UP Elections: 125 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಉನ್ನಾವೋ ಸಂತ್ರಸ್ತೆ ತಾಯಿ ಹಲವರಿಗೆ ಕಾಂಗ್ರೆಸ್ ಟಿಕೆಟ್!

By Suvarna NewsFirst Published Jan 13, 2022, 1:04 PM IST
Highlights

* ರಂಗೇರಿದ ಉತ್ತರ ಪ್ರದೇಶ ಚುನಾವಣಾ ಕಣ

* ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

* 125 ಅಭ್ಯರ್ಥಿಗಳಲ್ಲಿ 50 ಮಹಿಳೆಯರಿಗೆ ಅವಕಾಶ

ಲಕ್ನೋ(ಜ.13): ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. 125 ಅಭ್ಯರ್ಥಿಗಳನ್ನು ಹೆರಸು ಘೋಷಿಸಲಾಗುತ್ತಿದ್ದು, ಈ ಪೈಕಿ 50 ಮಂದಿ ಮಹಿಳೆಯರಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಪಂಖೂರಿ ಪಾಠಕ್ ನೋಯ್ಡಾದಿಂದ ಟಿಕೆಟ್ ಪಡೆದಿದ್ದಾರೆ. ಅದೇ ಸಮಯದಲ್ಲಿ ಕಾಂಗ್ರೆಸ್ ತನ್ನ ಪಟ್ಟಿಯಲ್ಲಿ ನಟಿ ಮತ್ತು ಕೆಲವು ಮಹಿಳಾ ಪತ್ರಕರ್ತರಿಗೆ ಅವಕಾಶ ನೀಡಿದೆ.

40ರಷ್ಟು ಮಹಿಳೆಯರಿಗೆ ಟಿಕೆಟ್

ಮೊದಲ ಪಟ್ಟಿಯಲ್ಲಿ ಶೇ.40ರಷ್ಟು ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. ಮಹಿಳೆಯರ ಹೆಸರನ್ನು ಘೋಷಿಸಿದ ಪ್ರಿಯಾಂಕಾ ಗಾಂಧಿ, ಈ ಎಲ್ಲಾ ಮಹಿಳೆಯರು ಸ್ಪರ್ಧಿಸುತ್ತಿದ್ದಾರೆಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ಸಿಂಗ್ ಅವರಿಗೂ ಕಾಂಗ್ರೆಸ್ ಟಿಕೆಟ್ ನೀಡಿದೆ. ಅಲ್ಲದೆ 125 ಅಭ್ಯರ್ಥಿಗಳ ಪಟ್ಟಿಯಲ್ಲಿ 50 ಮಂದಿ ಮಹಿಳೆಯರಿದ್ದಾರೆ. ಇಡೀ ರಾಜ್ಯದಲ್ಲಿ ಹೆಣಗಾಡುವ ಮತ್ತು ಹೊಸ ರಾಜಕೀಯಕ್ಕೆ ನಾಂದಿ ಹಾಡುವ ಅಭ್ಯರ್ಥಿಗಳು ಇರಬೇಕು ಎಂದು ನಾವು ಪ್ರಯತ್ನಿಸಿದ್ದೇವೆ ಎಂದೂ ಈ ವೇಳೆ ತಿಳಿಸಿದ್ದಾರೆ.

ಉನ್ನಾವೋ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ಅವಕಾಶ

ನಮ್ಮ ಉನ್ನಾವೋ ಅಭ್ಯರ್ಥಿಯು ಉನ್ನಾವೋ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ತಾಯಿ ಎಂದು ಪ್ರಿಯಾಂಕಾ ತಿಳಿಸಿದ್ದಾರೆ. ಅವರ ಹೋರಾಟ ಮುಂದುವರಿಸಲು ಅವಕಾಶ ನೀಡಿದ್ದೇವೆ. ಯಾವ ಅಧಿಕಾರದ ಮೂಲಕ ತನ್ನ ಮಗಳನ್ನು ದಬ್ಬಾಳಿಕೆಗೆ ಒಳಪಡಿಸಿತ್ತೋ, ಅವಳ ಸಂಸಾರ ಹಾಳಾಯಿತು, ಅವರಿಗೂ ಅದೇ ಅಧಿಕಾರ ಸಿಗಬೇಕು.

ಸೋನಭದ್ರ ಹತ್ಯಾಕಾಂಡದ ಸಂತ್ರಸ್ತರಲ್ಲಿ ಒಬ್ಬರಾದ ರಾಮರಾಜ್ ಗೊಂಡ ಅವರಿಗೂ ಟಿಕೆಟ್ ನೀಡಿದ್ದೇವೆ. ಅಂತೆಯೇ, ಕೊರೋನಾ ಹೋರಾಟದಲ್ಲಿ ಶ್ರಮಪಟ್ಟ ಆಶಾ ಕಾರ್ಯಕರ್ತರನ್ನು ಹೀನಾಯವಾಗಿ ನೋಡಲಾಯ್ತು, ಥಳಿಸಲಾಯ್ತು. ಇವರಲ್ಲಿ ಒಬ್ಬರಾದ ಪೂನಂ ಪಾಂಡೆಗೂ ಟಿಕೆಟ್ ನೀಡಿದ್ದೇವೆ ಎಂದು ಘೋಷಿಸಲಾಗಿದೆ.

ಸಿಎಎ-ಎನ್‌ಆರ್‌ಸಿ ಸಮಯದಲ್ಲಿ ಸದಾಫ್ ಜಾಫರ್ ಸಾಕಷ್ಟು ಹೋರಾಟ ನಡೆಸಿದ್ದರು. ಪೋಸ್ಟರ್‌ನಲ್ಲಿ ಅವರ ಫೋಟೋ ಮುದ್ರಿಸಿ ಸರ್ಕಾರ ಕಿರುಕುಳ ನೀಡಿದೆ. ನಿಮಗೆ ಚಿತ್ರಹಿಂಸೆ ನೀಡಿದರೆ ನಿಮ್ಮ ಹಕ್ಕುಗಳಿಗಾಗಿ ಹೋರಾಡಿ ಎಂಬುದು ನನ್ನ ಸಂದೇಶ. ಅಂತಹ ಮಹಿಳೆಯರೊಂದಿಗೆ ಕಾಂಗ್ರೆಸ್ ಇದೆ ಎಂದು ಕಾಂಗ್ರೆಸ್ ಪ್ರಧಾನ ಸಂಚಾಲಕಿ ತಿಳಿಸಿದ್ದಾರೆ. 

click me!