
ನವದೆಹಲಿ (ಫೆ.22): ಭಾರತಮಾಲಾ ಪರಿಯೋಜನಾ (Bharatmala Pariyojna) ಯೋಜನೆಯಡಿ 4,518.04 ಕೋಟಿ ರೂಪಾಯಿ ಮೌಲ್ಯದ ನಾಲ್ಕು ರಸ್ತೆ ಮೂಲಸೌಕರ್ಯ (road infrastructure ) ಯೋಜನೆಗಳನ್ನು ಸರ್ಕಾರ ಮಂಜೂರು ಮಾಡಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ. ಅನುಮೋದಿತ ಯೋಜನೆಗಳು ಅಸ್ಸಾಂ, ತೆಲಂಗಾಣ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ (National Highway) ನಿರ್ಮಾಣ, ಅಗಲೀಕರಣ ಮತ್ತು ಮೇಲ್ದರ್ಜೆಗೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ಕರ್ನಾಟಕ (Karnataka)ಹಾಗೂ ತೆಲಂಗಾಣ (Telangana ) ನಡುವಿನ 6 ಪಥದ ಗ್ರೀನ್ ಫೀಲ್ಡ್ ಹೆದ್ದಾರಿಗೂ ಒಪ್ಪಿಗೆ ಸಿಕ್ಕಿದೆ.
ಭಾರತಮಾಲಾ ಪರಿಯೋಜನಾ ಅಡಿಯಲ್ಲಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಿಲೇರು ಮದನಪಲ್ಲಿಯಿಂದ NH-71 ರ 4-ಲೇನಿಂಗ್ ನಿರ್ಮಾಣಕ್ಕೆ 1,852.12 ಕೋಟಿ ರೂಪಾಯಿ ಬಜೆಟ್‌ನಲ್ಲಿ ಮಂಜೂರಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಗಡ್ಕರಿ ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಿರುವ ಪೋಸ್ಟ್ ನ ಮೂಲಕ ತಿಳಿಸಿದ್ದಾರೆ. ಕಳೆದ ವಾರ, ಗಡ್ಕರಿ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ
ಅವರನ್ನು ಭೇಟಿಯಾಗಿ ರಾಜ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಸ್ಥಿತಿಯನ್ನು ಪರಿಶೀಲಿಸಿದ್ದರು.
972.06 ಕೋಟಿ ಅಂದಾಜು ವೆಚ್ಚದಲ್ಲಿ ಕರ್ನಾಟಕ ಮತ್ತು ತೆಲಂಗಾಣ ನಡುವೆ NH-150C ಯ ಆರು-ಪಥದ, ಪ್ರವೇಶ ನಿಯಂತ್ರಿತ ಗ್ರೀನ್‌ಫೀಲ್ಡ್ ಹೆದ್ದಾರಿ ವಿಭಾಗದ ನಿರ್ಮಾಣವನ್ನು ಗಡ್ಕರಿ ಘೋಷಿಸಿದರು. ಅಕ್ಟೋಬರ್‌ನಲ್ಲಿ, ಸೊಲ್ಲಾಪುರ-ಕರ್ನೂಲ್-ಚೆನ್ನೈ ಆರ್ಥಿಕ ಕಾರಿಡಾರ್‌ನ ಭಾಗವಾಗಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಯೋಜನೆಗೆ ಟೆಂಡರ್ ಅನ್ನು ಪ್ರಕಟಿಸಿತ್ತು.
ಅಸ್ಸಾಂನಲ್ಲಿ ರೂ 1,694 ಕೋಟಿ ಮೌಲ್ಯದ ಎರಡು ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಸರ್ಕಾರವು ಮಂಜೂರು ಮಾಡಿತು, ಇದರಲ್ಲಿ ರೂ 1,522.91 ಕೋಟಿ ಅಂದಾಜು ವೆಚ್ಚದಲ್ಲಿNH-127B ನಾಲ್ಕು-ಲೇನ್ ನಿರ್ಮಾಣ ಮತ್ತು ಮೇಲ್ದರ್ಜೆಗೆ ಏರಿಸುವ ಯೋಜನೆ ಒಳಗೊಂಡಿದೆ.
2022-23ರ ಕೇಂದ್ರ ಬಜೆಟ್‌ನಲ್ಲಿ ಸರ್ಕಾರವು ರಾಷ್ಟ್ರೀಯ ಹೆದ್ದಾರಿ ಜಾಲವನ್ನು ಆರ್ಥಿಕ ವರ್ಷದಲ್ಲಿ 25,000 ಕಿಲೋಮೀಟರ್‌ಗಳಷ್ಟು ವಿಸ್ತರಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಬಜೆಟ್ ಹಂಚಿಕೆಯನ್ನು ಶೇ.68 ರಷ್ಟು ಏರಿಕೆ ಮಾಡಲಾಗಿದ್ದು, ಪ್ರಸ್ತುತ ಹೆದ್ದಾರಿ ಸಚಿವಾಲಯದ ಬಜೆಟ್ 1.99 ಟ್ರಿಲಿಯನ್‌ಗೆ ಹೆಚ್ಚಿಸಲಾಗಿದೆ.
