
ನವದೆಹಲಿ (ಫೆ. 08): ಚೀನಾ ಗಡಿಯ ಅರುಣಾಚಲ ಪ್ರದೇಶದ (Arunachal Pradesh) ಕಮೆಂಗ್ ವಲಯದಲ್ಲಿ ಪಹರೆ ನಡೆಸುತ್ತಿದ್ದ 7 ಸೇನಾ ಯೋಧರ ಮೇಲೆ ಭಾರೀ ಹಿಮ ಕುಸಿತ ಸಂಭವಿಸಿ ಅವರು ನಾಪತ್ತೆಯಾಗಿರುವ ಘಟನೆ ಭಾನುವಾರ ನಡೆದಿದೆ. ಈ ಸೇನಾ ಸಿಬ್ಬಂದಿ ಗಸ್ತು ಪಡೆಯಲ್ಲಿದ್ದರು. ಈ ವೇಳೆ ಭಾನುವಾರ ಹಿಮಕುಸಿತ ಸಂಭವಿಸಿತು ಎಂದು ಅವು ತಿಳಿಸಿವೆ.‘ಇವರ ಪತ್ತೆಗೆ ಶೋಧಕಾರ್ಯ ನಡೆಯುತ್ತಿದೆ. ವಿಶೇಷ ತಂಡಗಳನ್ನು ಆ ಪ್ರದೇಶಕ್ಕೆ ಏರ್‌ಲಿಫ್ಟ್ ಮಾಡಿ ಶೋಧ ಕಾರ್ಯಕ್ಕೆ ನಿಯೋಜಿಸಲಾಗಿದೆ. ಕಳೆದ ಕೆಲವು ದಿನಗಳಲ್ಲಿ ಈ ಪ್ರದೇಶದಲ್ಲಿ ಭಾರೀ ಹಿಮಪಾತ ಸಂಭವಿಸುತ್ತಿದೆ. ಪ್ರತಿಕೂಲ ಹವಾಮಾನ ಇದೆ’ ಎಂದು ಮೂಲಗಳು ತಿಳಿಸಿವೆ.
ಭಾನುವಾರ ಹಿಮಪಾತ ಸಂಭವಿಸಿ ನಾಪತ್ತೆಯಾಗಿರುವ ಏಳು ಅಧಿಕಾರಿಗಳು ಗಸ್ತು ತಂಡದ ಭಾಗವಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ವಿಶೇಷ ತಂಡಗಳನ್ನು ಏರ್ ಲಿಫ್ಟ್ ಮಾಡಲಾಗಿದೆ. ಕಳೆದ ಕೆಲವು ದಿನಗಳಿಂದ ಭಾರೀ ಹಿಮಪಾತದೊಂದಿಗೆ ಈ ಪ್ರದೇಶವು ಪ್ರತಿಕೂಲ ಹವಾಮಾನಕ್ಕೆ ಸಾಕ್ಷಿಯಾಗಿದೆ" ಎಂದು ತೇಜ್‌ಪುರದ ರಕ್ಷಣಾ ಸಚಿವಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಹರ್ಷವರ್ಧನ್ ಪಾಂಡೆ ತಿಳಿಸಿದ್ದಾರೆ.
ಇದನ್ನೂ ಓದಿ: Galwan Clash: ಗಲ್ವಾನ್ ಕಣಿವೆಯಲ್ಲಿ ಚೀನಾದ ರಹಸ್ಯ ಬಯಲು ಮಾಡಿದ ಆಸೀಸ್ ಪತ್ರಿಕೆ!
ಗಡಿನಾಡಿನ ಹಲವಾರು ಎತ್ತರದ ಪ್ರದೇಶಗಳು ಈ ತಿಂಗಳು ಭಾರೀ ಹಿಮಪಾತಕ್ಕೆ ಸಾಕ್ಷಿಯಾಗುತ್ತಿವೆ. ಇಟಾನಗರ ಬಳಿಯ ಡೇರಿಯಾ ಬೆಟ್ಟವು 34 ವರ್ಷಗಳ ನಂತರ ಹಿಮಪಾತವನ್ನು ಕಂಡಿದೆ ಮತ್ತು ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯ ರೂಪಾ ಪಟ್ಟಣವು ಎರಡು ದಶಕಗಳ ನಂತರ ಹಿಮಪಾತಕ್ಕೆ ಸಾಕ್ಷಿಯಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.
