
ನವದೆಹಲಿ: ಉತ್ತರ ಭಾರತದಲ್ಲಿ ವರುಣಾರ್ಭಟ ಮುಂದುವರಿದಿದ್ದು ಹಿಮಾಚಲಪ್ರದೇಶ, ಉತ್ತರಾಖಂಡ, ಪಂಜಾಬ್‌ನಲ್ಲಿ ಮಳೆ ಸಂಬಂಧಿ ದುರ್ಘಟನೆಗೆ ಮತ್ತೆ 7 ಜನರು ಬಲಿಯಾಗಿದ್ದಾರೆ. ಭಾರೀ ಮಳೆಯಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ಥವಾಗಿದೆ. ಮೂರೂ ರಾಜ್ಯಗಳ ಬಹುತೇಕ ಸ್ಥಳಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
76 ವರ್ಷದ ಅಧಿಕ ಮಳೆ:
ಹಿಮಾಚಲದಲ್ಲಿ ಆಗಸ್ಟ್‌ನಲ್ಲಿ 25.6 ಸೆಂ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ ಈ ಬಾರಿ 43.1 ಸೆಂ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.68ರಷ್ಟು ಅಧಿಕವಾಗಿದೆ. ಇದು 76 ವರ್ಷಗಳ ದಾಖಲೆಯಾಗಿದೆ. ಈ ಹಿಂದೆ 1927ರಲ್ಲಿ ಅತ್ಯಧಿಕ 54.2 ಸೆಂ.ಮೀ ಮಳೆಯಾಗಿತ್ತು. ರಾಜ್ಯದಲ್ಲಿ ಪ್ರತ್ಯೇಕ ಭೂಕುಸಿತ ಘಟನೆಗಳಿಗೆ ತಂದೆ ಮಗಳು ಸೇರಿ ಮೂವರು ಬಲಿಯಾಗಿದ್ದು, ಮನೆ ಕುಸಿದು ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ.
ಉತ್ತರಾಖಂಡದಲ್ಲಿ 2 ಸಾವು
ಉತ್ತರಾಖಂಡದಲ್ಲಿ ಮಳೆ ಮತ್ತು ಭೂಕುಸಿತದ ಘಟನೆ ಮುಂದುವರೆದಿದ್ದು, ಸೋಮವಾರ ಸೋನ್‌ಪ್ರಯಾಗ್-ಗೌರಿಕುಂಡ ಹೆದ್ದಾರಿಯಲ್ಲಿ ಕಲ್ಲು ಜಾರಿ ಇಬ್ಬರು ವಾಹನ ಸವಾರರು ಬಲಿಯಾಗಿದ್ದಾರೆ. 6 ಜನರು ಗಾಯಗೊಂಡಿದ್ದಾರೆ.
ಪಂಜಾಬ್‌ನಲ್ಲಿ ನಿಲ್ಲದ ಮಳೆ ಅಬ್ಬರ:
ಪಂಜಾಬ್‌ನಲ್ಲಿ ಬಹುತೇಕ ಭಾಗಗಳು ಜಲಾವೃತಗೊಂಡಿವೆ. ಲುಧಿಯಾನದಲ್ಲಿ ಸೋಮವಾರ 21.6 ಸೆಂ.ಮೀ ಮಳೆಯಾಗಿದೆ. ಆಗಸ್ಟ್‌ನಲ್ಲಿ ಪಂಜಾಬ್ 25.3 ಸೆಂ.ಮೀ ಮಳೆ ಕಂಡಿದ್ದು, ಇದು ವಾಡಿಕೆಗಿಂತ ಶೇ.74ರಷ್ಟು ಅಧಿಕವಾಗಿದೆ. ಜೊತೆಗೆ 25 ವರ್ಷಗಳಲ್ಲೇ ಸುರಿದ ಅತ್ಯಧಿಕ ಮಳೆಯಾಗಿದೆ.
ವೈಷ್ಣೋ ದೇವಿ ಯಾತ್ರೆ ಬಂದ್:ಜಮ್ಮು ಕಾಶ್ಮೀರದ ವೈಷ್ಣೋದೇವಿ ಯಾತ್ರೆಯು ಭಾರಿ ಮಳೆ ಹಿನ್ನೆಲೆಯಲ್ಲಿ ಸತತ 7ನೇ ದಿನವೂ ಬಂದ್ ಮಾಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