Marriage Crime ಡೆಲ್ಲಿ ಮೇಡಂ, ಯುಪಿ ಮೇಡಂ, 18 ಮದ್ವೆಯಾದ ಅಸಾಮಿ ಫೋನ್‌ನಲ್ಲಿ ಪತ್ನಿಯರಿಗಿಟ್ಟಿದ್ದ ಹೆಸರಿದು!

By Suvarna News  |  First Published Feb 22, 2022, 9:26 PM IST
  • ಒಂದಲ್ಲ, ಎರಡಲ್ಲ 18 ಮದುವೆಯಾದ 67ರ ಹರೆಯದ ಅಸಾಮಿ
  • ಇನ್ನೆರಡು ಮದುವೆಗೆ ಮೂಹೂರ್ತ ಫಿಕ್ಸ್, ಅಷ್ಟರಲ್ಲೇ ಅರಸ್ಟ್
  • ಪತ್ನಿ ಕನ್ಫ್ಯೂಸ್ ಆಗದಿರಲು ಡೆಲ್ಲಿ ಮೇಡಂ, ಯುಪಿ ಮೇಡಂ ಹೆಸರು

ನವದೆಹಲಿ(ಫೆ.22): ಡೆಲ್ಲಿ ಮೇಡಂ ಕಾಲಿಂಗ್, ಯುಪಿ ಮೇಡಂ ಕಾಲಿಂಗ್, ಅಸ್ಸಾಂ ಮೇಡಂ ಕಾಲಿಂಗ್...ಅರೇ ಇದೇನು ಅಂತೀರಾ...ಯಾವ ಊರಿನ ಪತ್ನಿ ಕರೆ ಮಾಡುತ್ತಿದ್ದಾರೆ ಅನ್ನೋದು ಕನ್ಫ್ಯೂಸ್ ಆಗಬಾರದು ಎಂದು ಫೋನ್‌ನಲ್ಲಿ ಅಸಾಮಿ ಇಟ್ಟಿದ್ದ ಹೆಸರಿದು. ಅಷ್ಟಕ್ಕೂ ಈ ರೀತಿ ಹೆಸರಿಡಲು ಕಾರಣ ಈತ ಮದುವೆಯಾಗಿದ್ದು ಬರೋಬ್ಬರಿ 18 ಮಂದಿಯನ್ನು. ಇನ್ನೆರಡು ಮದುವೆಗೂ ಮೊದಲು ಪೊಲೀಸರ ಕೈಗೆ ಸಿಕ್ಕಿಬಿದ್ದ. ಹೀಗಾಗಿ ಈತನ ಟ್ವೆಂಟಿ ಟ್ವೆಂಟಿ ಆಟಕ್ಕೆ ಬ್ರೇಕ್ ಬಿದ್ದಿದೆ.

ಈತನ ಹೆಸರು ಬಿಬು ಪ್ರಕಾಶ್ ಸ್ವೈನ್, ವಯಸ್ಸು 67. ಒಡಿಶಾ ಮೂಲವಾದರೂ ಈ ಬಿಬು ಪ್ರಕಾಶ್ ಬ್ರಾಂಚ್ ಇಡೀ ದೇಶದಲ್ಲಿದೆ. ಆದರೆ ವಿವಾಹ ವೆಬ್‌ಸೈಟ್‌ಗಳಲ್ಲಿ ಬಿಬು ಪ್ರಕಾಶ್ ಸ್ವೈನ್ ವಯಸ್ಸು 57. ಅಸಲಿಗೆ ಬಿಬು ಪ್ರಕಾಶ್ ಕಾಯಕ ಮೋಸ ಮಾಡುವುದೇ ಆಗಿದೆ. ಆದರೆ ವೆಬ್‌ಸೈಟ್‌ನಲ್ಲಿ ಈತನ ವೃತ್ತಿ ಡಾಕ್ಟರ್, ಪ್ರೋಫೆಸರ್, ಪ್ಯಾರಾಮಿಲಿಟರಿ ಆಫೀಸರ್, ಪೊಲೀಸ್ ಅಧಿಕಾರಿ..ಹೀಗೆ ಒಂದೆರಡಲ್ಲ. ಇದಕ್ಕೆ ಪೂರಕ ನಕಲಿ ದಾಖಲೆಗಳು ವಿವಾಹ ವೆಬ್‌ಸೈಟ್‌ನಲ್ಲಿದೆ. ಇನ್ನು ಈತನ ಸ್ಯಾಲರಿ ಸರಿಸುಮಾರು 1 ರಿಂದ 2 ಲಕ್ಷ ರೂಪಾಯಿ ಎಂದು ವೆಬ್‌ಸೈಟ್‌ಲ್ಲಿ ನಮೂದಿಸಿದ್ದಾನೆ.ಇನ್ನು ಇದಕ್ಕೆ ಬೇಕಾದ ಐಡಿ ಕಾರ್ಡ್ ಸೇರಿದಂತೆ ಎಲ್ಲವೂ ಈತನ ಬಳಿ ರೆಡಿ ಇದೆ.