ಉನ್ನತ ಸೇನಾ ಹುದ್ದೆ ಏರಲು ಗಲ್ವಾನ್ ಹುತಾತ್ಮನ ಪತ್ನಿ ಸಜ್ಜು: ದೇಶ ಸೇವೆ ವೇಳೆ ಯೋಧರು ಹುತಾತ್ಮರಾದರೆ, ಅವರ ಪತ್ನಿಯರು ತಾವು ಕೂಡಾ ಸೇನೆ ಸೇರಿ ದೇಶ ಸೇವೆಗೆ ಕೈಜೋಡಿಸುವ ಪರಂಪರೆ ಮುಂದುವರೆದಿದ್ದು, ಈ ಹಾದಿಯಲ್ಲಿ ಇದೀಗ ಗಲ್ವಾನ್ ವೀರ(Galwan brave) ದೀಪಕ್ ಸಿಂಗ್(Naik Deepak Singh) ಅವರ ಪತ್ನಿ ರೇಖಾ ದೇವಿ ಕೂಡಾ ಹೆಜ್ಜೆ ಇಟ್ಟಿದ್ದಾರೆ.
2020ರಲ್ಲಿ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾ ಯೋಧರ ವಿರುದ್ಧ ಹೋರಾಡುವ ವೇಳೆ ಅಪ್ರತಿಮ ಸಾಹಸ ತೋರುತ್ತಲೇ ದೀಪಕ್‌ಸಿಂಗ್ ಸಾವನ್ನಪ್ಪಿದ್ದರು. ಅವರ ಸಾಹಸಕ್ಕೆ ಕೇಂದ್ರ ಸರ್ಕಾರ ಇತ್ತೀಚೆಗೆ ವೀರ ಚಕ್ರ ನೀಡಿ ಗೌರವಿಸಿತ್ತು. ಆ ಗೌರವವನ್ನು ಸ್ವತಃ ಹುತಾತ್ಮ ಯೋಧ ದೀಪಕ್‌ರ ಪತ್ನಿ ರೇಖಾ(Rekha Devi) ಸ್ವೀಕರಿಸಿದ್ದರು.
ಇದ್ನನ್ನೂ ಓದಿ: Terrorists Killed in J&K: ಜೈಶ್ ಕಮಾಂಡರ್ ಝಾಹೀದ್ ವಾನಿ ಸೇರಿ ಐವರು ಉಗ್ರರ ಹತ್ಯೆಗೈದ ಸೇನೆ!
ಇದೀಗ ಪತಿಯ ಹಾದಿಯಲ್ಲೇ ರೇಖಾ ಕೂಡಾ ಸೇನೆಗೆ(Indian Army) ಸೇರ್ಪಡೆಯಾಗಲು ಮುಂದಾಗಿದ್ದಾರೆ. ಈ ಕುರಿತ ಮೊದಲ ಹಂತದ ಕಠಿಣವಾದ ವ್ಯಕ್ತಿತ್ವ ಮತ್ತು ಗುಪ್ತಚರ ಪರೀಕ್ಷೆಯಲ್ಲಿ ರೇಖಾ ಉತ್ತೀರ್ಣರಾಗಿದ್ದಾರೆ. ಮುಂದಿನ ಹಂತದಲ್ಲಿ ಅವರು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಒಳಪಡಬೇಕಿದೆ. ಅದರಲ್ಲಿ ಅವರು ಉತ್ತೀರ್ಣರಾದರೆ ಚೆನ್ನೈನಲ್ಲಿ ಇರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಗೆ (ಒಟಿಎ) ಸೇರುವ ಅವಕಾಶ ಪಡೆಯಲಿದ್ದಾರೆ.
ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಗೆ ಆಯ್ಕೆಯಾದವರಿಗೆ 9 ತಿಂಗಳ ಕಾಲ ಕಠಿಣವಾದ ತರಬೇತಿ ನೀಡಲಾಗುವುದು. ಬಳಿಕ ಅವರನ್ನು ಸೇನೆಯಲ್ಲಿ ಲೆಫ್ಟಿನೆಂಟ್ ಹುದ್ದೆಗೆ ಸೇರಿಸಿಕೊಳ್ಳಲಾಗುವುದು.ಸೇನೆಯಲ್ಲಿ ಮೆಡಿಕಲ್ ಅಸಿಸ್ಟೆಂಟ್ ಆಗಿದ್ದ ದೀಪಕ್ ಸಿಂಗ್, ಗಲ್ವಾನ್ ಹೋರಾಟದ ವೇಳೆ ಗಾಯಗೊಂಡಿದ್ದ ಹಲವು ಭಾರತೀಯ ಸೈನಿಕರಿಗೆ ತಕ್ಷಣವೇ ಚಿಕಿತ್ಸೆ ನೀಡಿ ಅವರ ಜೀವ ಕಾಪಾಡಿದ್ದರು.
ಈ ಹೋರಾಟದ ವೇಳೆ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದ್ದ ಭಾರತೀಯ ಯೋಧರಿಗೆ ಪ್ರಥಮ ಚಿಕಿತ್ಸೆ ನೀಡುವ ವೇಳ ಚೀನಾ ಯೋಧರ ಕಲ್ಲಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು. ದೀಪಕ್ ಸಿಂಗ್ ಮತ್ತು ಅವರ ಪತ್ನಿ ಇಬ್ಬರೂ ಮಧ್ಯಪ್ರದೇಶದ ರೇವಾ ಜಿಲ್ಲೆಯವರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