RIP Lata Mangeshkar: ಎಷ್ಟೊಂದು ಸುಂದರ ಆ ಬಾಲ್ಯ: ಲತಾರನ್ನು ನೆನೆದ ತಂಗಿ ಆಶಾ!

Published : Feb 08, 2022, 07:36 AM ISTUpdated : Feb 08, 2022, 10:23 AM IST
RIP Lata Mangeshkar: ಎಷ್ಟೊಂದು ಸುಂದರ ಆ ಬಾಲ್ಯ: ಲತಾರನ್ನು ನೆನೆದ ತಂಗಿ ಆಶಾ!

ಸಾರಾಂಶ

*ಅವರ ನಗುವನ್ನು ನಾನು ಜೀವನಪೂರ್ತಿ ಮರೆಯಲ್ಲ *ಖ್ಯಾತ ಗಾಯಕಿಯ ವೈದ್ಯ ಡಾ. ಸಮ್ದಾನಿ ಹೇಳಿಕೆ *ಲತಾರ ಕೊನೆಯ ಘಳಿಗೆಗಳನ್ನು ಬಿಚ್ಚಿಟ್ಟವೈದ್ಯ *ಎಷ್ಟೊಂದು ಸುಂದರ ಆ ಬಾಲ್ಯ: ಲತಾರನ್ನು ನೆನೆದ ತಂಗಿ ಆಶಾ *ಬಾಲ್ಯದ ಫೋಟೋ ಪ್ರಕಟಿಸಿ ಆಶಾ ಭೋಂಸ್ಲೆ ನೆನಪು  

ಮುಂಬೈ (ಫೆ. 08): ಅಕ್ಕ ಲತಾ ಮಂಗೇಶ್ಕರ್‌ ಇಹಲೋಕ ತ್ಯಜಿಸಿದ ಒಂದು ದಿನದ ತರುವಾಯ, ಅಕ್ಕನನ್ನು ನೆನೆಸಿಕೊಂಡು ಸೋದರಿ ಹಾಗೂ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿದ್ದಾರೆ. ‘ಎಷ್ಟೊಂದು ಸುಂದರವಾಗಿದ್ದವು ಆ ಬಾಲ್ಯದ ದಿನಗಳು’ ಎಂದು ಬರೆದಿರುವ ಆಶಾ, ಬಾಲ್ಯದ ಚಿತ್ರವೊಂದನ್ನು ಅದರ ಜತೆ ಲಗತ್ತಿಸಿದ್ದಾರೆ.ಆಶಾ ಅವರ ಜತೆ ತಲೆಯಲ್ಲಿ ಹೂವು ಮುಡಿದುಕೊಂಡು ಕೂತಿರುವ ಲತಾ ಅವರ ಚಿತ್ರ ಅದಾಗಿದೆ. ‘ಎಷ್ಟೊಂದು ಸುಂದರವಾಗಿದ್ದವು ಆ ಬಾಲ್ಯದ ದಿನಗಳು. ನಾನು ಹಾಗೂ ದೀದಿ’ ಎಂದು ಆಶಾ ಅವರು ಚಿತ್ರಕ್ಕೆ ಶೀರ್ಷಿಕೆ ಬರೆದಿದ್ದಾರೆ. 8 ದಶಕಗಳ ಸಂಗೀತ ಜೀವನದಲ್ಲಿ ಆಶಾ ಅವರು ಲತಾ ಜತೆ 50 ಯುಗಳ ಗೀತೆಗಳನ್‌ನು ಹಾಡಿದ್ದಾಎ. ‘ಮೈ ಚಲೀ ಮೈ ಚಲೀ’, ‘ಮನ್‌ ಕ್ಯೂಂ ಬೆಹೆಕಾ ರೇ’ ಹಾಗೂ ‘ಬಂದ್‌ ಹೋ ಮಿಠ್ಠೀ ತೊ ಲಾಖ್‌ ಕಿ’ ಹಾಡುಗಳು ಪ್ರಮುಖವಾದವು.