Tap to resize

Latest Videos

Davanagere Child Marriage: ದಾವಣಗೆರೆಯಲ್ಲಿ ಬಾಲ್ಯ ವಿವಾಹದಿಂದ 5ನೇ ತರಗತಿ ವಿದ್ಯಾರ್ಥಿಯನ್ನು ಕಾಪಾಡಿದ ಶಿಕ್ಷಕರು

67ರ ಅಜ್ಜನಿಗೆ ಹೆಣ್ಣು ಯಾರು ಕೊಡುತ್ತಾರೆ ಅನ್ನೋ ಪ್ರಶ್ನೆ ಎಲ್ಲರಲ್ಲಿ ಮೂಡಿರುತ್ತೆ. ಇಲ್ಲೇ ಇರೋದು ಜಾಣ್ಮೆ. ಬಿಬು ಪ್ರಕಾಶ್ ಟಾರ್ಗೆಟ್ 40ರ ಹರೆಯದ ಮಹಿಳೆಯರು. ವಿಧವೆಯರು ಸೇರಿದಂತೆ ಸಂಕಷ್ಟದಲ್ಲಿರುವ ಶ್ರೀಮಂತರು. ದೆಹಲಿ, ಉತ್ತರ ಪ್ರದೇಶ, ಅಸ್ಸಾಂ, ಬಿಹಾರ, ಜಾರ್ಖಂಡ್ ಸೇರಿದಂತೆ ದೇಶದ ಬಹುತೇಕ ಎಲ್ಲಾ ಕಡೆಗಳಲ್ಲಿ ಈತನಗೆ ಪತ್ನಿಯರಿದ್ದಾರೆ. 

ಟಾರ್ಗೆಟ್ ಮಾಡಿದ ಮಹಿಳೆ ಊರು, ಜಿಲ್ಲೆಗಳ ಮಾಹಿತಿ ಪಡೆದು ಬಣ್ಣದ ಮಾತುಗಳು, ನಕಲಿ ದಾಖಲೆಗಳನ್ನು ನೀಡಿ ಪಟಾಯಿಸಿಕೊಳ್ಳುತ್ತಾನೆ. ಬಳಿಕ ಆಡಂಬರ, ಅಬ್ಬರವಿಲ್ಲದ ಮದುವೆ. ಹೀಗಾಗಿ ಈ ಅಸಾಮಿ ಎಲ್ಲಿ ಮದುವೆಯಾಗುತ್ತಿದ್ದಾನೆ? ಎಷ್ಟು ಮದುವೆಯಾಗಿದ್ದಾನೆ ಅನ್ನೋ ಸುಳಿವು ಸಿಗುತ್ತಿರಲಿಲ್ಲ.

