳನ್ನು ಮೇಲಕ್ಕೆತ್ತಲು ಮತ್ತು ಪ್ರತಿ ನಿಮಿಷಕ್ಕೆ ಅವರ ಸ್ಥಾನವನ್ನು ಬದಲಾಯಿಸಲು ಕೇಳುವ ಮೂಲಕ ರೋಗಿಯ ಅಸ್ವಸ್ಥತೆಯನ್ನು ಕಡಿಮೆ ಮಾಡಿದ್ದಾರೆ.

ನಲವತ್ತರ ಆಸುಪಾಸಿನವರೆಂದು ಹೇಳಲಾದ ರೋಗಿಯು ನಂತರ ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ ಮುಂಜಾನೆ 3:20 ಕ್ಕೆ ಸುಮಾರು 45 ನಿಮಿಷಗಳ ನಂತರ ವಿಮಾನವು ಮುಂಬೈನಲ್ಲಿ ಇಳಿಯಿತು. ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ವ್ಯಕ್ತಿಯನ್ನು ಕರೆದೊಯ್ಯಲಾಯಿತು.

Purvanchal Expressway Inauguration| ಸೇನಾ ಸರಕು ವಿಮಾನದಲ್ಲಿ ಮೋದಿ ಲ್ಯಾಂಡಿಂಗ್‌!

ಇಂಡಿಗೋ ಏರ್‌ಲೈನ್ಸ್ ಕೇಂದ್ರ ಸಚಿವರ ಸಹಾಯಕ್ಕಾಗಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇಂಡಿಗೋ ಟ್ವೀಟ್ ಮಾಡಿ ಸಚಿವರ ಕರ್ತವ್ಯಗಳನ್ನು ತಡೆರಹಿತವಾಗಿ ನಿರ್ವಹಿಸಿದ್ದಕ್ಕಾಗಿ ನಮ್ಮ ಹೃತ್ಪೂರ್ವಕ ಕೃತಜ್ಞತೆ. ನಮ್ಮ ಕಡೆಯಿಂದ ನಿಮ್ಮ ಕಾರ್ಯಕ್ಕೆ ಪ್ರಾಮಾಣಿಕ ಮೆಚ್ಚುಗೆಗಳು! ಡಾ. ಭಾಗವತ್ ಕರದ್, ಸಹ ಪ್ರಯಾಣಿಕರಿಗೆ ಸಹಾಯ ಮಾಡಿದ ನಿಮ್ಮ ಸ್ವಯಂಪ್ರೇರಿತ ನೆರವಿನ ಗುಣ ಸ್ಫೂರ್ತಿದಾಯಕವಾಗಿದೆ ಎಂದಿದ್ದಾರೆ.

ಡಾ ಭಾಗವತ್ ಕರದ್ ಅವರು ಜುಲೈ 2021 ರಲ್ಲಿ ನರೇಂದ್ರ ಮೋದಿ ಸಂಪುಟಕ್ಕೆ ಹಣಕಾಸು ಖಾತೆಯ ರಾಜ್ಯ ಸಚಿವರಾಗಿ ಸೇರಿದ್ದಾರೆ. ಅವರು ಮಹಾರಾಷ್ಟ್ರದಿಂದ ಸಂಸತ್ತಿನ ರಾಜ್ಯಸಭಾ ಸದಸ್ಯರಾಗಿದ್ದಾರೆ.

ಡಾ. ಭಾಗವತ್ ಕಿಸನ್ರಾವ್ ಕರದ್ ಅವರು ವೈದ್ಯರು ಹಾಗೂ ಬಿಜೆಪಿ ರಾಜಕಾರಣಿ. ಅವರು ಎರಡು ಬಾರಿ ಔರಂಗಾಬಾದ್‌ನ ಮೇಯರ್ ಆಗಿದ್ದರು. ಎರಡನೇ ಅವಧಿಯಲ್ಲಿ ಪ್ರಧಾನಿ ಮೋದಿಯವರ ಸಂಪುಟ ಪುನಾರಚನೆಯಲ್ಲಿ ಅವರು ಹಣಕಾಸು ಸಚಿವಾಲಯದ ರಾಜ್ಯ ಸಚಿವರಾಗಿ ಆಯ್ಕೆಯಾದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್
India Latest News Live: ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್