ಕೋವಿಡ್‌ಗೆ ಮೀಸಲಿಟ್ಟ 35,000 ಕೋಟಿಯಲ್ಲಿ ಲಸಿಕೆಗೆ 9,229 ಕೋಟಿ!

By Suvarna NewsFirst Published Sep 4, 2021, 12:11 PM IST
Highlights

* ಕೋವಿಡ್‌ ನಿರ್ವಹಣೆಗೆಂದು ಕಳೆದ ಬಜೆಟ್‌ನಲ್ಲಿ ಮೀಸಲಿಡಲಾಗಿದ್ದ 35,000 ಕೋಟಿ ರು.

* 9,229 ಕೋಟಿ ರು.ಗಳನ್ನು ಲಸಿಕೆ ಖರೀದಿಸಲು ಬಳಸಲಾಗಿದೆ

ನವದೆಹಲಿ(ಸೆ.04): ಕೋವಿಡ್‌ ನಿರ್ವಹಣೆಗೆಂದು ಕಳೆದ ಬಜೆಟ್‌ನಲ್ಲಿ ಮೀಸಲಿಡಲಾಗಿದ್ದ 35000 ಕೋಟಿ ರು.ಹಣದ ಪೈಕಿ 9229 ಕೋಟಿ ರು.ಗಳನ್ನು ಲಸಿಕೆ ಖರೀದಿಸಲು ಬಳಸಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಗೆ ಮಾಹಿತಿ ನೀಡಿದೆ.

ಸೀರಂ ಮತ್ತು ಮತ್ತು ಭಾರತ್‌ ಬಯೋಟೆಕ್‌ನಿಂದ 21 ಕೋಟಿ ಡೋಸ್‌ ಲಸಿಕೆ ಖರೀದಿಗೆ 4,410 ಕೋಟಿ ರು. ಪಾವತಿಸಲಾಗಿದೆ. ಇದಲ್ಲದೆ ಹೊಸದಾಗಿ ಲಸಿಕೆ ಖರೀದಿಸಲು ಬಯೋಲಾಜಿಕಲ್‌ ಸಂಸ್ಥೆಗೆ 1500 ಕೋಟಿ ರು, ಸಿರಂಗೆ 2251 ಕೋಟಿ ರು. ಮತ್ತು ಭಾರತ್‌ ಬಯೋಟೆಕ್‌ಗೆ 897 ಕೋಟಿ ರು.ಗಳನ್ನು ಮುಂಗಡವಾಗಿ ಪಾವತಿಸಲಾಗಿದೆ.

ಈವರೆಗೆ 64.65 ಕೋಟಿ ಡೋಸ್‌ ಲಸಿಕೆಯನ್ನು ಉಚಿತವಾಗಿ ರಾಜ್ಯ ಮತ್ತು ಕೆಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

click me!