ಮದುವೆ ಉದ್ದೇಶ ಸೆಕ್ಸ್ ಹಾಗೂ ಹಣ ದೋಚುವುದು. ಮದುವೆಯಾದ ಬಳಿಕ ಒಂದು ವಾರ ಅವರ ಜೊತೆ ತಂಗುತ್ತಾನೆ. ಅಷ್ಟರಲ್ಲಿ ಸ್ನೇಹ ಸಂಪಾದಿಸಿ ತುರ್ತು ಅಗತ್ಯದ ನೆಪ ಹೇಳಿ ಚಿನ್ನಾಭರಣ, ಹಣ ದೋಚುತ್ತಿದ್ದ. ಬಳಿಕ ಪರಾರಿ. ಇನ್ನು ವೈವಾಹಿಕ ಜೀವನದಲ್ಲಿ ಮೊದಲ ನೊಂದಿರುವ ಮಹಿಳೆಯರೇ ಈತನ ಟಾರ್ಗೆಟ್ ಆಗಿರುವ ಕಾರಣ ಬಹುತೇಕರು ಪೊಲೀಸರಿಗೆ ದೂರು ನೀಡಿಲ್ಲ. ಯಾರೊಂದಿಗೆ ಯಾವ ಮಾಹಿತಿಯನ್ನೂ ಬಾಯ್ಬಿಟ್ಟಿಲ್ಲ. ಆದರೆ ಈ ಕುರಿತು ಬಂದ ಒಂದು ದೂರು ಪೊಲೀಸರನ್ನು ಅರ್ಲಟ್ ಮಾಡಿತು.

High Court On Divorce ವಿವಾಹ ವಿಚ್ಚೇದನ ಕುರಿತು ಮಹತ್ವದ ತೀರ್ಪು ನೀಡಿದ ಹೈಕೋರ್ಟ್!

ಇದೇ ಫೆಬ್ರವರಿ ಅಂತ್ಯದಲ್ಲಿ ಒಂದು ಮದುವೆ ಫಿಕ್ಸ್ ಆಗಿತ್ತು. ಮಾರ್ಚ್ ಆರಂಭದಲ್ಲಿ ಇನ್ನೊಂದು ಮದುವೆ ಮಹೂರ್ತ ಕೂಡ ನಿಗದಿಯಾಗಿತ್ತು. ಅಷ್ಟರಲ್ಲೇ ಈ ಆಸಾಮಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪರಾರಿಯಾಗವ ಕಾರಣ ಈತನ ತನ್ನ ಪತ್ನಿಯರ ಹೆಸರನ್ನು ದಿಲ್ಲಿಯಿಂದ ಮದುವೆಯಾದ ಮಹಿಳೆಯ ಹೆಸರನ್ನು ದಿಲ್ಲಿ ಮೇಡಂ, ಉತ್ತರ ಪ್ರದೇಶದಿಂದ ಮದುವೆಯಾದವರ ಮಹಿಳೆ ಹೆಸರನ್ನು ಯುಪಿ ಮೇಡಂ ಎಂಬುದಾಗಿ ಫೋನ್‌ನಲ್ಲಿ ದಾಖಲಿಸುತ್ತಿದ್ದ. ಇದರಿಂದ ಯಾವ ಪತ್ನಿಯರು ಕಾಲ್ ಮಾಡುತ್ತಿದ್ದಾರೆ ಅನ್ನೋದು ಸ್ಪಷ್ಟವಾಗುತ್ತಿತ್ತು.

2021ರಲ್ಲಿ 48ರ ಹರೆಯದ ಮಹಿಳೆ, ಈತನಿಂದ ಮೋಸಕ್ಕೊಳಗಾದ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ಕಳೆದ ಒಂದು ವರ್ಷದಿಂದ ಈತನ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ಇದೀಗ ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 1978ರಲ್ಲಿ ಮೊದಲ ಮದುವೆಯಾಗಿದ್ದ ಬಿಬು ಪ್ರಕಾಶ್ 2002ರಲ್ಲಿ ಎರಡನೇ ಮದುವೆಯಾಗಿದ್ದಾನೆ. 2005ರಿಂದ ಈತನ ಮದುವೆಯಾಗು ವೇಗ ಹೆಚ್ಚಾಗಿದೆ. ಇದೀಗ 18 ಆಗಿದೆ. 19 ಮತ್ತು 20ನೇ ಪ್ರಯತ್ನದಲ್ಲಿದ್ದಾಗ ಪೊಲೀಸ ಅತಿಥಿಯಾಗಿದ್ದಾನೆ.
 

click me!