ಅವರ ನಗುವನ್ನು ನಾನು ಜೀವನಪೂರ್ತಿ ಮರೆಯಲ್ಲ: ಲತಾ ಮಂಗೇಶ್ಕರ್‌ ಅವರು ಜೀವನದ ಅಂತಿಮ ಕ್ಷಣಗಳವರೆಗೂ ಹಸನ್ಮುಖಿಯಾಗಿಯೇ ಇದ್ದರು ಎಂದ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಬ್ರೀಚ್‌ ಕ್ಯಾಂಡಿ ಆಸ್ಪತ್ರೆ ವೈದ್ಯ ಡಾ. ಪ್ರತೀತ್‌ ಸಮ್ದಾನಿ ಹೇಳಿದ್ದಾರೆ. ಲತಾ ಅವರ ಕೊನೆಯ ಘಳಿಗೆಗಳ ಬಗ್ಗೆ ಮಾತಾಡಿದ ಡಾ. ಸಮ್ದಾನಿ, ‘ನನ್ನ ಜೀವನಪೂರ್ತಿ ನಾನು ಲತಾ ಅವರನ್ನು ಸ್ಮರಿಸುತ್ತೇನೆ. ತಮ್ಮ ಕೊನೆಯ ಕ್ಷಣಗಳವರೆಗೂ ಅವರು ಹಸನ್ಮುಖಿಯಾಗಿಯೇ ಇದ್ದರು’ ಎಂದು ಹೇಳಿದರು.

ಇದನ್ನೂ ಓದಿ: RIP Lata Mangeshkar :' ಅವರ  ಹಾಡು ಕೇಳುವುದೇ ನೆಮ್ಮದಿ'  ಲತಾ ಸ್ಮರಿಸಿದ ಇಮ್ರಾನ್ ಖಾನ್

‘ನಾನು ಲತಾ ಅವರನ್ನು 3 ವರ್ಷದಿಂದ ಉಪಚರಿಸುತ್ತಿದ್ದೆ. ಈ ಹಿಂದೆ ಅನೇಕ ಬಾರಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಾಗ ಚಿಕಿತ್ಸೆ ನೀಡಿ ಗುಣಪಡಿಸಿದ್ದೆ. ಆದರೆ ಈ ಸಲ ಹಾಗಾಗಲಿಲ್ಲ. ದಿನದಿಂದ ದಿನಕ್ಕೆ ಅವರ ಆರೋಗ್ಯ ಸ್ಥಿತಿ ವಿಷಮಿಸುತ್ತಲೇ ಹೋಯಿತು. ಹೀಗಾಗಿ ಅವರನ್ನು ನಾವು ಬದುಕಿಸಲು ಆಗಲಿಲ್ಲ’ ಎಂದು ಡಾ. ಸಮ್ದಾನಿ ಹೇಳಿದರು.

‘ಆರೋಗ್ಯ ಹದಗೆಟ್ಟಕಾರಣ ಅವರಿಗೆ ಜನರನ್ನು ಭೇಟಿ ಆಗಲು ಆಗುತ್ತಿರಲಿಲ್ಲ. ಆದರೆ ನಾವು ಕೊಟ್ಟಚಿಕಿತ್ಸೆಗೆ ಸ್ಪಂದಿಸುತ್ತಿದ್ದರು. ಯಾವ ಚಿಕಿತ್ಸೆಗೂ ಅವರು ಬೇಡ ಎನ್ನದೇ ಸಹಕರಿಸುತ್ತಿದ್ದರು. ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಯಾವ ಚಿಕಿತ್ಸೆಯನ್ನು ವೈದ್ಯರು ನೀಡಬೇಕು ಎನ್ನುತ್ತಿದ್ದರೋ ಆ ಚಿಕಿತ್ಸೆಯನ್ನು ಪಡೆಯಬೇಕು ಎನ್ನುತ್ತಿದ್ದರು’ ಎಂದರು.\

ಸಂಸತ್‌ ಕಲಾಪ 1 ಗಂಟೆ ಮುಂದೂಡಿಕೆ: ಲತಾ ಮಂಗೇಶ್ಕರ್‌ಗೆ ಗೌರವ ಸಲ್ಲಿಸಲು ರಾಜ್ಯಸಭೆ ಮತ್ತು ಲೋಕಸಭೆ ಕಲಾಪಗಳನ್ನು 1 ಗಂಟೆಗಳ ಕಾಲ ಮುಂದೂಡಲಾಗಿತ್ತು. 1 ಗಂಟೆಯ ನಂತರ ಉಭಯ ಸದನಗಳ ಕಲಾಪಗಳು ಆರಂಭವಾದವು.

