
ಪೂಂಚ್(ಡಿ.11): ಒಂದಂಡೆ ಪಾಕಿಸ್ತಾನ, ಮತ್ತೊಂದೆಡೆ ಚೀನಾ ಗಡಿಯಲ್ಲಿ ತಕರಾರು ಮಾಡುತ್ತಲೇ ಇದೆ. ಗಡಿಯಲ್ಲಿ ಸದಾ ಅಶಾಂತಿ ಸೃಷ್ಟಿಸುವ ಸೃಷ್ಟಿಸುವ ಪಾಕಿಸ್ತಾನ ಇದೀಗ ಮತ್ತೊಂದು ಪ್ರಯತ್ನ ಮಾಡಿ ಕೈಸುಟ್ಟುಕೊಂಡಿದೆ. ಜಮ್ಮ ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಕಳೆದ ರಾತ್ರಿ(ಡಿ.10) ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಸೇನೆ ಸರಿಯಾದ ಉತ್ತರ ನೀಡಿದೆ.
ಉಗ್ರರ ಹೆಡೆಮುರಿ ಕಟ್ಟಲು 200 ಮೀ. ಪಾಕಿಸ್ತಾನ ಗಡಿಯೊಳಕ್ಕೆ ಪ್ರವೇಶಿಸಿದ ಭಾರತೀಯ ಸೇನೆ!..
ಪೂಂಚ್ ಜಿಲ್ಲೆಯ ಮಾನ್‌ಕೋಟ್ ಗಡಿ ಭಾಗದಲ್ಲಿ ಪಾಕಿಸ್ತಾನ ಸೇನೆ ನಾಗರೀಕರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ಹಾಗೂ ಶೆಲ್ ದಾಳಿ ನಡೆಸಿದೆ. ಪಾಕ್ ದಾಳಿಯಿಂದ ಮಾನ್‌ಕೋಟ್ ಭಾರತೀಯ ನಿವಾಸಿಗಳ ಮನೆಗಳು ಧ್ವಂಸಗೊಂಡಿದೆ. ಅದೃಷ್ಠವಶಾತ್ ಗ್ರಾಮಸ್ಥರು ಅಪಾಯದಿಂದ ಪಾರಾಗಿದ್ದಾರೆ.
ಹಿಮಪಾತದಲ್ಲಿ ಸಿಲುಕಿದ ನಾಗರೀಕರ ರಕ್ಷಿಸಲು 5 ಗಂಟೆ ಕಾಲ್ನಡಿಗೆಯಲ್ಲಿ ತೆರಳಿದ ಭಾರತೀಯ ಸೇನೆ!.
ಪಾಕಿಸ್ತಾನ ಸೇನೆಯ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೇನೆ ಪ್ರತಿ ದಾಳಿ ನಡೆಸಿದೆ. ಭಾರತೀಯ ಸೇನೆಯ ದಾಳಿಗೆ ಐವರು ಪಾಕಿಸ್ತಾನಿ ಸೈನಿಕರು ಬಲಿಯಾಗಿದ್ದಾರೆ. ಇನ್ನು ಮೂವರು ಪಾಕ್ ಸೈನಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಮಾನ್‌ಕೋಟ್ ಗಡಿ ಭಾಗದಲ್ಲಿ ಹಲವು ಪಾಕಿಸ್ತಾನ ಸೇನಾ ಬಂಕರ್‌ಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ.
ಸತತ 2 ಗಂಟೆಗಳ ಕಾಲ ಗುಂಡಿನ ದಾಳಿ ನಡೆದಿತ್ತು. ಭಾರತದ ದಾಳಿ ತೀವ್ರಗೊಳ್ಳುತ್ತಿದ್ದಂತೆ ಪಾಕಿಸ್ತಾನ ಹಿಂದಕ್ಕೆ ಸರಿದಿದೆ. ಈ ವರ್ಷ ಹಲವು ಬಾರಿ ಪಾಕಿಸ್ತಾನ 1999ರ ಒಪ್ಪಂದದ ಗಡಿ ನಿಯಮವನ್ನು ಉಲ್ಲಂಘಿಸಿದೆ.
2020 ಜನವರಿಯಿಂದ ಇಲ್ಲೀವರೆಗೆ ಪಾಕಿಸ್ತಾನ 3,200 ಬಾರಿ ಗಡಿ ನಿಯಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಇದರಿಂದ 30 ಭಾರತೀಯ ನಾಗರೀಕರು ಸಾವನ್ನಪ್ಪಿದ್ದರೆ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