Nitin Gadkari : ರಿಲಯನ್ಸ್ ಟೆಂಡರ್ ತಿರಸ್ಕರಿಸಿ 2 ಸಾವಿರ ಕೋಟಿ ಉಳಿಸಿದ್ದೆ!
ಏನಿದು ಭಾರತಮಾಲಾ ಪರಿಯೋಜನಾ?
ಭಾರತದ ಈವರೆಗಿನ ಅತೀದೊಡ್ಡ ಮೂಲಸೌಕರ್ಯ ಯೋಜನೆ ಭಾರತಮಾಲಾ ಪರಿಯೋಜನಾ. 2017ರಲ್ಲಿ ಇದನ್ನು ಆರಂಭಿಸಲಾಗಿತ್ತು ಇದರ ಮೂಲ ಉದ್ದೇಶ ದೇಶದ 600 ಜಿಲ್ಲೆಗಳನ್ನು ಸಂಪರ್ಕಿಸುವ 34,800 ಕಿಲೋಮೀಟರ್ ಉದ್ದದ ಭಾರತದ ರಾಷ್ಟ್ರೀಯ ಹೆದ್ದಾರಿ ಜಾಲವನ್ನು ಉನ್ನತೀಕರಣ ಮಾಡುವುದಾಗಿತ್ತು. ಇದರಲ್ಲಿ 24, 800 ಕಿಲೋಮೀಟರ್ ಉದ್ದದ ಎಕ್ಸ್ ಪ್ರೆಸ್ ಹೆದ್ದಾರಿಗಳ ಅಭಿವೃದ್ಧಿಯೂ ಸೇರಿವೆ. ಕರಾವಳಿ-ಬಂದರುಗಳ ಸಂಪರ್ಕ, ಗಡಿಪ್ರದೇಶಗಳು ಹಾಗೂ ಅಂತಾರಾಷ್ಟ್ರೀಯ ಸಂಪರ್ಕವನ್ನು ಹೆಚ್ಚಿಸುವ ಉದ್ದೇಶ ಇದರದಾಗಿದೆ. 34,800 ಕಿಲೋಮೀಟರ್ ಹೆದ್ದಾರಿಯನ್ನು ಉನ್ನತೀಕರಣದೊಂದಿಗೆ 10ಸಾವಿರ ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ಯೋಜನೆಗಳೂ ಏಕಕಾಲದಲ್ಲಿ ನಡೆಯುತ್ತಿದೆ.
Highway Construction ಪ್ರತಿ ದಿನ 40 ಕಿ.ಮೀ ಹೆದ್ದಾರಿ ನಿರ್ಮಾಣ, ದಾಖಲೆ ಬರೆದ ನಿತಿನ್ ಗಡ್ಕರಿ!
ಸವಾಲಿನ ಯೋಜನೆಗಳನ್ನು ಕೈಗೊಂಡಿರುವ ಗಡ್ಕರಿ: ಗಡ್ಕರಿ ಕೈಗೆತ್ತಿಕೊಂಡ ಹಲವು ಯೋಜನೆಗಳಲ್ಲಿ ವಿಶೇಷ ಹಾಗೂ ಅತೀ ಸವಾಲಿನ ಯೋಜನೆ ಮುಂಬೈ ದೆಹಲಿ ಎಕ್ಸ್‌ಪ್ರೆಸ್‌ವೇ. 1,380 ಕಿಲೋಮೀಟರ್ ಉದ್ದರ ಹೆದ್ದಾರಿ 8 ಪಥಗಳನ್ನು ಹೊಂದಿದೆ. ಈ ಹೆದ್ದಾರಿ ದೆಹಲಿ, ಹರ್ಯಾಣ, ರಾಜಸ್ಥಾನ, ಹಾಗೂ ಗುಜರಾತ್ ರಾಜ್ಯಗಳಲ್ಲಿ ಹಾದುಹೋಗಲಿದೆ. ಈ ಪ್ರಯಾಣಕ್ಕೆ 24 ಗಂಟೆ ತೆಗೆದುಕೊಳ್ಳುತ್ತಿತ್ತು. ಆದರೆ ನೂತನ ಎಕ್ಸ್‌ಪ್ರೆಸ್‌ವೇ ಮೂಲಕ 13 ಗಂಟೆಯಲ್ಲಿ ದೆಹಲಿಯಿಂದ ಮುಂಬೈ ತಲುಪಲು ಸಾಧ್ಯವಿದೆ. ಇದರ ಮೊತ್ತ ಬರೋಬ್ಬರಿ 98,000 ಕೋಟಿ ರೂಪಾಯಿ. 2023ರ ವೇಳೆಗೆ ಈ ಹೆದ್ದಾರಿ ಪೂರ್ಣಗೊಳ್ಳಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