ಇದನ್ನೂ ಓದಿ: ಮದುವೆ ಆಗಲಿಲ್ಲ, ಉಪ್ಪಿನಕಾಯಿ ತಿನ್ನಲೇ ಇಲ್ಲ; ಸಂಗೀತಕ್ಕಾಗಿ ತಪಸ್ವಿಯಾದ Lata ದೀದಿ!

ಶಿವಾಜಿ ಪಾರ್ಕ್ನಲ್ಲಿ ಲತಾ ಸ್ಮಾರಕಕ್ಕೆ ಬಿಜೆಪಿ ಬೇಡಿಕೆ: ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್‌ ಕದಮ್‌ ಅವರು ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಗಾಯಕಿ ಲತಾ ಮಂಗೇಶ್ಕರ್‌ ಅವರ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಬೇಡಿಕೆ ಸಲ್ಲಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಪತ್ರ ಬರೆದಿರುವ ಅವರು, ಲತಾ ಅವರ ಕೋಟ್ಯಾಂತರ ಅಭಿಮಾನಿಗಳಿಗಾಗಿ ಅವರ ಚಿತೆಗೆ ಅಗ್ನಿಸ್ಪರ್ಶ ಮಾಡಿದ ಜಾಗದಲ್ಲಿ ಸ್ಮಾರಕ ನಿರ್ಮಿಸಿ ಎಂದು ಮನವಿ ಮಾಡಿದ್ದಾರೆ.

ಇಂದೋರ್‌ನಲ್ಲಿ ಲತಾ ಹಾಡುಗಳ ಮ್ಯೂಸಿಯಂ: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಲತಾ ಮಂಗೇಶ್ಕರ್‌ ಅವರ ನೆನಪಿನಲ್ಲಿ ಗಿಡ ನೆಟ್ಟಿದ್ದಾರೆ. ಅವರ ಹುಟ್ಟೂರಾದ ಇಂದೋರ್‌ನಲ್ಲಿ ಅವರ ಹಾಡುಗಳ ಕುರಿತಾದ ವಸ್ತು ಸಂಗ್ರಹಾಲಯವನ್ನು ತೆರೆಯಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಈ ವಸ್ತು ಸಂಗ್ರಹಾಲಯದಲ್ಲಿ ಅವರ ವಿಗ್ರಹವನ್ನು ಸಹ ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.

ಲತಾ ಸೋದರಳಿಯನಿಂದ ಚಿತಾಭಸ್ಮ ಸಂಗ್ರಹ: ಲತಾ ಮಂಗೇಶ್ಕರ್‌ ಅವರ ಸೋದರಳಿಯ ಆದಿನಾಥ್‌ ಮುಂಬೈನ ಶಿವಾಜಿ ಪಾರ್ಕ್ನಿಂದ ಲತಾ ಅವರ ಚಿತಾಭಸ್ಮವನ್ನು ಪಡೆದುಕೊಂಡರು. ಲತಾ ಅವರ ಸಹೋದರ ಹೃದಯನಾಥ್‌ ಮಂಗೇಶ್ಕರ್‌ ಅವರ ಪುತ್ರ ಆದಿನಾಥ್‌ ಅವರಿಗೆ ಚಿತಾಭಸ್ಮವನ್ನು ಹಸ್ತಾಂತರಿಸಲಾಗಿದೆ ಎಂದು ನಗರಸಭೆ ಕಮಿಷನರ್‌ ಕಿರಣ್‌ ದಿಘ್ವಾಕರ್‌ ಹೇಳಿದ್ದಾರೆ.

ಲತಾ ನೆನಪಲ್ಲಿ ಅಂಚೆ ಚೀಟಿ ಬಿಡುಗಡೆ: ಲತಾ ಮಂಗೇಶ್ಕರ್‌ ಅವರಿಗೆ ಗೌರವ ಸಲ್ಲಿಸಲು ಅಂಚೆ ಚೀಟಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಸೋಮವಾರ ಹೇಳಿದ್ದಾರೆ. ಭಾರತದ ನೈಟಿಂಗೇಲ್‌ ಎಂದೇ ಖ್ಯಾತರಾದ ಲತಾ ಅವರ ಹೆಸರಿನಲ್ಲಿ ಅಂಚೆಚೀಟಿ ಬಿಡುಗಡೆ ಮಾಡುವುದು ಅವರಿಗೆ ಗೌರವ ಸಲ್ಲಿಸುವ ಸೂಕ್ತ ವಿಧಾನವಾಗಿದೆ ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!